ಲೋಕಕಲ್ಯಾಣಕ್ಕೆ ಕಡ್ಲೇವಾಡದಲ್ಲಿ ಕೋಟಿ ಜಪ ಯಜ್ಞ

Koti japa yajna in Kadlevada for welfare

ಲೋಕಕಲ್ಯಾಣಕ್ಕೆ ಕಡ್ಲೇವಾಡದಲ್ಲಿ ಕೋಟಿ ಜಪ ಯಜ್ಞ  

ದೇವರಹಿಪ್ಪರಗಿ, 23;  ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರ ಮಠದ ಆವರಣದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಪ.ಪೂ.ಲಿಂ ಸಿದ್ದೇಶ್ವರ ಸ್ವಾಮೀಜಿ ಅವರ ಶಿಷ್ಯರಾದ ಡಾ.ಅಮೃತಾನಂದ ಶ್ರೀಗಳ ನೇತೃತ್ವದಲ್ಲಿ ಮಳೆ, ಬೆಳೆ ಸಮೃದ್ಧವಾಗಿರಲಿ, ಸರ್ವಜನರು ಸುಖವಾಗಿರಲಿ ಎನ್ನುವ ಸದುದ್ದೇಶದ ಲೋಕ ಕಲ್ಯಾಣಾರ್ಥ ಇದೇ ಫೆ.26ರ ಬುಧವಾರದಂದು ಬೆಳಿಗ್ಗೆ ಕೋಟಿಜಪ ಯಜ್ಞ ಕಾರ್ಯಕ್ರಮ ನಡೆಯಲಿದೆ ಹಾಗೂ ಗುರುವಾರ ಫೆ.27 ರಂದು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ನಡೆಯಲಿದೆ ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆಧ್ಯಾತ್ಮಿಕ ಪ್ರವಚನ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಹಿಕುಮಾರ ಬಿಸನಾಳ ಹಾಗೂ ಮುಖಂಡರಾದ ಸಾಹೇಬಗೌಡ ರೆಡ್ಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.