ಚಿಕ್ಕೋಡಿ 27: ಇಲ್ಲಿನ ಚರಮೂತರ್ಿಮಠದ ಸಂಪಾದನ ಸ್ವಾಮೀಜಿಯ ದ್ವಾದಶ ಪೀಠಾರೋಹನ ಅಂಗವಾಗಿ ಹಮ್ಮಿಕೊಂಡ ಬಸವ ಪುರಾಣದಲ್ಲಿ ಬರುವ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಮದುವೆ ಪ್ರಸಂಗದ ಸನ್ನಿವೇಶದಲ್ಲಿ ಮಲ್ಲಿಕಾಜರ್ುನ ಹಾಗೂ ಪ್ರತೀಕ್ಷಾ ವದು-ವರ ಮದುವೆ ಮಾಡುವ ಮೂಲಕ ಬಸವ ಪುರಾಣಕ್ಕೆ ವಿಶೇಷ ಮೆರಗು ನೀಡಿದರು.
ಹೌದು..ಇಲ್ಲಿನ ಚರಮೂತರ್ಿಮಠದ ಸಂಪಾದನ ಸ್ವಾಮೀಜಿಗಳ ದ್ವಾದಶ ಪೀಠಾರೋಹಣ ಅಂಗವಾಗಿ 45 ದಿನಗಳ ಕಾಲ ಮುದಗಲ್ಲದ ಮಹಾಂತ ಸ್ವಾಮೀಜಿ ಅವರು ಬಸವ ಪುರಾಣ ಯಶಸ್ವಿಯಾಗಿ ಹೇಳುತ್ತಿದ್ದು, ಪುರಾಣದಲ್ಲಿ ಬರುವ ಮದುವೆ ಸನ್ನಿವೇಶದಲ್ಲಿ ವಿಶ್ವಗುರು ಬಸವೇಶ್ವರ ಹಾಗೂ ನಿಲಾಂಭಿಕೆಯ ಕಲ್ಯಾಣ ಮಹೋತ್ಸವದ ನಿಮಿತ್ಯವಾಗಿ ಚಿಕ್ಕೋಡಿ ಪಟ್ಟಣದ ಶಂಕರ ದುಂಡಪ್ಪ ಕಾಳಿಂಗೆ ಅವರ ಮಗನಾದ ಮಲ್ಲಿಕಾಜರ್ುನ ವಿವಾಹವನ್ನು ಜಮಖಂಡಿಯ ಗಣಪತಿ ಪರಪ್ಪ ಅಥಣಿಯವರ ಸುಪುತ್ರಿ ಪ್ರತೀಕ್ಷಾ ಅವರೊಂದಿಗೆ ಸೋಮವಾರ ಸಾಯಂಕಲಾದ ಗೋದೊಳಿ ಶುಭ ಮೂಹರ್ತದಲ್ಲಿ ಮಾಂಗಲ್ಯ ಧಾರಣ ಹಾಗೂ ಅಕ್ಷತಾರೋಪಣ ಮಾಡುವ ಮೂಲಕ ಕಲ್ಯಾಣ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಬಸವ ಪರಾಣದ ವೇದಿಕೆಯು ಕೆಲ ಹೊತ್ತು ಮದುವೆ ಮಾನೆಯಾಗಿ ರೂಪುಗೊಂಡು, ಮದುವೆ ಸಂಭ್ರಮದಲ್ಲಿ ಕಾಣಿಸಿಕೊಳ್ಳುವಂತಹ ಕೆಲ ಸನ್ನಿವೇಶಗಳಾದ ಹಾಲಗಂಭ ಪೂಜೆ, ಬಿಸುಕಲ್ಲು ಹಾಗೂ ಒಳಕಲ್ಲು ಪೂಜೆ, ಪಾರಂಪರಿಕ ಜಾನಪದ ಗೀತೆಗಳ ಮಧ್ಯದಲ್ಲಿ ಮದುವೆ ವಿಜ್ರಂಭನೆಯಾಗಿ ನೇರವೇರಿತು. ವದು ವರರಿಗೆ ಬಟ್ಟೆ, ಮಂಗಳಸೂತ್ರ, ಕಾಲುಂಗರು, ಚಿನ್ನದ ಉಂಗರು ಸೇರಿದಂತೆ ಮದುವೆಗೆ ಬೇಕಾಗುವ ಎಲ್ಲ ಖಚರ್ು ವೆಚ್ಚಗಳನ್ನು ಬಸವ ಪುರಾಣ ಕಮೀಟಿ ವತಿಯಿಂದ ನೀಡಲಾಗಿತ್ತು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ದಂಪತಿಗಳು ಕನ್ಯಾಧಾನ ಮಾಡಿ ನವ ದಂಪತಿಗಳಿಗೆ ಶುಭ ಕೋರಿದರು. ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಚರಮೂತರ್ಿಮಠದ ಸಂಪಾದನ ಸ್ವಾಮೀಜಿ, ಜಮಖಂಡಿ ಓಲೆ ಮಠದ ಡಾ,ಚನ್ನಬಸವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಲ್ಯಾನ ಮಹೋತ್ಸವದಲ್ಲಿ ಆರು ಸಾವಿರಕ್ಕಿಂತ ಹೆಚ್ಚು ಜನರು ಆಗಮೀಸಿ ನವ ದಂಪತಿಗಳನ್ನು ಆಶಿರ್ವಚಿಸಿದರು. ಧುರೀಣ ಜಗದೀಶ ಕವಟಗಿಮಠ ದಂಪತಿಗಳಿಂದ ಸೋಮವಾರದ ಕಾಂಡ ಪೂಜೆ ಹಾಗೂ ಜಮಖಂಡಿ ಓಲೆ ಮಠದ ಡಾ,ಚನ್ನಬಸವ ಸ್ವಾಮೀಜಿಗಳ ಪಾದ ಪೂಜೆ ನೇರವೇರಿಸಿದರು.
ಎಸ್.ಎಸ್.ಕವಲಪೂರೆ,ಶೇಖರ ಚಿತವಾಟಿಗೆ, ಸಂಜಯ ಕವಟಗಿಮಠ,ಬಾಬು ಮಿಜರ್ೆ, ವಿಜಯ ಕಿಲ್ಲೆದಾರ, ಎನ್.ಎಸ್.ವಂಟಮುತ್ತೆ, ಬಿ.ಎ.ಪೂಜಾರಿ, ವೀರಣ್ಣ ಪುಟಾಣಿ, ಮಡಿವಾಳಪ್ಪ ಬಸರಗಿ, ಪ್ರಭು ಬೆಲ್ಲದ, ಲೋಕೇಶ ಧುಮಾಳೆ, ಗಿಡವೀರ, ಭಾಸ್ಕರ ಶೆಟ್ಟಿ, ದಾಸ ಶೆಟ್ಟಿ, ರಮೇಶ ಕುಡತರಕರ, ಅಕ್ರಮ ಅಕರ್ಾಟೆ, ಸಾಗರ ಬಿಸ್ಕೋಪ, ವೀರಶೈವ ಲಿಂಗಾಯತ್ ತರುಣ ಕಾರ್ಯಕರ್ತರು, ಕದಳಿ ಮಹಿಳಾ ವೇದಿಕೆ ಸದಸ್ಯರು ಸೇರಿ ಮುಂತಾದವರು ಉಪಸ್ಥಿತರಿದ್ದರು.