ಲೋಕದರ್ಶನ ವರದಿ
ಯಲ್ಲಾಪುರ
: ಹೆಣ್ಣು-ಗಂಡು ಎಂಬ ತಾರತಮ್ಯ ಹೊಗಲಾಡಿಸಿ ಲಿಂಗಾನುಪಾತದ
ಸಮತೋಲನ ಕಾಪಾಡಿಕೊಳ್ಳಬೇಕು ಬ್ರೂಣ ಹತ್ಯೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ತರುವುದು ಕಷ್ಠಕರವಾಗಿದೆ.
ಗಂಡು ಹಾಗೂ ಹೆಣ್ಣುಗಳ ಅನುಪಾತದ ಅಸಮತೋಲನ ಉಂಟಾಗುತ್ತಿದ್ದು, ಇದು ಬ್ರೂಣ ಹತ್ಯೆಯ ಪರಿಣಾಮವಾಗಿದೆ. ಎಂದು ಹಿರಿಯ ಸಿವಿಲ್ ನ್ಯಾಯಾದೀಶ ವಿ.ವಿ.ಜೋಶಿ ಹೇಳಿದರು.
ಅವರು
ಗುರುವಾರ ಪಟ್ಟಣದ ಸಿಡಿಪಿಓ ಕಚೇರಿಯಲ್ಲಿ ಕಾನೂನು
ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ
ಹೆಣ್ಣು ಮಕ್ಕಳ ದಿನಾಚರಣೆ ಬ್ರೂಣ ಹತ್ಯೆ ನಿಷೇಧ ಹಾಗೂ ಹೆಣ್ಣು ಮಕ್ಕಳ ರಕ್ಷಣೆ' ಕುರಿತಾದ ಕಾನೂನು
ನೆರವು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಮಾತನಾಡಿ. ಹುಟ್ಟುವ
ಶಿಶುವಿನ ದೈಹಿಕ ಆರೋಗ್ಯದ ಕುರಿತು ಮಾಹಿತಿ ತಿಳಿಯಲು ಸಂಶೋಧಿಸಿದ ಯಂತ್ರ ಮಾನವನ ಹಣದ ದುರಾಸೆಗೆ ಬಲಿಯಾಗುತ್ತಿರುವ
ಪರಿಣಾಮ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಎಂದರು.
ವಕೀಲ ವಿ.ಟಿ.ಗಾಂವ್ಕರ್ ಬ್ರೂಣ ಹತ್ಯೆ ನಿಷೇಧ ಹಾಗೂ
ಹೆಣ್ಣು ಮಕ್ಕಳ ರಕ್ಷಣೆ ಕುರಿತು ಉಪನ್ಯಾಸ ನೀಡಿ ಮಹಿಳೆಯರು ತಮ್ಮ ರಕ್ಷಣೆಗಾಗಿಇರುವ ಕಾನೂನು ಕಾಯ್ದೆಗಳನ್ನು
ತಿಳಿದುಕೊಳ್ಳಬೇಕು. ದೌರ್ಜನ್ಯದ ವಿರುದ್ದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿವನ್ನು ಹೊಂದುವುದುಅತ್ಯವಶ್ಯಕ.
ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ನೀಡಲು ಮುಂದಾಗಬೇಕು ಎಂದರು. ಸಹಾಯಕ ಸಕರ್ಾರಿ ಅಭಿಯೋಜಕ ಆನಂದ ಕೊಣ್ಣುರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಎಸ್. ಮಂಜುನಾಥ್,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಫಾತಿಮಾ ಚುಳಕಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಕೋಮಾರ್
ಅಧ್ಯಕ್ಷೆ ವಹಿಸಿದ್ದರು.
ಶಂಕರವ್ವ ಭೋವಿ ಸ್ವಾಗತಿಸಿದರು, ಮಹಿಳಾ ಮತ್ತು ಕಲ್ಯಾಣ
ಇಲಾಖೆಯ ಮೇಲ್ವಿಚಾರಕಿಯರಾದ ಈರವ್ವ ಪೂಜಾರ್ ನಿರೂಪಿಸಿದರು,
ಲಕ್ಷ್ಮೀ ಭಟ್ಟ ಚಿಮ್ನಳ್ಳಿ ವಂದಿಸಿದರು.