ಕಲಿಕೆ ಎನ್ನುವುದು ನಿರಂತರ : ಸಿಆರ್‌ಪಿ ಸ್ವಯಂಪ್ರಭಾ
ಕಂಪ್ಲಿ 21: ತಾಲೂಕಿನ ನೆಲ್ಲುಡಿ ಗ್ರಾಪಂಯ ಶಾಂತಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಶುಕ್ರವಾರ ಜರಗಿತು. ಸಿಆರ್‌ಪಿ ಸ್ವಯಂಪ್ರಭಾ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸುವ ಪೂರಕ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ.
ಕಲಿಕೆ ಎನ್ನುವುದು ನಿರಂತರವಾಗಿದೆ. ವೃತ್ತಿ, ಜ್ಞಾನ ಸೇರಿದಂತೆ ಮಕ್ಕ ಉತ್ತಮ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆಸ ಎಂದು ಸಲಹೆ ನೀಡದರು. ನಂತರ ಮುಖ್ಯಗುರು ನಾಗರಾಜ್ ಮಾತನಾಡಿ, ಮಕ್ಕಳ ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆಯು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಕಲಿಕಾ ಹಬ್ಬದಿಂದ ಶೈಕ್ಷಣಿಕ ಬಲವರ್ಧನೆ, ಸಂಖ್ಯಾಜ್ಞಾನ ಹೆಚ್ಚಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಾಂಡುರಂಗ, ಭವ್ಯಶ್ರೀ, ರಂಜಾನ್ ಬಿ, ಎಸ್.ರಾಮಪ್ಪ, ಶಶಿಕಲಾ, ವಾಣಿ, ರಮೇಶ್, ರಾಜೇಶ್ವರಿ, ಜ್ಯೋತಿ ತೀರ್ುಗಾರರಾಗಿ ಕಾರ್ಯನಿರ್ವಹಿಸಿದರು. ಮಕ್ಕಳು ವಿವಿಧ ಕಲಿಕಾ ಕಲೆಯೊಂದಿಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಸುಧಾಕರ್, ರಾಜಸಾಬ್, ರಾಘವೇಂದ್ರ, ಜವಳಿ ಮಂಜುನಾಥ್, ಕೋರೆ ತಿಪ್ಪಣ್ಣ, ಮಮತಾ, ಮಂಜುನಾಥ್ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.