ಎಲ್‌ಐಸಿ ಜೀವ ವಿಮಾ : ಮೈಕ್ರೋ ಬಚತ್, 2 ಲಕ್ಷ ರೂ ಪರಿಹಾರ

LIC Life Insurance: Micro Bachat, Rs 2 lakh compensation

ಎಲ್‌ಐಸಿ ಜೀವ ವಿಮಾ : ಮೈಕ್ರೋ ಬಚತ್, 2 ಲಕ್ಷ ರೂ ಪರಿಹಾರ  

ರಾಣೇಬೆನ್ನೂರು 28:  ಭಾರತೀಯ ಜೀವ ವಿಮಾನ ನಿಗಮದ ಮೈಕ್ರೋ ಬಚತ್ ಯೋಜನೆಯಲ್ಲಿ, ಕೇವಲ 2 ಕಂತುಗಳು ಮಾತ್ರ ತುಂಬಿದ್ಧ,ವಿಮಾ ಫಲಾನುಭವಿ ಬ್ಯಾಡಗಿ ಯೋಜನಾ ಕಚೇರಿ ಹೊನ್ನತ್ತಿ ವಲಯ ದೇವರಗುಡ್ಡ ಕ್ಷೇತ್ರದ ಮಣಿಕಂಠ ಸ್ವಸಹಾಯ ಸಂಘದ ಸದಸ್ಯ ಶ್ರೀಮತಿ ಲಕ್ಷ್ಮವ್ವ ಬಸಪ್ಪ ಸಂಗಣ್ಣನವರ ಆಕಸ್ಮಿಕವಾಗಿ ಸಾವು ಕಂಡಿದ್ದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಾಲಸಿದಾರರ ಪತಿ ಬಸಪ್ಪ ಸಂಗಣ್ಣನವರ ವಿಮಾ ನಿಗಮದಿಂದ ಬಿಡುಗಡೆಯಾದ 2 ಲಕ್ಷ ರೂಗಳ ಚೆಕ್ಕನ್ನು ಬ್ಯಾಡಗಿ ತಾಲೂಕ ಯೋಜನಾಧಿಕಾರಿ ರಘುಪತಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಯೋಜನೆಯಲ್ಲಿ ಇದನ್ನು ಅಳವಡಿಸಲಾಗಿದ್ದು, ಯಾವುದೇ ಸಂದರ್ಭದಲ್ಲಿ ನಡೆಯುವ ಆಕಸ್ಮಿಕ ಘಟನೆಗಳಿಗೆ  ಕುಟುಂಬ ಆರ್ಥಿಕ ತೊಂದರೆಯನ್ನು ಎದುರಿಸಬಾರದು ಎನ್ನುವ ದೂರ ದೃಷ್ಟಿ ಇದಾಗಿದೆ ಎಂದರು.       

     ಪಾಲಸಿದಾರರ ಕುಟುಂಬಕ್ಕೆ ಯೋಜನೆಯ ವಿಮಾ ಸೌಲಭ್ಯ ಲಭ್ಯವಿದೆ. ಅದಕ್ಕಾಗಿ, ಸ್ವ ಸಹಾಯ ಸಂಘದ ಪಾಲುದಾರ ಸದಸ್ಯರಿಗೆ ಜೀವ ವಿಮೆ, ಆರೋಗ್ಯ ವಿಮೆ, ಜೀವ ಭದ್ರತೆ ವಿಮೆ ಮಾಡಿಸಲಾಗುತ್ತಿದೆ. ಅಂದು ಕೇವಲ ಎರಡು ಕಂತು  ಮಾತ್ರ ಲಕ್ಷ್ಮವ್ವ ಭರಿಸಿದ್ದರು. ಪತ್ನಿಯನ್ನು ಕಳೆದುಕೊಂಡ ಕುಟುಂಬಕ್ಕೆ ಸ್ವಲ್ಪ ಸಹಕಾರಿಯಾದಂತಾಗಿದೆ ಎಂದರು.   ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇಲ್ಲಿಯವರೆಗೂ ಜೀವ ವಿಮಾನ ನಿಗಮ ಮೈಕ್ರೋ ಬಚತ್ ಕಾರ್ಯಕ್ರಮದ ಅಡಿಯಲ್ಲಿ ಪಾಲಿಸಿಯನ್ನು ಖರೀದಿಸಿದ 352 ಸದಸ್ಯರ ಕುಟುಂಬಕ್ಕೆ ಓಟ್ಟು4.18 ಕೋಟಿ ರೂಗಳ ಸೌಲಭ್ಯಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಚೆಕ್ಕ ವಿತರಣಾ ಕಾರ್ಯಕ್ರಮದಲ್ಲಿ, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಶ್ವೇತಾ ಚಲವಾದಿ, ವಿಮಾ ಸಮನ್ವಯಾಧಿಕಾರಿ ಎನ್‌. ಕೃಷ್ಣಮೂರ್ತಿ, ಒಲೆಯ ಮೇಲ್ವಿಚಾರಕ ಅಭಿಷೇಕ್, ಸೇರಿದಂತೆ, ದೇವರಗುಡ್ಡ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.