ಇಟನಾಳ ಲಕ್ಷ್ಮೀದೇವಿ ಜಾತ್ರೆ ಸಂಪನ್ನ

ಗುಲರ್ಾಪೂರ 07: ಸಮೀಪದ ಇಟನಾಳ ಗ್ರಾಮದ ಆರಾಧ್ಯ ದೇವತೆ ಲಕ್ಷ್ಮೀದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ  ಜರುಗಿತು. 

ಮಂಗಳವಾರ ದಿ. 5ರಂದು ಮುಂಜಾನೆ 5ಗಂಟೆಗೆ ವೀರುಪಾಕ್ಷ ಬಡಿಗೇರ ಪಾರಾಯಣ ನಡೆಸಿಕೊಟ್ಟರು ನಂತರ 6ಗಂಟೆಗೆ. ಮದಗೊಂಡ ಪೂಜಾರಿ ಇವರಿಂದ ಅಭಿಷೇಕ 9ಗಂಟೆಗೆ 101 ಸುಮಂಗಲೆಯರಿಂದ ಕುಂಭಮೇಳದೊಂದಿಗೆ ಗ್ರಾಮದ ಎಲ್ಲ ದೇವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆಯೂ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು.

 ನಂತರ ಸತ್ತೆಪ್ಪಾ ನಾಯ್ಕ ಇವರಿಂದ ಅಲಗ ಹಾಯಲಾಯಿತು. 11ಗಂಟೆಗೆ ಗ್ರಾಮದಲ್ಲಿರುವ ಎಲ್ಲ ದೇವರ ಉಡಿ ತುಂಬಲಾಯಿತು. 12ಗಂಟೆಗೆ. ಸಿದ್ಧೇಶ್ವರ ಶರಣರು, ವೀರುಪಾಕ್ಷ ದೇವರು ಮಾತೋಶ್ರೀ ಲಲಿತಮ್ಮನವರ 9 ದಿನಗಳವರೆಗೆ ನಡೆದ ಪ್ರವಚನ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು. ಭಕ್ತರು ದಂಡೂರಿ ಹಾಕಿ ಕಾಯಿ ಕಪರ್ೂರ ಹಚ್ಚಿ ಭಂಡಾರ ಹಾರಿಸಿ ದೇವಿಗೆ ತಮ್ಮ ಭಕ್ತಿಯನ್ನು ಸಮಪರ್ಿಸಿದರು.