ಕುರುಗೋಡು: ಸಿಸಿ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿದ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

Kurugodu: GPM CEO Rahul Sharanappa Sankanur inspected CC drain work

 ಕುರುಗೋಡು: ಸಿಸಿ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿದ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ  

ಬಳ್ಳಾರಿ 18: ಕುರುಗೋಡು ತಾಲ್ಲೂಕಿನ ಸೋಮಸಮುದ್ರ ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಂಗಳವಾರ ಭೇಟಿ ನೀಡಿ ಗ್ರಾಪಂ ವತಿಯಿಂದ ಕೈಗೊಂಡ ಸಿಸಿ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಕಾಮಗಾರಿ ಗುಣಮಟ್ಟತೆಯಿಂದ ಕೂಡಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಕುರುಗೋಡು ತಾಪಂ ಇಒ ಕೆ.ವಿ ನಿರ್ಮಲ, ತಾಪಂ ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ, ಸೋಮಸಮುದ್ರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗಪ್ಪ, ಎಡಿಪಿಸಿ ಅಂಬರೀಶ್, ಟಿಸಿ ಮಲ್ಲಿಕಾರ್ಜುನ, ಟಿಐಇಸಿ ಚಂದ್ರಶೇಕರ, ಟಿಎಇ ಅರುಣಾ ಜ್ಯೋತಿ, ಬಿಎಫ್‌ಟಿ ಅಗಲೂರ​‍್ಪ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.