ಕೊಪ್ಪಳ 15: ಗಣತಿದಾರರು ತಮಗೆ ನಿದರ್ಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೆ ಭೇಟಿನೀಡುವುದರ ಮೂಲಕ ಅಲ್ಲಿ ನಡೆಯುವ ವ್ಯಾಪಾರ-ಉದ್ಯಮದ ವರದಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
7ನೇ ಆರ್ಥಿಕ ಗಣತಿ 2019ರ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
7ನೇ ಆರ್ಥಿಕ ಗಣತಿಯ ಉದ್ದೇಶ, ಕಾರ್ಯವ್ಯಾಪ್ತಿ ಅನ್ವಯ ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟ ಮಂತ್ರಾಲಯವು ಕಾಮನ ಸವರ್ಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ & ಐಟಿ ಇದರ ಮೂಲಕ 7ನೇ ಆರ್ಥಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದ್ದು ಇಂದು (ಜೂನ್.15 ರಂದು) ದೇಶಾದ್ಯಂತ ಚಾಲನೆಗೊಂಡಿದೆ. ಆಥರ್ಿಕ ಗಣತಿಯ ಅವಧಿ ಮೂರು ತಿಂಗಳದ್ದಾಗಿದೆ. ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿದರ್ಿಷ್ಟಪಡಿಸಿದ ಗಡಿಯೊಳಗೆ ಬರುವ ಪ್ರತಿಮನೆ, ಕಟ್ಟಡಗಳಿಗೂ ಭೇಟಿನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆ ಮಾಡಬೇಕು. ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆಥರ್ಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ.
ದೇಶದಲ್ಲಿ ಈವರೆಗೆ 6 ಆರ್ಥಿಕಗಣತಿಗಳು ನಡೆದಿದ್ದು, 1977ರಲ್ಲಿ ಮೊದಲ ಆರ್ಥಿಕ ಗಣತಿ, ಆಬಳಿಕ 1980, 1990, 1998, 2005, 2013 ರಲ್ಲಿ ನಂತರದ ಗಣತಿ ಕಾರ್ಯನಡೆದಿದೆ. ಜಿಲ್ಲೆಯಲ್ಲಿ 6ನೇ ಆಥರ್ಿಕ ಗಣತಿಯಲ್ಲಿ 36,964 ಉದ್ಯಮಗಳನ್ನು ಗುರುತಿಸಿದ್ದು, ಈ ಉದ್ಯಮಗಳಲ್ಲಿ ಒಟ್ಟು 1,60,472 ಕೆಲಸಗಾರರನ್ನು ಗುರುತಿಸಲಾಗಿದೆ. ಇದು 5ನೇ ಆಥರ್ಿಕ ಗಣತಿಯಲ್ಲಿ ಗುರುತಿಸಿದ 60381 ಉದ್ಯಮಗಳಿಗಿಂತ ಶೇಕಡ 37 ರಷ್ಟು ಉದ್ಯಮಗಳ ಹೆಚ್ಚಳವಾಗಿರುತ್ತದೆ.
