ಲೋಕದರ್ಶನ ವರದಿ
ಕುಮಟಾ, 5 : ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟಾ ಅವರು ನವೆಂಬರ್ 27 ರಂದು ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಪಟ್ಟಣದ ರಸ್ತೆಗಳ ವಿಸ್ತರಣೆಯ ಕುರಿತು ನಡೆದ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ಸವರ್ೆ ಕಾರ್ಯ ಆರಂಭಿಸಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳ ವಿಸ್ತರಣೆಗಾಗಿ ಮೊದಲು ಸವರ್ೆ ನಡೆಸಿ, ಡಿ 15ರ ಒಳಗೆ ರಸ್ತೆಯ ಎರಡು ಬದಿಯಲ್ಲಿ ತೆರವಾಗಲಿರುವ ಸಕರ್ಾರಿ ಮತ್ತು ಖಾಸಗಿ ಕಟ್ಟಡ ಅಥವಾ ಜಾಗದ ಬಗೆಗಿನ ಸಮಗ್ರ ವರದಿಯನ್ನು ಸಿದ್ಧಪಡಿಸಿ ನನಗೆ ನೀಡುವಂತೆ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟಾ ಅವರು ನವೆಂಬರ್ 27 ರಂದು ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಪಟ್ಟಣದ ರಸ್ತೆಗಳ ವಿಸ್ತರಣೆಯ ಕುರಿತು ನಡೆದ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಹಾಗಾಗಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ನೇತ್ರತ್ವದ ತಂಡ ಸವರ್ೆ ಇಲಾಖೆ ಜೊತೆಗುಡಿ ಪಟ್ಟಣದಲ್ಲಿ ಸವರ್ೆ ಕಾರ್ಯ ಪ್ರಾರಂಭಿಸಿದ್ದಾರೆ.
ಅಲ್ಲದೆ ಪುರಸಭೆ ಬಳಿ ಈಗಾಗಲೇ ರಸ್ತೆ ವಿಸ್ತರಣೆಗೆ ಅಗತ್ಯವಾದ 12 ಮೀ ಅಗಲಕ್ಕೆ ಅಗತ್ಯವಾದ ಜಾಗವಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರ ಜೊತೆಗೆ ಪೊಲೀಸ್ ಇಲಾಖೆ ಸಹ ರೋಸಿ ಹೋಗಿದೆ. ಹೀಗಾಗಿ ಕ್ಷಿಪ್ರವಾಗಿ ಬೆಳೆದು ಭೂತಾಕಾರ ಪಡೆದಿರುವ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವದು ಅನಿವಾರ್ಯವಾಗಿದೆ. ಸದ್ಯ ಗಿಬ್ ಸರ್ಕಲ್ನಿಂದ ಸುಭಾಸ ರಸ್ತೆ ಮಾರ್ಗವಾಗಿ ಚಿತ್ತರಂಜನ ಚಿತ್ರಮಂದಿರ ವರೆಗೆ, ಮಾಸ್ತಿಕಟ್ಟೆ ಸರ್ಕಲ್ನಿಂದ ಹಳಕಾರ ಕ್ರಾಸ್ವರೆಗೆ ಮತ್ತು ಜೈವಂತ ಸ್ಟುಡಿಯೋ ಕ್ರಾಸ್ನಿಂದ ಬಾಳಗಿ ಮೆಡಿಕಲ್ ವರೆಗಿನ ರಸ್ತೆ ಅಗಲಗೊಳಿಸಲು ನಿರ್ಧರಿಸಲಾಗಿದೆ. ಗಟಾರ್ ಸೇರಿದಂತೆ ಕನಿಷ್ಠ 12 ಮೀ, ಗರಿಷ್ಠ 18 ಮೀ ದಷ್ಟು ಅಗಲ ರಸ್ತೆ ವಿಸ್ತರಿಸಲು ಹಿಂದೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿಗಳು ಸೂಚಿಸಿದ್ದರು.
ಈಗಿರುವ 12 ಮೀ ಅಗಲ ರಸ್ತೆ ಪುರಸಭೆ ಅಧೀನಕ್ಕೆ ಒಳ ಪಟ್ಟಿರುತ್ತದೆ. ಇದಕ್ಕೂ ಮೇಲ್ಪಟ್ಟು ಅಗತ್ಯವೆನಿಸಿದರೆ ಪುರಸಭೆ ಸ್ವಾಧೀನ ಪಡಿಸಿಕೊಂಡು ಖಾಸಗಿ ಭೂಮಿ ಹಾಗೂ ಕಟ್ಟಡಗಳಿಗೆ ಮಾತ್ರ ಸಾಂಧಭರ್ಿಕವಾಗಿ ಪರಿಹಾರ ನಿಗಧಿ ಪಡಿಸಲಿದೆ. ಪುರಸಭೆ ರಸ್ತೆಯ ಜಾಗವನ್ನು ಅತಿಕ್ರಮಿಸಿಕೊಂಡಿರುವ ವ್ಯಕ್ತಿಗಳಿಗೆ ಯಾವುದೇ ಪರಿಹಾರ ನೀಡಲಾಗುವದಿಲ್ಲ ಎಂದು ಹಿಂದೆ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು.
ಅಲ್ಲದೇ ಪಟ್ಟಣದ ಪ್ರಮುಖ ರಸ್ತೆಗಳ ಅಗಲವನ್ನು ಗುರುತಿಸಿ ಸಮಗ್ರ ಸವರ್ೆ ಕಾರ್ಯ ನಡೆಸಿ ಡಿ 15ರ ಒಳಗೆ ರಸ್ತೆಯ ಎರಡೂ ಬದಿಯಲ್ಲಿ ಅಗಲೀಕರಣದಿಂದ ತೆರವಾಗಲಿರುವ ಸಕರ್ಾರಿ ಮತ್ತು ಖಾಸಗಿ ಭೂಮಿ, ಕಟ್ಟಡಗಳನ್ನು ಗುರುತಿಸಿ ನೀಲ ನಕ್ಷೆ ಸಿದ್ದ ಪಡಿಸಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ನಿದರ್ೇಶನ ನೀಡಿದ್ದರು. ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟಾ ಆದೇಶದ ಮೆರೆಗೆ ಸುರೇಶ ಎಂ ಕೆ ಅವರ ತಂಡ ಮಾಸ್ತಿಕಟ್ಟೆ ಸರ್ಕಲ್ನಿಂದ ಸವರ್ೆ ಕಾರ್ಯ ಆರಂಭಿಸಿದ್ದಾರೆ. ರಸ್ತೆ ಮದ್ಯ ಭಾಗದಿಂದ ಎರಡು ಬದಿಯಲ್ಲಿ 6 ಮೀಟರ್ ಹಾಗೂ 9 ಮೀಟರ್ ನಷ್ಟು ಸವರ್ೆ ನಡೆಸಿ, ಮಾರ್ಕ ಮಾಡಲಾಗಿದೆ. ಇದಕ್ಕೆ ಕಟ್ಟಡ ಮಾಲೀಕರ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಅವರು ತಿಳಿಸಿದ್ದಾರೆ.