ಕೊಪ್ಪಳ 02: ಕೊಪ್ಪಳ-ಭಾಗ್ಯನಗರ ರಸ್ತೆ ಮೇಲ್ಸೇತುವೆಯನ್ನು ಸಂಸದ ಕರಡಿ ಸಂಗಣ್ಣ ಅವರು ಶನಿವಾರದಂದು ಲೋಕಾರ್ಪಣೆಗೋಳಿಸಿದರು.
ನೈರುತ್ಯ ರೇಲ್ವೆ ವತಿಯಿಂದ ಕೊಪ್ಪಳ-ಭಾಗ್ಯನಗರ ರಸ್ತೆ ಮೇಲ್ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಶನಿವಾರದಂದು ಭಾಗ್ಯನಗರದಲ್ಲಿ ಆಯೋಜಿಸಲಾತ್ತು.
ಕೊಪ್ಪಳ-ಭಾಗ್ಯನಗರ ರಸ್ತೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೋಳಿಸಿದ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕೊಪ್ಪಳ ಮತ್ತು ಭಾಗ್ಯನಗರ ಜನತೆಯ ಬಹುದಿನದ ಕನಸು ಇಂದು ನನಸಾಗಿದೆ. ಕೊಪ್ಪಳ-ಭಾಗ್ಯನಗರ ಸಂಪರ್ಕ ಕಲ್ಪಿಸಲು ರಸ್ತೆ ಮೇಲ್ಸೇತುವೆಯನ್ನು ನಿಮರ್ಿಸುವುದು ಈ ಭಾಗದ ಜನರ ಬಹು ದಿನದ ಬೇಡಿಕೆ ಮತ್ತು ಕನಸಾಗಿತ್ತು. ಬಹು ದಿನದ ಹೋರಾಟದ ಫಲವಾಗಿ ಇಂದು ಈ ಸೇತುವೆ ನಿಮರ್ಾಣವಾಗಿ ನಿಂತಿದೆ. ಸಾರ್ವಜನಿಕರು ಈ ಹಿಂದೆ ನಗರದಿಂದ ಭಾಗ್ಯನಗರಕ್ಕೆ ಹೋಗಬೇಕಾದರೆ ಲೈನ್ ಕ್ರಾಸಿಂಗ್ನಿಂದಾಗಿ ಗಂಟೆಗಟ್ಟಲೇ ಕಾಯುವ ಸ್ಥಿತಿ ಇತ್ತು. ಆದರೆ ಇಂದು ಸಾರ್ವಜನಿಕರು ಕೆಲವೇ ಕೆಲವು ನಿಮಿಷಗಳಲ್ಲಿ ಭಾಗ್ಯನಗರದಿಂದ ಕೊಪ್ಪಳಕ್ಕೆ ಮತ್ತು ಕೊಪ್ಪಳದಿಂದ ಭಾಗ್ಯನಗರಕ್ಕೆ ತಲುಪಬವುದಾಗಿದೆ. ಈ ಸೇತುವೆಯಿಂದ ಸಾರಿಗೆ ವ್ಯವಸ್ಥೆ ಸುಗಮವಾಗಿ ವ್ಯಪಾರ ವೈವಾಟುಗಳು ಸಹ ಹೆಚ್ಚಿಸಲಿದ್ದು, ಸಮಯದ ಉಳಿತಾಯವು ಸಹ ಆಗುವುದು. ಅಲ್ಲದೇ ಕೊಪ್ಪಳ ಹಾಗೂ ಭಾಗ್ಯನಗರ ಸಂಪರ್ಕ ಕಲ್ಪಿಸುವ ಭಾಗ್ಯನಗರದ ಹೆಬ್ಬಾಗಿಲು ಇಂದಿನಿಂದ ಪ್ರಾರಂಭವಾಗಿದಂತಾಗಿದೆ ಎಂದರು.
ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶೇಕಮ್ಮ ಸೋಮಣ್ಣ ದೇವರಮನಿ, ಚಿಪ್ ಇಂಜಿನಿಯರ್ ರಾಮಗೋಪಾಲ್, ಹುಬ್ಬಳಿ ರೈಲ್ವೆ ಎ.ಡಿ.ಆರ್.ಎಂ. ಮುರಳಿ ಕೃಷ್ಣ, ಗಣ್ಯರಾದ ಸಿ.ವಿ ಚಂದ್ರಶೇಖರ್, ಹಿರಿಯ ವಕೀಲ ರಾಘವೇಂದ್ರ ಪಾನಗಂಟಿ, ವಾಣಿಜ್ಯ ಉದ್ದಿಮಿ ಪೆದ್ದ ಸುಬ್ಬಯ್ಯ, ಎ.ಎಫ್. ಉಮಾ ಮಹೇಶ್ವರ್ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದರು.