ಲೋಕದರ್ಶನವರದಿ
ಧಾರವಾಡ16: ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಎಂ. ಆರ್. ಕುಂಭಾರ ದತ್ತಿ ಉಪನ್ಯಾಸ ಮಾಲೆ-4 ರ ಅಂಗವಾಗಿ ದಿ.17ರಂದು ಬುಧವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ``ಧಾರವಾಡ ಮತ್ತು ಪೋರ್ಚಗಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳು'' ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಅತಿಥಿ ಉಪನ್ಯಾಸಕರಾಗಿ ಡಾ. ಅರವಿಂದ ಯಾಳಗಿ, ನಿದರ್ೇಶಕರು, ಇಂಡೋ-ಪೋರ್ಚಗಲ್ ಲಿಟರರಿ ಫೌಂಡೇಶನ್, ಗೋವಾ ಮತ್ತು ಪೋರ್ಚಗಲ್ ಇವರು ಆಗಮಿಸುವರು.
ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ಗ್ರಂಥಾಲಯಾಧಿಕಾರಿಗಳಾದ ಜಿ. ಬಿ. ಹೊಂಬಳ ಅವರು ವಹಿಸುವರು.
ಕ.ವಿ.ವಿ. ಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಸ್. ಎಲ್. ಸಂಗಮ ಅವರು ಉಪಸ್ಥಿತರಿರುವರು.
ಸಾಹಿತಿಗಳು, ಲೇಖಕರು, ಬುದ್ಧಿಜೀವಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾಥರ್ಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಏಪ್ರಿಲ್ ತಿಂಗಳ ದತ್ತಿ ಕಾರ್ಯಕ್ರಮ ಸಂಯೋಜಕರಾದ ಚೈತ್ರಾ ಮೋಹನ ನಾಗಮ್ಮನವರ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.