ಲೋಕದರ್ಶನ ವರದಿ
ಇಂಡಿ 31:ಈ ಪ್ರಪಂಚದಲ್ಲಿ ಎರಡು ಪ್ರಕಾರದ ಲಕ್ಮೀಯನ್ನು ಕಾಣುತ್ತೇವೆ ಒಂದು ಪಾರಮಾಥರ್ಿಕ ಇನ್ನೊಂದು ಪ್ರಾಪಂಚಿಕ ಪ್ರಾಪಂಚಿಕ ಎಂದರೆ ತನ್ನನ್ನು ಆಶ್ರಯಿಸಿಕೊಂಡವರಿಗೆ ಪ್ರಾಪಂಚಿಕ ಲಕ್ಮೀ ಮುಖ್ಯ . ಪಾರಮಾಥರ್ಿಕವಾಗಿ ಮೋಕ್ಷ ಧಾನ, ಧರ್ಮ ಮಾಡಿದರೆ ಲಕ್ಮೀ ಸ್ಥಿರವಾಗಿರುತ್ತಾಳೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮೈಲಾರ ಗ್ರಾಮದ ಗುರುಬಾಳಪ್ಪ ಬುಕ್ಕಿಯವರ ತೋಟದ ವಸ್ತಿಯಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಮತ್ತು ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಗೂ 3 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಆಶಿರ್ವಚನ ನೀಡಿದ ಅವರು ಹಣಕ್ಕೆ ಎಷ್ಟು ಮಹತ್ವ ಕೋಡುತ್ತಾರೆ ಎಂದರೆ ಯಾರಲ್ಲಿ ಹಣ ಇರುತ್ತದೆ ಅವನೇ ಸದ್ಗುಣಿ ಕಾಣುತ್ತಾನೆ ಅವನೇ ಎಲ್ಲರಿಗಿಂತ ಪ್ರೇಕ್ಷಣಿಯವಾಗಿ ಕಾಣುತ್ತಾನೆ ಎಂದು ಹೇಳಿ ಕೊನೆಗೆ ಹೇಳುತ್ತಾನೆ ದುಡ್ಡಿಗೆ ಮಹತ್ವ ನೀಡುತ್ತಿರುವದರಿಂದ ಪ್ರಾಪಂಚಿಕ ಮಾಡಲು ಹಣ ಮುಖ್ಯ ಪಾರಮಾಥರ್ಿಕಕ್ಕೆ ಹಣ ಮುಖ್ಯವಲ್ಲ ಪ್ರಾಪಂಚಿಕ ಹಣ ಚಂಚಲವಾಗಿದ್ದು ಬಂದಿದ್ದು ಇಂದು ಇರಬಹುದು ನಾಳೇ ಹೋಗಬಹುದು ಪಾರಮಾಥರ್ಿಕ ಲಕ್ಮೀ ಸ್ಥಿರವಾಗಿದ್ದಾಳೆ. ಲಕ್ಷ್ಮೀ ಹಿಂದೆ ಹತ್ತಬಾರದು ಗಟ್ಟಿಯಾಗಿ ಹಿಡಿಯಬೇಕು ಎಂದರೆ ಸಿಗುವದಿಲ್ಲ. ನಿಮ್ಮ ನೇರಳನ್ನು ನೀವು ಹಿಡಿಯಬೇಕೆಂದರೆ ಸಿಗುವದಿಲ್ಲ. ದೇವರು ಧರ್ಮದ ಕಡೆ ಮೋಕ್ಷದ ಕಡೆ ಹೊರಟರೆ ದುಡ್ಡು ನಿಮ್ಮಲ್ಲಿಯೇ ಇರುತ್ತಾಳೆ. ಬಹಳಷ್ಟು ಜನ ಸಾಮೋಹಿಕ ಮದುವೆಗಳಿಗೆ ಬಡವರ ಮದುವೆ ನಿರ್ಗತಿಕರ ಮದುವೇ ಎನೂ ಇಲ್ಲದವರ ಮಧುವೆ ಎಂದು ಹೇಳುತ್ತಾರೆ ಆದರೆ ಇದು ಭಾಗ್ಯವಂತರ ಮಧುವೆ . ವಯಕ್ತಿಕ ಮದುವೆಗೆ ಹೆಣ್ಣಿನ ಕಡೆ ಗಂಡಿನ ಕಡೆ ಬೀಗರು ಬಿಜ್ಜರು ಬರಹುದು ಆದರೆ ಸರಳ ಸಾಮೋಹಿಕ ವಿವಾಹದಲ್ಲಿ ಅನೇಕ ಸ್ವಾಮಿಗಳು ಮಠಾಧೀಶ್ವರರರು ಸಂತ ಮಹಾಂತರು ಅತಿಥಿಗಳು ಬಂದು ಶುಭಕೋರುತ್ತಾರೆ ಆದ್ದರಿಂದ್ದ ಇಂತಹ ಮದುವೆಗಳು ಭಾಗ್ಯವಂತರ ಎಂದರೆ ತಪ್ಪಾಗಲಾರದು.
