ಎಲ್ಲರಿಗೂ ಕಾನೂನು ತಿಳುವಳಿಕೆ ಅಗತ್ಯ; ಮೆಳವಂಕಿ
ನೇಸರಗಿ 26: ಎಲ್ಲರಿಗೂ ಕಾನೂನು ತಿಳುವಳಿಕೆ ಅಗತ್ಯವಿದೆ ಎಂದು ಬೈಲಹೊಂಗಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ. ಆರ್.ಮೆಳವಂಕಿ ಹೇಳಿದರು. ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ನೇಸರಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಎನ್ ಎಸ್ ಎಸ್ ವಾರ್ಷಿಕ ಶಿಬಿರದಲ್ಲಿ ಮಹಿಳೆಯರ ಕಾನೂನುಗಳು ಕುರಿತು ಉಪನ್ಯಾಸ ಮಾತನಾಡಿ, ಮಹಿಳೆಯರ ಕಾನೂನುಗಳ ಬಗ್ಗೆ ಮತ್ತು ಪೋಕ್ಸೋ ಕಾಯ್ದೆ ಕುರಿತು ವಿವರಿಸಿದರು. ನ್ಯಾಯವಾದಿಗಳ ಸಂಘ ಪ್ರಧಾನ ಕಾರ್ಯದರ್ಶಿ ವಿ .ಜಿ ಕಟದಾಳ, ಸಹ ಕಾರ್ಯದರ್ಶಿ ವಿ.ಸಿ .ಪೂಜಾರ ಹಿರಿಯ ನ್ಯಾಯವಾದಿ ಎನ್. ಎಸ್. ದೇಯನ್ನವರ, ಪ್ರಾಚಾರ್ಯ ಡಾ. ಎಫ್. ಡಿ.ಗಡ್ಡಿಗೌಡರ, ಉಪನ್ಯಾಸಕರಾದ ಸುಖದೇವ್ ಚೌತ್ರಿಮಠ , ಮಹಾಂತೇಶ ಅವ್ವಕ್ಕನವರ್, ವಿನಾಯಕ್ ಹೊನ್ನಪ್ಪನವರ, ಡಾ. ಪದ್ಮಾ ಹೊಸಕೋಟೆ , ಉಪನ್ಯಾಸಕರು, ಪದವಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.