ತಟ್ಟೆ, ಚೀಲ ಸಂಗ್ರಹ ಅಭಿಯಾನಕ್ಕೆ ಚಾಲನೆ
ತಾಳಿಕೋಟಿ: ಉತ್ತರ ಪ್ರದೇಶದ ಇಲಾಹಾಬಾದ ಜಿಲ್ಲೆಯ ಪ್ರಯಾಗರಾಜನಲ್ಲಿ ನಡೆಯಲಿರುವ ವಿಶ್ವ ಪ್ರಸಿದ್ಧ ಮಹಾ ಕುಂಭ ಮೇಳಕ್ಕೆ ಆಗಸುವ ಭಕ್ತಾದಿಗಳಿಗೆ ಅನುಕೂಲವಾಗಲು ಪಟ್ಟಣದ ನಾಗರೀಕರು ತಟ್ಟೆ ಚೀಲ ಹಾಗೂ ಕಾಣಿಕೆ ಸಂಗ್ರಹ ಅಭಿಯಾನ ಬುಧವಾರ ಆರಂಭಿಸಿದರು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಚಾಲಕ ಮಲ್ಲಿಕಾರ್ಜುನ ಹಿಪ್ಪರಗಿಯವರು ಇಡೀ ಜಿಲ್ಲೆಯಾದ್ಯಂತ ಈ ಅಭಿಯಾನವು ನಡೆಯುತ್ತಿದೆ ತಾಳಿಕೋಟಿ ಪಟ್ಟಣದಲ್ಲಿಯೂ ನಾವು ಮನೆಮನೆಗೆ ತೆರಳಿ ಸುಮಾರು ಮೂರು ಸಾವಿರ ಊಟದ ತಟ್ಟೆ, ಲೋಟ, ಕೈಚೀಲ ಹಾಗೂ ಕಾಣಿಕೆಯನ್ನು ಸಂಗ್ರಹಿಸುತ್ತಿದ್ದೇವೆ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು. ಈ ಸಮಯದಲ್ಲಿ ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಜಯಸಿಂಗ್ ಮೂಲಿಮನಿ, ರಾಜು ಹಂಚಾಟೆ, ರಾಜು ಸೊಂಡೂರ,ಬಂಡು ಧಾಯಪುಲೆ, ಶ್ರೀಧರ್ ದೇಶಪಾಂಡೆ, ಪದ್ಮರಾಜ ಅಗ್ರವಾಲ, ಪ್ರಮೋದ ಅಗಾರವಾಲ ಮುತ್ತೀತರರೂ ಇದ್ದರು.