ಲೋಕದರ್ಶನ ವರದಿ
ಬೈಲಹೊಂಗಲ10: ತಾಲೂಕಿನ ಸಂಗೊಳ್ಳಿ ಗ್ರಾಮದ ಪ್ರೌಢಶಾಲೆ ಆವರಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜ.12, 13ರಂದು 2019ನೇ ಸಾಲಿನ 6ನೇ ವರ್ಷದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ನಡೆಯಲಿದೆ.
ಜ.12ರಂದು ಬೆಳಗ್ಗೆ 6ಕ್ಕೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಯಣ್ಣನ ಪ್ರತಿಮೆಗೆ ಪೂಜೆ ನಡೆಯಲಿದೆ. ಅರ್ಚಕ ಬಸವರಾಜ ಡೊಳ್ಳಿನ ಅರ್ಚನೆ ಸಲ್ಲಿಸುವರು.
ಬೆಳಗ್ಗೆ 10ಕ್ಕೆ ಸಚಿವ ಸತೀಶ ಜಾರಕಿಹೊಳಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿ ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸುವರು. ಮುಖ್ಯಸಚೇತಕ ಗಣೇಶ ಹುಕ್ಕೇರಿ ರಾಯಣ್ಣ ಜ್ಯೋತಿ ಬರಮಾಡಿಕೊಳ್ಳುವರು. 10.30ಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಸದಸ್ಯ ಮಹಾಂತೇಶ ಕವಟಗಿಮಠ ಜಾನಪದ ಕಲಾವಾಹಿನಿ ಉದ್ಘಾಟಿಸುವರು. 11ಕ್ಕೆ ಸಂಸದ ಸುರೇಶ ಅಂಗಡಿ ವಸ್ತು ಪ್ರದರ್ಶನ ಉದ್ಘಾಟಿಸುವರು.
12ಕ್ಕೆ ವಿಚಾರ ಸಂಕೀರಣ ನಡೆಯಲಿದ್ದು, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ ಉದ್ಘಾಟಿಸುವರು. ಧಾರವಾಡ ಕವಿವಿ ಪುರಾತತ್ವ ಪ್ರಾಧ್ಯಾಪಕ ನಿವೃತ್ತ ಇತಿಹಾಸ ತಜ್ಞ ಡಾ.ಆರ್.ಎಂ.ಷಡಕ್ಷರಯ್ಯ ಅಧ್ಯಕ್ಷತೆವಹಿಸುವರು. ಕಾದಂಬರಿಕಾರ ಯ.ರು.ಪಾಟೀಲ ಅಶಯ ನುಡಿ ಮಂಡಿಸುವರು. ಮುಖ್ಯಅತಿಥಿಯಾಗಿ ಸಂಶೋಧಕ ಡಾ.ಸಂತೋಷ ಹಾನಗಲ್ಲ ಆಗಮಿಸುವರು. ಉಪನ್ಯಸಕ ಡಾ. ಹರೀಶ ಕೋಲಕಾರ, ಸಾಹತಿ ಮಂಜುನಾಥ ಕಳಸನ್ನವರ ಉಪನ್ಯಾಸ ನೀಡುವರು.
ಸಂಜೆ 7ಕ್ಕೆ ನಡೆಯುವ ಉದ್ಘಾಟಣಾ ಸಮಾರಂಭದ ಸಾನಿಧ್ಯವನ್ನು ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಸಚಿವ ಅನಂತಕುಮಾರ ಹೆಗಡೆ ಘನ ಉಪಸ್ಥಿತಿವಹಿಸುವರು.
ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಸಚಿವರಾದ ಡಿ.ಕೆ.ಶಿವಕುಮಾರ, ಸಾ.ರಾ.ಮಹೇಶ, ಸಿ.ಎಸ್. ಶಿವಳ್ಳಿ, ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ಜಿಪಂ ಅಧ್ಯಕ್ಷೆ ಆಶಾ ಐಹೋಳೆ ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಲ್ಲಿದ್ದು, ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೊರೆ, ಪ್ರಕಾಶ ಹುಕ್ಕೇರಿ ಅನೇಕ ಗಣ್ಯರು, ರಾಜಕೀಯ ನಾಯಕರುಗಳು ಭಾಗವಹಿಸುವರು. ರಾತ್ರಿ 9ಕ್ಕೆ ಶಾಸಕ ಮಹಾಂತೇಶ ದೊಡಗೌಡರ ವೀರರ ಸ್ಮರಣೆಗಾಗಿ ದೀಪೋತ್ಸವ ಬೆಳೆಗಿಸುವರು.
ಜ.13ರಂದು ಮುಂಜಾನೆ 11ಕ್ಕೆ ಕಬಡ್ಡಿ ಸ್ಪದರ್ೇಯನ್ನು ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ, 12ಕ್ಕೆ ಮಲ್ಲಕಂಬವನ್ನು ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ವ್ಹಾಲಿಬಾಲನ್ನು ಜಿಪಂ ಸದಸ್ಯ ಅನೀಲ ಮೆಕಲಮಡರ್ಿ, ಜಂಗಿ ನಿಕಾಲಿ ಕುಸ್ತಿಯನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು.
ಸಂಜೆ 7ಕ್ಕೆ ಸಮಾರೋಪ ನಡೆಯಲಿದ್ದು, ಅರಣ್ಯ, ಜೈವಿಕ ಮತ್ತು ಪರಿಸರ ಸಚಿವ ಸತೀಶ ಜಾರಕಿಹೋಳಿ ಉಪಸ್ಥಿತಿಯಲ್ಲಿ ಸಂಶೋಧಕ ನಿಕೇತ್ ರಾಜ್ ಸಮಾರೋಪ ನುಡಿ ಮಂಡಿಸುವರು. ಕಿತ್ತೂರ ಸಂಸ್ಥಾನ ರಾಜಗುರು ಕಲ್ಮಠದ ಮಡಿವಾಳ ಶಿವಯೋಗಿಂದ್ರ ಸ್ವಾಮೀಜಿ ಸಾನಿಧ್ಯವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ಶಾಸಕ ಮಹಾಂತೇಶ ದೊಡಗೌಡರ ಮುಖ್ತ ಅತಿಥಿಗಳಾಗಿ ಪಾಲ್ಗೊಳುವರು.
ಎರಡು ದಿನಗಳಕಾಲ ವಿವಿಧ ರಸಮಂಜರಿ, ನಾಟಕ, ಭಜನಾ, ಬಯಲಾಟ, ಡೊಳ್ಳಿನ, ಚೌಡಕಿ ಪದಗಳು, ಭರತ ನಾಟ್ಯ, ವಾಯಲಿನ್ ವಾದನ, ಸುಗಮ ಸಂಗೀತ, ಜಾನಪದ ಸಾಂಸ್ಕೃತಿಕ, ಜಾದೂ, ನೃತ್ಯ, ಭಾವಗೀತೆ, ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.