ಬಹದ್ದೂರ ಬಂಡಿ ಏತ ನೀರಾವರಿಯ ಯೋಜನೆಗೆ ಭೂಮಿ ಪೂಜೆ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 01: ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಸುಮಾರ 18 ಹಳ್ಳಿಗಳ ಬಹುದಿನಗಳ ಕನಸಾಗಿದ್ದ ಬಹದ್ದೂರ ಬಂಡಿ ಏತ ನೀರಾವರಿ ಯೋಜನೆಗೆ  ತಾಲ್ಲೂಕಿನ ಮುಂಡರಗಿ ಗ್ರಾಮದ ತುಂಗಾಭದ್ರಾ ಹಿನ್ನಿರಿನ ಪ್ರದೇಶದಲ್ಲಿ ಭೂಮಿ ಪೂಜೆ ನೆರವೆರಿಸಿದ ಬಳಿಕ ಮಾತನಾಡಿದ ಸಂಸದೀಯ ಕಾರ್ಯದಶರ್ಿಗಳು ಮತ್ತು ಶಾಸಕರಾದ ಕೆ ರಾಘವೇದ್ರ ಹಿಟ್ನಾಳ ಒಂದು ವರ್ಷದೊಳಗೆ ಕಾಮಾಗಾರಿಯನ್ನು ಪೊರ್ಣಗೊಳಿಸಲು ಗುುತ್ತಿಗೆದಾರರಿಗೆ ಸೂಚಿಸಲಾಗಿದೆ, ಸದರಿ ಯೋಜನೆಯು 188.45 ಕೋಟೆಯ ಮೊತ್ತದಾಗಿದ್ದು, ಸುಮಾರು 13,000 ಎಕರೆ ನೀರಾವರಿ ಸೌಲಭ್ಯ ಒಳಗೊಳ್ಳಲಿದ್ದು, ಇದರಿಂದ ಈ ಬಾಗದ ರೈತರಿಗೆ ಸುಮಾರು 40 ವರ್ಷಗಳ ಕನಸು ಇಡೀರಿದಂತಾಗಿದೆ, ಕೆಳದ ಚುನಾವಣೆ ಸಮಯದಲ್ಲಿ ಈ ಬಾಗದ ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ, ಹಾಗೂ ಸಿಂಗಟಾಲೂರ ಏತ ನೀರಾವರಿ ಯೋಜನೆಯಲ್ಲಿ ಸೂಕ್ಷ್ಮ ಏತ ನೀರಾವರಿ ಯೋಜನೆಯನ್ನು ರೂ 800 ಕೋಟಿ ಮೊತ್ತದಾಗಿದ್ದು, ಇದರ ಮೊದಲನೇಯ ಕಂತಾಗಿರುವ ರೂ 400 ಕೋಟಿ ಮೊತ್ತ ಮಂಜೂರಾಗಿದ್ದು, ಬರುವ ದಿನಗಳಲ್ಲಿ ಕಾಮಾಗಾರಿಗೆ ಶಂಖುಸ್ಥಾಪನೆ ನೇರವೆರಿಸಲಾಗುವುದುದೆಂದು ತಿಳಿಸಿದರು. ಹಾಗೂ ರೂ 2.00 ಕೋಟಿಯ ಮೊತ್ತದ ಹಿರೇಬಗನಾಳ ಮತ್ತು ಲಾಚನಕೇರಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಶ ಯೋಜನೆಗೆ  ಭೂಮಿ ಪೂಜೆ ನೆವರವೆರಿಸಿದರು,

ಜಿ ಪಂ ಸದಸ್ಯರಾದ ಗೂಳಪ್ಪ ಹಲಗೇರಿ, ನಗರ ಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಗ್ರಾ ಪಂ ಅಧ್ಯಕ್ಷರಾದ ಹನುಮಂತ, ಬಸಣ್ಣ ಬಂಗಾಳಿ, ಮುಖಂಡರುಗಳಾದ ಶರಣಪ್ಪ ಸಜ್ಜನ್, ಬಸವಣ್ಣ ಮುಂಡರಗಿ, ಚಾಂದ ಪಾಷ ಕಿಲ್ಲೇದಾರ, ಚಿನ್ನಾರಡ್ಡಿ, ಹೇಮಣ್ಣ, ವಿರುಪಣ್ಣ ಕುಣಕೇರಿ, ಕನರ್ಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯನಿವರ್ಾಯಕ ಅಧಿಕಾರಿಗಳಾದ ನಾಗಭೂಷಣ, ಸಹಾಯಕ ಕಾರ್ಯನಿವರ್ಾಂಹಕ ಅಧಿಕಾರಿಗಳು ಬಸವರಾಜ ಹಳ್ಳಿ ಉಪಸ್ಥಿತರಿದ್ದರು.