ಸುವರ್ಣಾ ಕೊಡತೆಗೆ ಸತ್ಕಾರ

Kudos to Suvarna Koda

ಸುವರ್ಣಾ ಕೊಡತೆಗೆ ಸತ್ಕಾರ 

ಸಂಬರಗಿ 13: ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ರೀತಿಯಿಂದ ಅಭ್ಯಾಸ ಮಾಡಿ ಪರೀಕ್ಷಾ ಕೇಂದ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದು ಹೆಮ್ಮೆ ಎಂದು ಮದಭಾವಿ ಗ್ರಾಮ ಪಂಚಾಯತ ಅಧ್ಯಕ್ಷರು ಮಹಾದೇವ ಕೋರೆ ಹೇಳಿದರು. ಮದಭಾವಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯಲ್ಲಿ ಕಳೆದ ವರ್ಷ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಸ್ಥಾನ ಪಡೆದ ನಂತರ ಸಂತ ರೋಹಿದಾಸ ಇವರ ಜಯಂತಿ ಅಂಗವಾಗಿ ಸಂತ ರೋಹಿದಾಸ ಕಮೀಟಿ ವತಿಯಿಂದ ಸುವರ್ಣಾ ದತ್ತಾ ಕೊಡತೆ ಇವರನ್ನು ಸತ್ಕರಿಸಿ ಮಾತನಾಡಿ ಅವರು ಇತ್ತೀಚಿಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಮೋಬೈಲ್ ಬಳಕೆ ಹೆಚ್ಚಾಗಿ ಅಭ್ಯಾಸದ ಕಡೆಗೆ ಗಮನ ಹರಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಡಮಕ್ಕಳು ಮನೆಯಲ್ಲಿ ಕೆಲಸ ಮಾಡಿ ಯಾವುದೇ ಖಾಸಗಿ ತರಗತಿಯಲ್ಲಿ ಪ್ರಶಿಕ್ಷಣ ಪಡೆಯದೆ ಕಳೆದ ವರ್ಷ ಪಿ.ಯು.ಸಿ ದ್ವಿತಿಯ ಸ್ಥಾನದಲ್ಲಿ ಪರಿಶಿಷ್ಟ ಜಾತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಅವರು ಹೇಳಿದರು. ವಿನಾಯಕ ಬಾಗಡಿ, ಖಂಡೆರಾವ ಘೋರೆ​‍್ಡ, ಸಂಜಯ ಅದಾಟೆ, ಗೋಪಾಲ ನಿವಲಗಿ ಇನ್ನೀತರು ಉಪಸ್ಥಿತ ಇದ್ದರು.