ಲೋಕದರ್ಶನ ವರದಿ
ಕೊಪ್ಪಳ 05: ಕೇಂದ್ರದ ಐದು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಇಡೀ ದೇಶದ ಜನತೆ ಯುಪಿಎ ಸಕರ್ಾರ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ. ಇದು ಬಿಜೆಪಿ ವಿರುದ್ಧದ ತೀಪರ್ು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಕೊಪ್ಪಳ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮೈತ್ರಿ ಅಭ್ಯಥರ್ಿ ರಾಜಶೇಖರ್ ಹಿಟ್ನಾಳ ಪರ ಮತಯಾಚಿಸಿ ಮಾತನಾಡಿದರು ನನ್ನ ಅವಧಿಯಲ್ಲಿ 165 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ ಮೋದಿ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಕಪ್ಪು ಹಣ ತರಲಾಗದಿದ್ದರೆ ಯಾಕೆ ಸುಳ್ಳು ಹೇಳಿದಿರಿ? ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಮತ ಪಡೆದು ಅಧಿಕಾರಕ್ಕೆ ಬಂದಿರಿ ಆದರೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯುವಕರು ಕಂಗಾಲಾಗಿದ್ದಾರೆ. ಮೋದಿ ದೇಶದಲ್ಲಿ ಮಾಡಿದ್ದು ಮನ್ ಕಿ ಬಾತ್, ವಿದೇಶಿ ಪ್ರವಾಸ ಇವೇ ದೊಡ್ಡ ಸಾಧನೆ. ರೈತರ ಸಾಲಮನ್ನಾ ಮಾಡಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲವನ್ನೂ ಸಹ ಮನ್ನಾ ಮಾಡಲಿಲ್ಲ. ಸಮ್ಮಿಶ್ರ ಸಕರ್ಾರ ನನ್ನ ಅವಧಿಯ ಎಲ್ಲ ಭರವಸೆಗಳನ್ನು ಮುಂದುವರೆಸಿ ರೈತರ ಸಾಲಮನ್ನಾ ಮಾಡಿದೆ. ಆದರೆ ಮೋದಿ ಚುನಾವಣೆ ವೇಳೆ ರೈತರಿಗೆ 6000 ಸಾವಿರ ಕೊಡುತ್ತೇನೆ ಎಂದು ಮಂಕುಬೂದಿ ಎರಚುವ ಮೂಲ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ, ಮೋದಿ ರೈತವಿರೋಧಿಯಾಗಿದ್ದಾರೆ, ಆ ಪಕ್ಷಕ್ಕೆ ಮತ ನೀಡದೇ ಕಾಂಗ್ರೆಸ್ಗೆ ಮತ ನೀಡಿ ಎಂದು ಕೋರಿದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಲು ಆಗೋದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಹಸಿರು ಶಾಲು ಹಾಕ್ತಾರಲ್ಲ ನಾಚಿಕೆ ಆಗಲ್ವಾ ನಿಮಗೆ? ಬಿಜೆಪಿಯವರಿಗೆ ರೈತರ ಸಾಲ ಮನ್ನಾ ಮಾಡಲು ಆಗಲ್ಲ ಆದರೆ ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ಸಾಲಮನ್ನಾ ಮಾಡಿ ರೈತ ವಿರೋಧಿಯಾಗಿದ್ದಾರೆ. ಈಶ್ಚರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಆತನಿಗೆ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದೆ. ಹೀಗಾಗಿ ಏನೇನೋ ಮಾತನಾಡುತ್ತಾನೆ. ನೀವು ನಿಜವಾಗಲೂ ಹಿಂದಳಿದವರು ಆಗಿದ್ದರೆ ನಿಮ್ಮ ಪಕ್ಷ ಒಂದೇ ಒಂದು ಕುರುಬರಿಗೆ, ಮುಸ್ಲಿಂರಿಗೆ ಟಿಕೆಟ್ ಕೊಟ್ಟಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದರೆ ಇದೇನಾ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರಾಯರಡ್ಡಿ ಮಾತನಾಡಿ, ಮೋದಿ ನೀಡಿದ ಯಾವುದೇ ಭರವಸೆ ಈಡೇರಿಸಲಿಲ್ಲ. ಬರೀ ಪ್ರಚಾರ ಮಾಡುತ್ತಲೇ ನಯವಂಚನೆ ಮಾಡಿದ್ದಾರೆ. ಕುಟುಂಬದ ಆಥರ್ಿಕ ಪರಿಸ್ಥಿತಿ ಸುಧಾರಿಸಿಲ್ಲ. ದೇಶದಲ್ಲಿ ಬದಲಾವಣೆ ಆಗಬೇಕಾದರೆ ಕಾಂಗ್ರೆಸ್ಗೆ ಮತಹಾಕಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಸಿದ್ದರಾಮಯ್ಯ ಐದು ವರ್ಷ ಆಡಳಿತದಲ್ಲಿ ಮಾಡಿದ ಸಾಧನೆಯಲ್ಲಿ ಮೋದಿ ಒಂದೇ ಒಂದು ಸಾಧನೆ ಮಾಡಿದ್ದಾನೆಯೆ? 56 ಇಂಚಿನ ಎದೆ ಇದೆ ಎನ್ನುವ ಮೋದಿ ಅದರಲ್ಲಿ ನಮ್ ಸಿದ್ದರಾಮಯ್ಯನ ಹೃದಯ ಇದೆಯೆ? ಇಡೀ ದೇಶದಲ್ಲಿ ಮೂರು ಹೊತ್ತು ಎಲ್ಲರೂ ಹೊಟ್ಟೆತುಂಬ ಊಟ ಮಾಡುತ್ತಾರೆ ಎಂದರೆ ಅದು ಕನರ್ಾಟಕದ ಜನ ಮಾತ್ರ. ಮೋದಿ ಎನ್ಆರ್ಐ ಪ್ರಧಾನಿ. ಬರೀ ವಿದೇಶ ಸುತ್ತುವುದರಲ್ಲೆ ಕಾಲ ಹರಣ ಮಾಡಿದರು. ಸೈನಿಕರ ಹೆಸರಿನಲ್ಲಿ ಇಂದು ರಾಜಕಾರಣ ಮಾಡುತ್ತಾರೆ. ಸೈನಿಕರಿಗೆ ಯಾವ ಪಕ್ಷನೂ ಇಲ್ಲ ಜಾತಿನೂ ಇಲ್ಲ. ಮೋದಿ ಕಲಿಯುಗದ ರಾವಣ, ದಲಿತರಿಗೆ ಸ್ವಾಭಿಮಾನ ಇದ್ರೆ ಬಿಜೆಪಿಯಲ್ಲಿ ಇರಬಾರದು ಎಂದು ಛೇಡಿಸಿದರು.
ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರು ದೇಶದಲ್ಲಿ ಐದು ವರ್ಷ ಬರೀ ಸುಳ್ಳು ಹೇಳಿ ಆಡಳಿತ ನೀಡಿದ್ದಾರೆ. ಮೋದಿ 15 ಲಕ್ಷ ಹಾಕುತ್ತೇವೆ ಎಂದು ಹೇಳಿದರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಮಾಡಲಿಲ್ಲ. ಸುಳ್ಳೆ ಬಿಜೆಪಿಯ ಮನೆದೇವರು. ಈ ಬಾರಿ ಕರಡಿ ಸಂಗಣ್ಣ ಅವರನ್ನು ಕಾಡಿಗೆ ಕಳುಹಿಸಿ, ರಾಜಶೇಖ ಸಂಸತ್ತಿಗೆ ಕಳುಹಿಸಿ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿದರು. ಸಮಾವೇಶದಲ್ಲಿ ಸಚಿವ ಈ. ತುಕಾರಾಂ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಶಿವರಾಮಗೌಡ, ಕೆ. ವಿರೂಪಾಕ್ಷಪ್ಪ, ಶಾಸಕ ಪ್ರತಾಪಗೌಡ ಪಾಟೀಲ್, ವಿಪ ಸದಸ್ಯ ಬಸವರಾಜ ಇಟಿಗಿ, ಮಾಜಿ ವಿಪ ಸದಸ್ಯ ಎಚ್.ಆರ್. ಶ್ರೀನಾಥ, ಕರಿಯಣ್ಣ ಸಂಗಟಿ, ಹಂಪನಗೌಡ ಬಾದಾಲರ್ಿ, ಮಲ್ಲಿಕಾಜರ್ುನ ನಾಗಪ್ಪ, ಹಸನ್ಸಾಬ್ ದೋಟಿಹಾಳ, ಟಿ.ಎಂ. ಚಂದ್ರಶೇಖರ ಸ್ವಾಮಿ, ಬಸವನಗೌಡ ಬಾದಾಲರ್ಿ, ಬಿ.ಎಂ. ನಾಗರಾಜ, ಚಂದ್ರಶೇಖರ್ ಭಟ್, ರಾಘವೇಂದ್ರ ಹಿಟ್ನಾಳ, ವಿಶ್ವನಾಥರಡ್ಡಿ, ಅಭ್ಯಥರ್ಿಕೆ.ರಾಜಶೇಖರ್ ಹಿಟ್ನಾಳ, ಬಸವರಾಜ ಹಿಟ್ನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.