ಭೂ ದಾಖಲೆಗಳ ಡಿಜಲೀಕರಣ ಸುರಕ್ಷಾ ಕಾರ್ಯಕ್ರಮ
ಸಿರುಗುಪ್ಪ 12: ಭೂ ದಾಖಲೆಗಳ ಸುರಕ್ಷತೆಗೆ ರೈತರ ಮುಖ್ಯವಾಗಿ ಸಾರ್ವಜನಿಕರ ಅನುಕೂಲಕ್ಕೆ ವರದಾನವಾಗಿದೆ ಡಿಜಲೀ ಗಣಕೀಕರಣ ಮಾಡಲಾಗುತ್ತಿದೆ ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಅವರು ಹೇಳಿದರು.
ಸಿರುಗುಪ್ಪ ತಾಲೂಕ ತಹಸಿಲ್ದಾರ್ ಕಚೇರಿಯಲ್ಲಿ ಭಾರತ ಸರ್ಕಾರ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಬಳ್ಳಾರಿ ಜಿಲ್ಲಾ ಆಡಳಿತ ಸಿರುಗುಪ್ಪ ತಾಲೂಕು ಆಡಳಿತ ಭೂ ಸುರಕ್ಷಾ ನಿಮ್ಮ ಭೂ ದಾಖಲೆಗಳ ಇ- ಖಜಾನೆ ತಾಲೂಕ ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಲೀಕರಣ ಸುರಕ್ಷಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತಾ ಭೂ ದಾಖಲೆಗಳು ಸಿರುಗುಪ್ಪ ತಾಲೂಕು ಕಚೇರಿಯಲ್ಲಿ ಡಿಜಲೀಕರಣ ಮಾಡಲು ಸಜ್ಜಾಗಿದೆ ಈಗಾಗಲೇ ದಾಖಲೆ ಮಾಡಿ ಕೊಳ್ಳುವಂತಹ ಪ್ರಕ್ರಿಯೆ ಆರಂಭವಾಗಿದೆ ಇದರಿಂದ ಸಾರ್ವಜನಿಕರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ನಮ್ಮ ಸರ್ಕಾರ ಸುರಕ್ಷಿತವಾದ ಭೂ ದಾಖಲೆಗಳ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಈ ಯೋಜನೆ ಜಾರಿಗೆ ತಂದಿದೆ ಈ ಯೋಜನೆಯ ಸದುಪಯೋಗವನ್ನು ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಬಿ ಎಂ ನಾಗರಾಜ್ ಅವರು ಕರೆ ನೀಡಿದರು .
ತಹಸಿಲ್ದಾರ್ ಎಚ್ ವಿಶ್ವನಾಥ ಅವರು ಮಾತನಾಡಿ 2024 ಮಾರ್ಚ್ ನಿಂದ ಭೂ ಸುರಕ್ಷಾ ಯೋಜನೆ ಪ್ರಾರಂಭ ಮಾಡಲಾಗಿತ್ತು ಹಾಗೂ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ತಾಲೂಕನ್ನು ಆಯ್ಕೆ ಮಾಡಿ ಪ್ರಾಯೋಗಿಕವಾಗಿ ಜಾರಿ ನಂತರ ಈ ಯೋಜನೆಯಿಂದ ಆಗುವಂತಹ ಅನುಕೂಲಗಳಾದ ದಾಖಲೆ ಸುಭದ್ರ ಶಾಶ್ವತ ನೇರ ಸುಲಭ ಲಭ್ಯತೆ ತಂತ್ರಜ್ಞಾನದಿಂದ ನಿಮ್ಮ ಕೈಗೆ ಶಕ್ತಿ ತಿದ್ದಲು ಕಳೆಯಲು ಅಸಾಧ್ಯ ತ್ವರಿತ ಆಡಳಿತ ಅದರಂತೆ ಸಿರುಗುಪ್ಪ ತಾಲೂಕಿನಲ್ಲಿ ಸುಮಾರು 25 ಕಡತಗಳನ್ನು ಗಣಕೀಕರಣ ಮಾಡುವ ಕಾರ್ಯವನ್ನು ಆರಂಭಿಸಲಾಗಿದೆ ಜನವರಿ 2025 ಈ ವರ್ಷದಿಂದ ಕರ್ನಾಟಕ ರಾಜ್ಯದ್ಯಂತ ಭೂ ಯೋಜನೆ ಅಧಿಕೃತವಾಗಿ ಜಾರಿ ಮಾಡಲಾಯಿತು.
ಈ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಯ ಎ ಮತ್ತು ಬಿ ವರ್ಗದ ಕಡತಗಳನ್ನು ಗಣಕೀಕರಣ ಗೊಳಿಸ ಲಾಗುತ್ತಿದೆ ಹಳೆಯ ಭೂ ದಾಖಲೆಗಳ ಗಣಕಿ ಕರಣದಿಂದ ನಿಮ್ಮ ದಾಖಲೆಗಳ ಸುರಕ್ಷತೆ ಮತ್ತು ಸುಲಭ ಲಭ್ಯತೆಗಳ ಗ್ಯಾರಂಟಿ ತಾಲೂಕ ಕಚೇರಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲತೆಗಳ ಡಿಜಲಿ ಗಣಕೀಕರಣದ ಉದ್ದೇಶವಾಗಿದೆ ಎಂದು ತಹಶೀಲ್ದಾರ್ ಎಚ್ ವಿಶ್ವನಾಥ ಅವರು ವಿವರಿಸಿ ಹೇಳಿದರು.
ಗ್ರೇಡ್- 2 ತಹಸಿಲ್ದಾರ್ ಕುಮಾರಿ ಸತ್ಯಮ್ಮ ಕುರುಗೋಡು ಗ್ರೇಡ್- 2 ತಹಸಿಲ್ದಾರ್ ಬಿ ಮಲ್ಲೇಶಪ್ಪ ಸಿರುಗುಪ್ಪ ನಗರಸಭಾ ಅಧ್ಯಕ್ಷೆ ರೇಣುಕಮ್ಮ ಬಿ ವೆಂಕಟೇಶ್ ಉಪಾಧ್ಯಕ್ಷೆ ಯಶೋಧಮೂರ್ತಿ ನಗರಸಭಾ ಸದಸ್ಯ ಹೆಚ್ ಗಣೇಶ್ ಮೋದಿನ್ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ ಕಂದಾಯ ಪರೀವೀಕ್ಷಕ ಮಂಜುನಾಥ ಕಂದಾಯ ಇಲಾಖೆ ಶಿರಸ್ತೆದಾರ ರಾಘವೇಂದ್ರ ಶೇಕ್ಷಾವಲಿ ಉಮೇಶ್ ಗೌಡ ಪವನ್ ದೇಸಾಯಿ ಮುಲ್ಲಾ ದಾದ ಕಲಂದರ್ ಗ್ರಾಮ ಲೆಕ್ಕಾಧಿಕಾರಿ ಗಳು ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.