ಕೊವಿಡ್-19: ಪ್ರತಿಬಂಧ ಉದ್ದೇಶ ಈಡೇರಲು ಜಿಲ್ಲಾ ನಾಕಾಬಂದಿ ರಕ್ಷಾ ಕವಚವಾಗಿ ಕೆಲಸ ಮಾಡಿ: ಸಚಿವ ಪಾಟೀಲ

ಗದಗ 18: ಕೊವಿಡ್-19 ಸೋಂಕು ತಡೆಗೆ ಜಿಲ್ಲೆಯ ಲಾಕಡೌನ ಜೊತೆಗೆ ಜಿಲ್ಲೆಗೆ ಹೊರಗಿನಿಂದ ಸೋಂಕು ಬರದಂತೆ ತಡೆಯಲು ಗದಗ ಜಿಲ್ಲೆಯ ಎಲ್ಲ ಚೆಕಪೋಸ್ಟ ಅಧಿಕಾರಿ ಸಿಬ್ಬಂದಿ ಜಿಲ್ಲೆಯ ಜನರ ರಕ್ಷಾ ಕವಚದಂತೆ ತಮಗೆ ವಹಿಸಿರುವ ತಪಸಾಣಾ ಮತ್ತು ನಿಯಂತ್ರಣ ಕಾರ್ಯಗಳನ್ನು ಯಾವುದೇ ದಾಕ್ಷಿಣ್ಯವಿಲ್ಲದೇ ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯದ  ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ  ಸಿ ಸಿ ಪಾಟೀಲ ಸೂಚಿಸಿದರು.

ಜಿಲ್ಲೆಯ  ರಾಷ್ಟ್ರೀಯ ಹೆದ್ದಾರಿ ಯಲ್ಲಿ ಇರುವ ಕೊವಿಡ್-19 ನಿಯಂತ್ರಣದ ಅಂಗವಾಗಿ ಸ್ಥಾಪಿತ ಕೊಣ್ಣೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಅವರು ಕಾರ್ಯ ಚಟುವಟಿಕೆಯನ್ನು  ಪರಿಶೀಲಿಸಿದರು.

ಕೊವಿಡ್-19 ವಿರುದ್ಧದ ಹೋರಾಟದಲ್ಲಿ ನಮ್ಮ ಜಿಲ್ಲೆಗೆ ಪ್ರವೇಶಿಸುವ ಪ್ರತಿ ವ್ಯಕ್ತಿಯ ಮತ್ತು ವಾಹನದ ತಪಾಸಣೆ ಕಟ್ಟು ನಿಟ್ಟಾಗಿ ನಡೆಸಬೇಕು. ಸಂಶಯ ಪ್ರಕರಣವಿದ್ದಲ್ಲಿ ತಕ್ಷಣ ಸಂಬಂಧಿತ  ಅಧಿಕಾರಿಗೆ ಮಾಹಿತಿ ನೀಡಬೇಕು. ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ವಾಹನಗಳನ್ನು ವಶಪಡಿಸಿಕೊಂಡು ವರದಿ ಸಲ್ಲಿಸಬೇಕು. ಇದು ಸಾರ್ವಜನಿಕ ಆರೋಗ್ಯದ ವಿಪ್ಪತ್ತಿನ ಸಂದರ್ಭವಿದ್ದು ಒಂದೇ ಒಂದು ತಪ್ಪು ವೀಪರಿತ ಪರಿಣಾಮಕ್ಕೆ ಕಾರಣವಾಗಲಿದೆ.  ಆದುದರಿಂದ ಜಿಲ್ಲೆಯ ಎಲ್ಲ  ಗಡಿ ಚೆಕಪೋಸ್ಟ ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದು ಅತ್ಯವಶಕ ಎಂದು ಸಚಿವರು ತಿಳಿಸಿದ್ದಾರೆ.

ಗದಗ ಬಾಗಲಕೋಟೆಯ ಚೆಕಪೋಸ್ಟ ನಲ್ಲಿ  ನಿರತ ಸಿಬ್ಬಂದ್ದಿಗಳಿಗೆ ಮಜ್ಜಿಗೆಯ ವಿತರಿಸಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.