ಲೋಕದರ್ಶನ ವರದಿ
ರಾಣೆಬೆನ್ನೂರು21: ತಾಲ್ಲೂಕಿನ ಮೇಡ್ಲೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಯ್ಕೆ ಚುನಾವಣೆ ಗುರುವಾರ ನಡೆಯಿತು. ಚುನಾವಣೆಯಲ್ಲಿ ಆರ್.ಶಂಕರ ಅಭಿಮಾನಿ ಬಳಗದ ಸದಸ್ಯೆ ಲಲಿತಾ ಪ್ರಕಾಶ ಹಕಾರಿ ಅವರು ಡ್ರಾ ಮೂಲಕ ಆಯ್ಕೆಯಾಗಿದ್ದಾರೆ ಎಂದು ಕಾರ್ಯ ನಿವರ್ಾಹಕ ಡಾ.ಬಸವರಾಜ ಡಿ.ಸಿ ಚುನಾವಣಾಧಿ ಘೋಷಣೆ ಮಾಡಿದರು.
ಕಾಂಗ್ರೆಸ್ ಬೆಂಬಲಿತ 1 ಹಾಗೂ ಆರ್.ಶಂಕರ ಬೆಂಬಲಿತ 1 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮ ಪತ್ರ ಸಲ್ಲಿಸಿದ್ದರು.
ಒಟ್ಟು 25 ಸದಸ್ಯರಿದ್ದು ಇಂದಿನ ಚುನಾವಣೆಯಲ್ಲಿ 24 ಸದಸ್ಯರು ಮತ ಚಲಾವಣೆ ಮಾಡಿದ್ದು, ಒಬ್ಬರು ಖಾಲಿ ನಾಮಪತ್ರ ಹಾಕಿದ್ದರಿಂದ ತಿರಸ್ಕೃತಗೊಂಡಿದೆ. ಇಬ್ಬರಿಗೂ 12-12 ಮತಗಳು ಬಂದಿದ್ದರಿಂದ ಡ್ರಾ ಮಾಡುವ ಮೂಲಕ ಆಯ್ಕೆ ಮಾಡಲಾಯಿತು.
ಆಯ್ಕೆಯಾಗುತ್ತಿದ್ದಂತೆ ಆರ್.ಶಂಕರ್ ಬೆಂಬಲಿತ ಸದಸ್ಯರು ಹಾಗೂ ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ, ಗುಲಾಲು ಎರಚಿಕೊಂಡು ಸಂಭ್ರಮಿಸಿದರು. ಚಂದ್ರು ಪೂಜಾರ, ಜಗದೀಶ ಪೂಜಾರಿ, ಮುಬಾರಕ್ ಅಲಿ ಚಿಗರಳ್ಳಿ, ದಿಳ್ಳೆಪ್ಪ ಲಮಾಣಿ, ಜಹಾಂಗೀರ್ ಐರಣಿ, ಬಸವರಾಜ ಚಲವಾದಿ ಇದ್ದರು