ಸಾಮೋಹಿಕ ಮುದುವೆಗಳು ಮಾಡುವದರಿಂದ ದುಂದುವೆಚ್ಚ ಕಡಿವಾಣ ಹಾಕದಂತಾಗುತ್ತದೆ ಅದೇ ಹಣ ದೇಶಕ್ಕೆ, ಧರ್ಮಕ್ಕೆ ಬಡವರಿಗೆ ದೀನ ದುರ್ಬಲರಿಗೆ ವಿನಿಯೋಗ ಮಾಡಿದರೆ ಒಳ್ಳೆಯದಾಗುತ್ತದೆ. ಯತ್ರನಾರೇಸ್ತು ರಮ್ಯಂತೆ ತತ್ರಪೂಜ್ಯತೆ ಎಲ್ಲಿ ಸ್ರೀಯರನ್ನು ಆರಾಧಿಸುತಾರೆಯೂ ಅಲ್ಲಿ ದೇವತೆಗಳು ವಿರಾಜೀಸುತ್ತಾರೆ ಆದ್ದರಿಂದ್ದ ಹೆಣ್ಣನ್ನು ಪೂಜ್ಯನಿಯಿಂದ ಕಾಣಬೇಕು. ನವ ವಧುವರರು ಜೀವನ ಸುಖ;ಮಯವಾಗಲಿ ಎಂದು ಹಾರೈಸಿದರು.
ಪ್ರಭುಜಿ ಮಹಾರಾಜ ಹಿಪ್ಪರಗಿ, ಮಂದ್ರೂಪದ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು.
ಆಲಮೇಲ ಚಂದ್ರಶೇಖರ ಶಿವಾಚಾರ್ಯರು,ಜೈನಾಪೂರದ ರೇಣುಕಾ ಶಿವಾಚಾರ್ಯರು,ರೋಡಗಿ ಶಿವಲಿಂಗೆಶ್ವರ ಸ್ವಾಮಿಗಳು, ಸಂಗನಬಸವ ಶಿವಾಚರ್ಾರು ಸಾನಿಧ್ಯವಹಿಸಿದರು.
ಅಣ್ಣಪ್ಪ ತಳವಾರ, ಮಂಜುನಾಥ ವಂದಾಲ, ಗುರುಬಾಳಪ್ಪ ಬುಕ್ಕಿ,ಝಳಕಿ ಗ್ರಾ.ಪಂ ಅಧ್ಯಕ್ಷ ಶ್ರೀಶೈಲ ಬನಸೋಡೆ, ಗೋಪಾಲ ಕಾರೇಪ್ಪನವರ್, ಸಂತೋಷಗೌಡ ಪಾಟೀಲ ,ಅಶೋಕ ಕಾಮಾ, ಸುನೀಲ ಕೋಳಿ, ಹಣಮಂತ ಕೋಳಿ, ಅಂಬಣ್ಣಾ ಗದ್ಯಾಳ, ಮಹೇಶ ಬುಕ್ಕಿ, ಭತಗುಣಕಿ ಗ್ರಾ.ಪಂ ಅಧ್ಯಕ್ಷ ಸಿದ್ದರಾಮ ನಿಚ್ಚಳ, ಪ್ರದೀಪ ಮೇಟಗುಡ್ಡಿ, ಲಕ್ಮಣ ದ್ಯಾಮಗೋಳ, ರೇವಣ್ಣಸಿದ್ದ ಬುಕ್ಕಿ, ಈಶ್ವರಪ್ಪ ಮಾಳಗೆ ಅಣ್ಣುಗೌಡ ಪಾಟೀಲ ಗೋಪಾಲ ಇಂಚಗೇರಿ ಗಂಗಧರ ಕಾಪಸೆ ,ಬಸವರಾಜ ಡೊಳ್ಳಿ, ಸಿದ್ದು ದ್ಯಾಮಗೊಳ, ಅಶೋಕ ಕಾಪಸೆ, ಶ್ರೀಮಂತ ಶಿರಶ್ಯಾಡ, ಬಸವರಾಜ ಪಾಟೀಲ ಶಿವಗೊಂಡಪ್ಪ ಪಾಟೀಲ, ಶಿವುಪುತ್ರಪ್ಪ ತಳವಾರ, ರತ್ನಾಕರ ಕ್ಷತ್ರಿ, ಅಪ್ಪಶ್ಯಾ ಅಂಕಲಗಿ, ಜಗನಾಥಗೌಡ ಪಾಟೀಲ, ಧನರಾಜ ಮುಜಗೊಂಡ, ಮಲ್ಲಯ್ಯಾ ಅಷ್ಠಗಿ, ಗೀರಿಮಲ್ಲ ಹೀರೇಕುರಬರ್, ಸಂತೋಗೌಷಗೌಡ ಪಾಟೀಲ,ನೀಲಕಂಠ ನಾರಾಯಣ ,ಸುರೇಶಗೌಡ ಪಾಟೀಲ ವೇದಿಕೆಯಲ್ಲಿದ್ದರು.