ಕೊಪ್ಪಳ ತಾಲೂಕ ಮಟ್ಟದ ಕಾರ್ಯಕ್ರಮ ಯಶಸ್ವಿ

ಕೊಪ್ಪಳ 22: ಕೊಪ್ಪಳ ತಾಲೂಕ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ "ವಿಶ್ವ ಶೌಚಾಲಯ ದಿನಾಚರಣೆ'' ಅಂಗವಾಗಿ ಆಯೋಜಿಸಲಾದ ಕೊಪ್ಪಳ ತಾಲೂಕ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.  

ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಬೇಸ್ಲೈನ್ ಸವರ್ೇ 2012ರ ಪ್ರಕಾರ ಕೊಪ್ಪಳ ತಾಲೂಕು ಈಗಾಗಲೇ ಸಂಪೂರ್ಣ ಬಯಲು ಬಹಿದರ್ೆಸೆ ಮುಕ್ತವಾಗಿದ್ದು, ಈ ನಿಟ್ಟಿನಲ್ಲಿ ವೈಯಕ್ತಿಕ ಶೌಚಾಲಯಗಳ ಬಳಕೆಯ ಕುರಿತು ಶಿವಪೂರ ಗ್ರಾಮ ಪಂಚಾಯತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ತಾಲೂಕ ಮಟ್ಟದ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.  

ಕೊಪ್ಪಳ ತಾಲೂಕ ಪಂಚಾಯತಿ ಅಧ್ಯಕ್ಷರಾದ ಬಾಲಚಂದ್ರನ್ ಅವರು ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ, ಗ್ರಾಮೀಣ ಭಾಗದ ಬಯಲು ಬಹಿದರ್ೆಸೆ ಹೋಗುವದು ಅನಿಷ್ಠ ಪದ್ದತಿಯಾಗಿದ್ದು ಅದನ್ನು ತೋಲಗಿಸುವದು ಸಾರ್ವಜನಿಕರ, ಜನಪ್ರತಿನಿಧಿಗಳ, ಅಧಿಕಾರಿಗಳ ಪಾತ್ರ ಶ್ಲಾಘನೀಯವಾಗಿದ್ದು, ಬರುವ ದಿನಗಳಲ್ಲಿ ಕೊಪ್ಪಳ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯ ಹೊಂದಿದ ಕುಟುಂಬಗಳು ಬಳಕೆ ಮಾಡಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿವಾರು ಹಮ್ಮಿಕೊಳ್ಳಲಾಗುತ್ತದೆ ಎಂದರು.  

ತಾಲೂಕ ಯೋಜನಾಧಿಕಾರಿ ಶರಣಯ್ಯ ಸಸಿಮಠ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹುಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನುರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿಮರ್ಿಸಿದ್ದು, ಪ್ರತಿದಿನ ಸಂಗ್ರಹಿಸಿದ ತ್ಯಾಜ್ಯವನ್ನು ಮರುಬಳಕೆ ಆಗುತ್ತಿದ್ದು ಇದು ಸಹ ರಾಜ್ಯದಲ್ಲಿ ಮಾದರಿಯಾಗಿದೆ.  ಈ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ತಮ್ಮ ಜಿಲ್ಲೆಯಲ್ಲಿ ಈ ಘನತಾಜ್ಯ ಘಟಕವನ್ನು ಸ್ಥಾಪಿಸಲು ಮಾಹಿತಿ ಪಡೆದಿದ್ದಾರೆ.  ಘನತ್ಯಾಜ್ಯ ವಿಲೇವಾರಿ ಘಟಕವನ್ನು ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿಮರ್ಿಸಲು ಈಗಾಗಲೇ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆಯನ್ನು ಕಳಿಸಲಾಗಿದೆ.  ಶೌಚಾಲಯವನ್ನು ನಿಮರ್ಿಸಿಕೊಳ್ಳುವುದು, ಎಷ್ಟು ಮುಖ್ಯಯೋ ಅದನ್ನು ಬಳಸುವುದು ಸಹ ಅಷ್ಟೆ ಮುಖ್ಯವಾಗಿದೆ.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಸ್.ಬಿ.ಎಮ್ ವಿಷಯ ನಿವರ್ಾಹಕರು ಮತ್ತು ಸಮಾಲೋಚಕರು, ಅಂಗನವಾಡಿ ಆಶಾ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಕರು, ಮಕ್ಕಳು ಸಹ ಹಾಜರಿದ್ದರು.  ಅಲ್ಲದೇ ವೈಯಕ್ತಿಕ ಶೌಚಾಲಯಗಳ ಬಳಕೆಯ ಕುರಿತು ಶಿವಪುರ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಜರುಗಿತು.  ಸ್ವಚ್ಛತೆಯ ಜಾಗೃತಿ, ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ಶಾಲಾ ಮಕ್ಕಳಿಗೆ ಕೈ ತೊಳೆಯಿವುದು ಮತ್ತು ಸ್ವಚ್ಛತೆಯ ಜೊತೆಗೆ ಶ್ರಮದಾನವನ್ನು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಅಂಗನವಾಡಿ, ಶಾಲಾ, ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕೈಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.