ಉಸ್ತುವಾರಿ ಸಮಿತಿಗಳ ಕರ್ತವ್ಯಗಳು: ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕ್ಷೇತ್ರಕಾರ್ಯಕ್ಕೆ ಸಿದ್ಧತೆ ಮಾಡುವುದು, ಪ್ರಗತಿ ಪರಿಶೀಲನೆ ಮತ್ತು ಅಡಚಣೆಗಳ ನಿವಾರಣೆಗೆ ನಿಯಮಿತವಾಗಿ ಕ್ರಮವಹಿಸುವುದು. ರಾಜ್ಯ ಮಟ್ಟದ ಚಾಲನಾ ಸಮಿತಿಗೆ ಫೀಡ್ಬ್ಯಾಕ್ ನೀಡುವುದು. ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯ ಮಟ್ಟದ ಚಾಲನಾ ಸಮಿತಿಯ ಸೂಚನೆ ಹಾಗೂ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು. 7ನೇ ಆಥರ್ಿಕ ಗಣತಿಯ ಕ್ಷೇತ್ರ ಕಾರ್ಯದಲ್ಲಿ ಸಿ.ಎಸ್.ಸಿ.-ಎಸ್.ಪಿ.ವಿ ಯೊಂದಿಗೆ ಸಹಕರಿಸಲು ಸ್ಥಳೀಯ ಆಡಳಿತ ಮತ್ತು ಪಂಚಾಯ ರಾಜ್ ಸ್ಥೆಗಳಿಗೆ ಸೂಕ್ತ ಸೂಚನೆ ನೀಡುವುದು. 7ನೇ ಆರ್ಥಿಕ ಗಣತಿಯ ವಾಡರ್್, ಗ್ರಾಮಗಳ ಆಡಳಿತಾತ್ಮಕ ಕ್ಷೇತ್ರ ನಕ್ಷೆಗಳನ್ನು ಒದಗಿಸುವುದು. ಮತ್ತು ಕ್ಷೇತ್ರ ಕಾರ್ಯದಲ್ಲಿ ಸಹಾಯ ಮಾಡಲು ಸಂಬಂಧಿಸಿದವರಿಗೆ ಸೂಚನೆ ನೀಡುವುದು. ಜಿಲ್ಲಾ ಮಟ್ಟದ ತಾತ್ಕಾಲಿಕ ಫಲಿತಾಂಶವನ್ನು ಅನುಮೋದಿಸುವುದು ಹಾಗೂ ಪ್ರಸಾರಮಾಡುವುದುಗಿದೆ.
ವಿವಿಧ ಇಲಾಖೆಗಳ ಸಂಕ್ಷಿಪ್ತ ಕಾರ್ಯ ಚಟುವಟಿಕೆಗಳು: ಜಿ.ಪಂ. ಮುಖ್ಯಕಾರ್ಯ ನಿವರ್ಾಹಕ ಅಧಿಕಾರಿಗಳ ನಿದರ್ೇಶನದಂತೆ ಜಿಲ್ಲೆಯ ಎಲ್ಲಾ ತಾಲೂಕಾ ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮತಮ್ಮ ತಾಲೂಕುಗಳಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಈ ಗಣತಿಯ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಗ್ರಾಮ ಪಂಚಾಯತದ ಸದಸ್ಯರುಗಳಿಗೆ ತಿಳುವಳಿಕೆ ಮತ್ತು ಗಣತಿಯ ಮಹತ್ವವನ್ನು ತಿಳಿಸಬೇಕಾಗುತ್ತದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ನಿದರ್ೇಶನದಂತೆ ತಾಲೂಕಾ ಆರಕ್ಷಕ ಇಲಾಖೆಯು ಗಣತಿದಾರರು, ಮೇಲ್ವಿಚಾರಕರು ಮನೆ ಮನೆ ಭೇಟಿ ಹಾಗೂ ಉದ್ದಿಮೆಗಳ ಗಣತಿಕಾರ್ಯ ನಡೆಸುತ್ತಿರುವಾಗ ಆಕಸ್ಮಿಕ ಸಂದರ್ಭಗಳಲ್ಲಿ ರಕ್ಷಣೆಯನ್ನು ನೀಡಬೇಕಾಗಿರುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿದರ್ೇಶಕರು, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು, ಸಹಾಯಕ ಆಯುಕ್ತರು, ಜಿಲ್ಲಾ ಕಾಮರ್ಿಕ ಅಧಿಕಾರಿಗಳು, ಜಿಲ್ಲಾ ಉಪ ನೋಂದಣಾಧಿಕಾರಿಗಳು, ಜಿಲ್ಲಾ ಸಹಕಾರ ಸಂಘಗಳ ಉಪ ನಿದರ್ೇಶಕರು, ಕಾಖರ್ಾನೆ ಮತ್ತು ಬಾಯ್ಲರುಗಳ ಕಚೇರಿ ಇವರು ತಮ್ಮಲ್ಲಿ ನೋಂದಣಿಯಾದ ಎಲ್ಲಾ ಉದ್ಯಮ ಘಟಕಗಳ ಪಟ್ಟಿಯನ್ನು ತಾಲೂಕಾವಾರು ತಯಾರಿಸಿ ಡಿಸ್ಟ್ರಿಕ್ಟ್ ಮ್ಯಾನೇಜರ್, ಸಿಎಸ್ಸಿ, ಜಿಲ್ಲೆಯಎಲ್ಲಾ ತಹಶಿಲ್ದಾರರಿಗೆ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ಈ ಕೂಡಲೇ ಸಲ್ಲಿಸಬೇಕು.
ತರಬೇತಿ ಮತ್ತು ಅನುಷ್ಠಾನ: 7ನೇ ಆಥರ್ಿಕಗಣತಿಯ ಕ್ಷೇತ್ರಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕಕೈಗೊಳ್ಳಲು ಉದ್ದೇಶಿಸಲಾಗಿದೆ. ಗಣತಿ ಕಾರ್ಯ ಮತ್ತು ಮೊದಲನೇ ಹಂತದ ಮೇಲ್ವಿಚಾರಣೆಯನ್ನು ಕಾಮನ ಸವರ್ಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ & ಐಟಿ ಇದರ ಮೂಲಕ ಕೈಗೊಳ್ಳಲಾಗುತ್ತದೆ. 2011ರ ಗಣತಿ ಬ್ಲಾಕುಗಳು ಮತ್ತು ನಕ್ಷೆಗಳನ್ನು ಜನಗಣತಿ ನಿದರ್ೇಶನಾಲಯದಿಂದ ಸಿಎಸ್ಸಿ ಗಳಿಗೆ ಒದಗಿಸಲಾಗುತ್ತದೆ. ನೋಂದಾಯಿತ ಗಣತಿದಾರರಿಗೆ ಹಂಚಿಕೆಯಾಗುವ ಗಣತಿ ಬ್ಲಾಕುಗಳ ವಿವರಗಳು ಮೊಬೈಲ್ ಆಪ್ನಲ್ಲಿಯೇ ಲಭ್ಯವಾಗುವ ವ್ಯವಸ್ಥೆಗೊಳಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಬೆಂಗಳೂರಿನಲ್ಲಿ ಜೂನ್. 07 ರಂದು ಎಲ್ಲಾ ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಿಗೆ, ಜಂಟಿನಿದರ್ೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾಮನ ಸವರ್ಿಸ್ ಸೆಂಟರ್ ಇದರ ಜಿಲ್ಲಾ ವ್ಯವಸ್ಥಾಪಕರುಗಳಿಗೆ ಸಂಯುಕ್ತವಾಗಿ ತರಬೇತಿಯನ್ನು ಕೇಂದ್ರ ಸಾಂಖ್ಯಿಕ ನಿದರ್ೇಶನಾಲಯ ಮತ್ತು ಸಿಎಸ್ಸಿ ಮುಖಾಂತರ ನೀಡಲಾಗಿರುತ್ತದೆ. ಜಿಲ್ಲಾಮಟ್ಟದಲ್ಲಿ ಸಿಎಸ್ಸಿ ಜಿಲ್ಲಾ ವ್ಯವಸ್ಥಾಪಕರು ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಛೇರಿಯ ಸಂಪನ್ಮೂಲ ಅಧಿಕಾರಿಗಳು ಮೊದಲನೇ ಹಂತದ ಮೇಲ್ವಿಚಾರಕರಿಗೆ ವಿ.ಎಲ್.ಇ. ಗಳಿಗೆ ತರಬೇತಿ ನೀಡಲಿರುವರು. ಸಿಎಸ್ಸಿ ಜಿಲ್ಲಾ ವ್ಯವಸ್ಥಾಕರು ತಾಲ್ಲೂಕು ಮಟ್ಟದಲ್ಲಿ ವಿ.ಎಲ್.ಇ. ಗಳು ಗುರುತಿಸುವ ಸ್ಥಳೀಯ ಗಣತಿದಾರರಿಗೆ ತರಬೇತಿನೀಡಲಿರುವರು. ಮೊದಲನೇ ಹಂತದ ಮೇಲ್ವಿಚಾರಕರನ್ನು 7ನೇ ಆಥರ್ಿಕ ಗಣತಿಗೆ ನೋಂದಾಯಿಸಲು ಸಿಎಸ್ಸಿ ಸಂಸ್ಥೆಯು ಪರೀಕ್ಷೆನಡೆಸಿ ಆಯ್ಕೆಮಾಡುತ್ತಿದ್ದು, ಈ ಆಯ್ಕೆ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತದ ಮೇಲ್ವಿಚಾರಣೆಯನ್ನು ಸಾಂಖ್ಯಿಕ ಅಧಿಕಾರಿ, ಸಿಬ್ಬಂದಿಗಳು, ಎನ್.ಎಸ್.ಎಸ್.ಒ. ಅಧಿಕಾರಿ, ಸಿಬ್ಬಂಧಿಗಳು ನಿರ್ವಹಿಸುವರು. ಉದ್ಯಮಗಳ ಗುರುತಿಸುವಿಕೆ, ಪರಿಶೀಲನೆಗೆ ಜಿಲ್ಲಾ ಕೈಗಾರಿಕೆ ಮತ್ತು ಮಾಣಿಜ್ಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಸಹಕಾರ ಇಲಾಖೆ, ಕಾಖರ್ಾನೆ ಮತ್ತು ಬಾಯ್ಲರುಗಳ ಇಲಾಖೆ, ಕಾಮರ್ಿಕ ಇಲಾಖೆ, ಸಹಕಾರ ಸಂಘಗಳ ನೋಂದಾವಣೆ ಇಲಾಖೆ, ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ನೋಂದಾಯಿತ ಯಾವುದೇ ಉದ್ಯಮ ಗಣತಿಯಿಂದ ಬಿಟ್ಟು ಹೋಗದಂತೆ ಪರಿಶೀಲಿಸಬೇಕಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಗಣತಿದಾರರಿಗೆ ಸಹಕರಿಸಬೇಕಾಗುತ್ತದೆ. ಜಿಲ್ಲಾ ಹಾಗೂ ತಾಲೂಕ ಮಟ್ಟದ ತರಬೇತಿ ಹಾಗೂ ಕ್ಷೇತ್ರ ಸಮೀಕ್ಷಾ ಕಾರ್ಯದ ದಿನಾಂಕ ಹಾಗೂ ಇತ್ಯಾದಿ ವಿವರಗಳನ್ನು ನಿಗದಿಪಡಿಸುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಅವರು ಮಾತನಾಡಿ, 7ನೇ ಆರ್ಥಿಕ ಗಣತಿಯವನ್ನು ಸುಗಮವಾಗಿ ಅನುಷ್ಠಾನದ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಸಂಬಂಧಿಸಿದ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸಕರ್ಾರವು ರಚಿಸಿ ಆದೇಶಿಸಿರುತ್ತದೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದಶರ್ಿಗಳಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಹಶೀಲ್ದಾರರು ಹಾಗೂ ನಗರ, ಪುರಸಭೆ, ಪಟ್ಟಣ ಪಂಚಾಯತಿ ಬರುವ ಉದ್ಯಮಗಳ ಗಣತಿ ಕಾರ್ಯದ ಉಸ್ತುವಾರಿಗಾಗಿ ಆಯುಕ್ತರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳನ್ನೊಳಗೊಂಡ ಇವರ ಅಧ್ಯಕ್ಷತೆಯಲ್ಲಿ ತಾಲೂಕಮಟ್ಟದ ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸಕರ್ಾರವು ರಚಿಸಿದೆ. ಸಿಎಸ್ಸಿ ಪ್ರಕಾರ 7ನೇ ಆಥರ್ಿಕ ಗಣತಿಗೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ 75, ಗ್ರಾಮೀಣ ಪ್ರದೇಶದಲ್ಲಿ 244 ಸೇರಿ ಒಟ್ಟು 319 ಗಣತಿದಾರರು ಮತ್ತು 45 ನಗರ, 98 ಗ್ರಾಮೀಣ ಸೇರಿ ಒಟ್ಟು 143 ಮೇಲ್ವಿಚಾರಕರು ಕಾರ್ಯನಿರ್ವಹಿಸಬೇಕಾಗಿದೆ. ಸಾರ್ವಜನಿಕರೆಲ್ಲರೂ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧೀಕಾರಿ ಸಿ.ಡಿ. ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶಿಲ್ದಾರರು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.