ದೇವಾಲಯಗಳಲ್ಲಿ ಪ್ರಾಣಿಗಳನ್ನು ಬಲಿ ನೀಡದೇ ಸಾತ್ವೀಕವಾಗಿ ಆಚರಿಸೋಣ: ದಯಾನಂದ ಸ್ವಾಮೀಜಿ
ಹನುಮಸಾಗರ 19: ದೇವಾಲಯಗಳಲ್ಲಿ ಪ್ರಾಣಿಗಳನ್ನು ಬಲಿ ನೀಡದೇ ಸಾತ್ವೀಕವಾಗಿ ಆಚರಿಸುವ ಮೂಲಕ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ, ದಯಾನಂದ ಸ್ವಾಮೀಜಿ ಹೇಳಿದರುಸಮೀಪದ ಕುಂಭಳಾವತಿ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ದ್ಯಾಮಾಂಭಿಕಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮೀಸಲಿಟ್ಟಿದ್ದ ಕೋನವನ್ನು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ, ದಯಾನಂದಸ್ವಾಮೀಜಿ ಅವರು ಗ್ರಾಮಸ್ಥರಿಂದ ಕೋನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಗ್ರಾಮದಲ್ಲಿ ಪ್ರಾಣಿ ಬಲಿಯ ಬಗ್ಗೆ ಜಾಗೃತಿ ಸಭೆಯನ್ನು ಮಾಡಿದ ಬಳಿಕ ಗ್ರಾಮಸ್ಥರೆಲ್ಲರು ಸೇರಿ ಬಲಿಗಾಗಿ ಮೀಸಲಿಟ್ಟಿದ್ದ ಕೋನವನ್ನು ಪೋಲಿಸ ಇಲಾಖೆಯ ಅಧಿಕಾರಿಗಳ ಸಮ್ಮೂಖದಲ್ಲಿ ನಮಗೆ ಹಸ್ತಾಂತರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು ಮತ್ತು ಕುಂಭಳಾವತಿ ಗ್ರಾಮವು ಪ್ರಾಣಿ ಬಲಿ ಮುಕ್ತ ಗ್ರಾಮ ಎಂದು ಘೋಷಿಸಿದರು ಮತ್ತು ಗ್ರಾಮದಲ್ಲಿ ಪ್ರತಿ ಮೂರುವರ್ಷಕ್ಕೊಮ್ಮೆ ನಡೆಯುವ ದ್ಯಾಮಮ್ಮ ದೇವಿಯ ಜಾತ್ರೆಯಲ್ಲಿ ಈ ವರ್ಷದಿಂದ ಸಂಪೂರ್ಣವಾಗಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಮನಪರಿವರ್ತನೆಯಿಂದ ಪ್ರಾಣಿ ಬಲಿಯನ್ನು ನೀಡದೇ ಸಾತ್ವಿಕತೆಯಿಂದ ಆಚರಿಸುತ್ತಿರುವುದು ಕಂಡು ಬಂದಿರುತ್ತದೆ ಮತ್ತು ಗ್ರಾಮದಲ್ಲಿ ಸಂಪೂರ್ಣವಾಗಿ ಪ್ರಾಣಿ ಬಲಿ ನಿಂತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸಿಸಿ ಕ್ಯಾಮೇರಾ ಅಳವಡಿಕೆ : ಕುಂಭಳಾವತಿ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀದ್ಯಾಮಾಂಭಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ. ಕೊಪ್ಪಳ ಜಿಲ್ಲಾ ಆಡಳಿತ, ಕುಷ್ಟಗಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಕುಂಬಳಾವತಿ ದ್ಯಾಮಾಂಬಿಕಾ ಜಾತ್ರೆಯಲ್ಲಿ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತವಾಗಿ ವ್ಯಾಪಾಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು,ಮತ್ತು ಕೋನವನ್ನು ಬಲಿ ಕೊಡುತ್ತಾರೆ ಎಂದು ತಿಳಿದು ಬಂದಿದ್ದರಿಂದ ಜಾತ್ರೆಯಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡದೇ ಇರುವ ಹಾಗೆ ತಡೆಯಲು ದೇವಸ್ಥಾನದ ಸುತ್ತ ಸಿಸಿ ಕ್ಯಾಮೇರಾವನ್ನು ಅಳವಡಿಸಿ ಹದ್ದಿನ ಕಣ್ಗಾವಲನ್ನು ಹಾಕಲಾಗಿತ್ತು.
ಈ ಸಂದರ್ಬದಲ್ಲಿ ಪಿಎಸ್‌ಐಗಳಾದ ಧನಂಜಯ, ಬಸಪ್ಪ ಎಎಸ್‌ಐ ವಸಂತ, ಗ್ರಾಮದ ಮುಖಂಡರಾದ ಸುಬ್ಬರಾವ ಕುಲಕರ್ನಿ , ಮುತ್ತಣ್ಣ ನರಸಾಪೂರ , ಹುಲ್ಲಪ್ಪ ವಡಗೇರಿ , ಸಿದ್ದಪ್ಪ ಸೂಡಿ, ರಾಮಪ್ಪ ವಾಲಿಕಾರ, ಯಮನಪ್ಪ ಗುಡಿ, ದ್ಯಾಮಪ್ಪ ಗೋನಾಳ ,ಸುಬ್ಬರಾವ್ ಕುಲಕರ್ಣಿ. ಮುತ್ತಣ್ಣ ನರಸಾಪುರ. ಸಿದ್ದಪ್ಪ ಸೂಡಿ. ಶರಣಪ್ಪ ಜಗ್ಗಲ ಹುಲ್ಲಪ್ಪ ವಡಿಗೇರಿ ಸೂಚಪ್ಪ ಭೋವಿ. ಮರೇಗೌಡ ಬೊದುರ, ಕಾರ್ಯಕರ್ತ ಶರಣಪ್ಪ ಕಮ್ಮಾರ, ಪೋಲಿಸ ಸಿಬ್ಬಂದಿಗಳಾದ ಮಹಿಬೂಬ, ಕರಿಸಿದ್ದಪ್ಪ,ಬ್ರಹ್ಮಾನಂದ, ಗದ್ದಿ, ಸಿದ್ದರಾಮ, ಶರಣಯ್ಯ ಹಾಗೂ ಗ್ರಾಮದ ಗುರು ಹಿರಿಯರು ಸೇರಿದಂತೆ ಗ್ರಾಮಸ್ಥರು ಇದ್ದರು.