ಲೋಕದರ್ಶನ ವರದಿ
ಕುರುಗೋಡು 11: ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣ ಆಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ನಾಡು ನುಡಿಯ ಬಗ್ಗೆ, ದೇಶ ಭಕ್ತಿಗೀತೆಗಳನ್ನು ಕಲಿಸಿ ವೇದಿಕೆಯ ಮೇಲೆ ಪ್ರಚುರ ಪಡಿಸುವುದು ನಿಜಕ್ಕೂ ಸಾಧನೆ ಎಂದು ಬಳ್ಳಾರಿ ಸರಳದೇವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ತಿಪ್ಪೆರುದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮಾನವ ಧರ್ಮ ಮಕ್ಕಳ ಮಂಟಪ ಶಾಲೆಯ ಆವರಣದಲ್ಲಿ ಶಾಲಾ ಆಡಳಿತ ಹಮ್ಮಿಕೊಂಡಿರುವ 265ನೇ ಮಾಸಿಕ ಜ್ಞಾನವಾಹಿನಿ ಕಾರ್ಯಕ್ರಮದ ಅಂಗವಾಗಿ ಶ್ರವಾಣ ಸಂಜೆಯಡಿಯಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತಾ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಸಾಹಿತ್ಯ, ನಾಡು ನುಡಿ, ದೇಶಭಕ್ತಿಯ ಪ್ರಜ್ಞೆ ಮೂಡುವಂತಾಗುತ್ತದೆ ಆಗಾಗಿ ಹೆಚ್ಚಿನ ಕಾರ್ಯಕ್ರಮಗಳು ಜರುಗಲಿ ಎಂದರು.
ಶಾಲೆಯ ಕಾರ್ಯದರ್ಶಿ ಎನ್.ತಿಪ್ಪೆರುದ್ರಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಹಿಸಲು ಈ ಮಾಸಿಕ ಜ್ಞಾನವಾಹಿನಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಎನ್.ಮರೇಗೌಡರು, ನಾಗರಾಜ, ಎಸ್ಟಿಎಂ.ಸದಶಿವಸ್ವಾಮಿ, ಶಾಷವಲಿ, ರಮೇಶ್, ಮಂಜುಳಾ, ಆಶಾಭಿ, ಅಶ್ವೀನಿದೇವಿ, ಶಾಕುಂತಲಾ ಹಾಗೂ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು