ಕ್ಷಯ ಮುಕ್ತ ಅಭಿಯಾನದಲ್ಲಿ ಕೊಪ್ಪಳವು ರಾಜ್ಯದಲ್ಲಿಯೇ ಅಗ್ರಸ್ಥಾನ: ಜಿಲ್ಲಾಧಿಕಾರಿ ನಲಿನ ಅತುಲ್
ಕೊಪ್ಪಳ 24: ಭಾರತಾದ್ಯಂತ ಕ್ಷಯರೋಗದ ಪ್ರಮಾಣ ಮತ್ತು ಮರಣದ ದರ ಹೆಚ್ಚಿರುವ 347 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾದ 100 ದಿನಗಳ ಕ್ಷಯಮುಕ್ತ ಅಭಿಯಾನದ ಯಶಸ್ಸಿನಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದ ಅಗ್ರಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ನಲಿನ ಅತುಲ್ ಹೆಳಿದರು.ಅವರು ಸೋಮವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೋವಿಡ್ ತರಹದ ಒಂದು ಫ್ಯಾಂಡಮಿಕ್ ವೈರಸ್ ಅನ್ನು ಹೇಗೆ ಎಲ್ಲರು ಒಡಗೂಡಿ ಎದುರಿಸಿ ಕೋವಿಡ್ ಮುಕ್ತ ಭಾರತವನ್ಮಾಗಿಸಿದಿವೊ, ಅದೆ ತರ ಕಂಟಿನ್ಯೂ ಫ್ಯಾಂಡಮಿಕ್ ತರ ಇರುವ ಕ್ಷಯರೋಗವನ್ನ ನಮ್ಮ ದೇಶದಿಂದ ಮುಕ್ತ ವಾಗಿಸಲು ಎಲ್ಲರೂ ಒಂದು ಗೂಡಿ ಕೆಲಸ ಮಾಡಬೇಕು ಎಂದರು.ಇಂದು ಸನ್ಮಾನ ಸ್ವೀಕರಿಸಿದ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿಗಳು ಹಾಗೂ ಸದಸ್ಯರು ತಮ್ಮ ಗ್ರಾಮದಲ್ಲಿ ಹೇಗೆ ಕ್ಷಯರೋಗ ಮುಕ್ತ ಗ್ರಾಮವನ್ನಾಗಿ ಮಾಡಿದ್ದಿರೋ, ಅದೇ ರೀತಿ ಸುತ್ತ ಮುತ್ತಲಿನ ಊರಿಗಳಿಗು ಸಹಕರಿಸಿ ಅವುಗಳನ್ನು ಕೂಡ ಕ್ಷಯ ಮುಕ್ತ ಗ್ರಾಮವನ್ನಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ದುರ್ಬಲತೆ ಮತ್ತು ಅಪೌಷ್ಟಿಕತೆ ಉಳ್ಳ ಕ್ಷಯ ರೋಗಿಗಳಿ ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸ್ವಲ್ಪ ಮಟ್ಟಿಗೆ ಅಪೌಷ್ಟಿಕತೆಯಿಂದ ಹೋರಬಲು ಸಹಾಯಕ ವಾಗಿದೆ. ಅದೇ ರೀತಿಯಲ್ಲಿ ಕೇಂದ್ರದ ನಿಕಷಯ್ ಪೋಷಣ್ ಯೋಜನೆ ಅಡಿಯಲ್ಲಿ ದೃಡಪಟ್ಟ ಪ್ರತಿ ಕ್ಷಯರೋಗಿಗೆ ಚಿಕಿತ್ಸೆ ಅವಧಿಯವರೆಗೂ ಮಾಸಿಕವಾಗಿ 1000 ರೂ ಗಳನ್ನು ನೇರವಾಗಿ ಅವರ ಬ್ಯಾಂಕ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 33 ಲಕ್ಷಗಳನ್ನು ಡಿ.ಬಿ.ಟಿ. ಮುಖಾಂತರ ಪಾವತಿಸಲಾಗಿರುತ್ತಿದೆ ಎಂದು ತಿಳಿಸಿದರು.ನಾವು ಸುಮಾರು ಒಂದು ಕೋಟಿ ರೂ.ಗಳನ್ನ ಅನುಸರಣೆಗಾಗಿ ಅವಶ್ಯವಿರುವ ಹೆಚ್ಚುವರಿ4 ಸಿಬಿನಾಟ್ ಯಂತ್ರಗಳನ್ನು ಕೆ.ಕೆ.ಆರಿ್ಡ.ಬಿ. ಅನುದಾನದಡಿಯಲ್ಲಿ ಮಂಜೂರು ಮಾಡಿದ್ದೆವೆ. ಅಲ್ಲದೆ ಸ್ಥಾಯಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆಳಿಗೆ, ಕಂಪನಿಗಳಿಗೆ ಅಪೌಷ್ಟಿಕತೆ ಉಳ್ಳ ಕ್ಷಯ ರೋಗಗಳಿಗೆ ಸಹಾಯ ಮಾಡುವಂತೆ ನಿರ್ದೇಶನ ನಿಡಲಾಗಿತ್ತು. ಅದಕ್ಕೆ ಕೆಲವು ಕಂಪನಿಗಳು ಮುಂದಾಗಿ ಕ್ಷಯರೋಗಿಗಳನ್ನ ದತ್ತು ಪಡೆದು ಅವರಿಗೆ ಪೌಷ್ಟಿಕಾಂಶ ಒದಗಿಸುತ್ತಿವೆ. ಜಿಲ್ಲೆಯಲ್ಲಿನ ಪವರ್ಗ್ರಿಡ್ ಕಾರ್ೋರೇಷನ್ ಆಫ್ ಇಂಡಿಯಾ ಸಂಸ್ಥೆಯವರಿಗೆ ಸಿಬಿನಾಟ್ ಯಂತ್ರ ಮತ್ತು ಹ್ಯಾಂಡ್ ಹೆಲ್ಡ್ ಕ್ಷ-ಕಿರಣ ಯಂತ್ರವನ್ನು ಒದಗಿಸುವಂತೆ ಕೆಳಿದ್ದೆವು, ಅವರು 2 ಸಿಬಿನಾಟ್ ಯಂತ್ರಗಳನ್ನ ಮತ್ತು3 ಹ್ಯಾಂಡ್ ಹೆಲ್ಡ್ ಕ್ಷ-ಕಿರಣ ಯಂತ್ರವನ್ನು ಕೋಡಿಸಿದ್ದಾರೆ ಎಂದರು.*ಪ್ರಶಸ್ತಿ ಪ್ರಧಾನ:* ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಅಭಿಯಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಸದಸ್ಯರುಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ತಾಲುಕಿನ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶೀಧರ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ್, ಕೊಪ್ಪಳ ಜಿಲ್ಲಾ ಕ್ಷಯ ಮುಕ್ತ ಆಂದೋಲನದ ರಾಯಭಾರಿಯಾದ ಗಂಗಾವತಿ ಪ್ರಾಣೇಶ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಕುಷ್ಠರೋಗ ತಜ್ಞ ಡಾ.ಪ್ರಕಾಶ, ಗಂಗಾವತಿ ತಾಲೂಕ ಆರೋಗ್ಯ ಅಧಿಕಾರಿ ಗೌರಿಶಂಕರ, ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರ್, ಯಲಬುರ್ಗಾ ಆರೋಗ್ಯ ಅಧಿಕಾರಿ ಡಾ. ಅಂಬರೀಶ್, ಗಂಗಾವತಿಯ ಚಿಕ್ಕ ಮಕ್ಕಳ ತಜ್ಞ ಶರ್ಪ, ಕೊಪ್ಪಳ ಕಿಮ್ಸ್ ಆಸ್ಪತ್ರೆಯ ತಜ್ಞರು ಡಾ.ಪ್ರಕಾಶ, ಕುಷ್ಟಗಿ ತಾಲೂಕ ಆರೋಗ್ಯ ಅಧಿಕಾರಿ ಕೆ.ಎಸ್.ರೆಡ್ಡಿ, ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಹಾಗೂ ಜಿಲ್ಲೆಯ ಆರೋಗ್ಯ ಇಲಾಖೆಯ ತಜ್ಞರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳುಸೇರಿದಂತೆ ಇತರರು ಉಪಸ್ಥಿತರಿದ್ದರು.