ಧಾರವಾಡ 13: ಇದೇ ಮೇ 19 ರಂದು ಜರುಗಲಿರುವ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ನಿಯೋಜನೆಗೊಂಡಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಇಂದು (ಸೋಮವಾರ) ನಗರದ ಜೆಎಸ್ಎಸ್ ಕಾಲೇಜ್ ಆವರಣದಲ್ಲಿ ತರಬೇತಿ ಜರುಗಿತು.
ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಹೆಚ್. ಅರುಣಕುಮಾರ್ ಭೇಟಿ ನೀಡಿ ಸಮರ್ಪಕ ಮತ್ತು ಯಶಸ್ವಿ ಚುನಾವಣೆಗೆ ತರಬೇತಿ ಅತ್ಯಗತ್ಯ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಚುನಾವಣೆ ನಿರ್ವಹಣೆಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಬೇಕು ಎಂದರು.
ಉಪಚುನಾವಣೆಗೆ ಒಟ್ಟು 968 ಸಿಬ್ಬಂದಿಯನ್ನು 242 ತಂಡಗಳಾಗಿ ನಿಯೋಜಿಸಲಾಗಿದೆ. ಶೇ.13 ರಷ್ಟು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಕಾಯ್ದಿರಿಸಿಕೊಳ್ಳಲಾಗಿದೆ. ಜೆಎಸ್ಎಸ್ ವಿದ್ಯಾಸಂಸ್ಥೆಯ ವಿವಿಧ 21 ಕೊಠಡಿಗಳಲ್ಲಿ ತರಬೇತಿಗೆ ಏಪರ್ಾಡು ಮಾಡಲಾಗಿತ್ತು ಎಂದು ಕ್ಷೇತ್ರದ ಚುನಾವಣಾಧಿಕಾರಿ ವಿ. ಪ್ರಸನ್ನ ಹೇಳಿದರು. ವೀಕ್ಷಕರ ಸಮನ್ವಯಾಧಿಕಾರಿ ಎನ್.ಎಂ. ಭೀಮಪ್ಪ ಮತ್ತಿತರ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು