ಲೋಕದರ್ಶನ ವರದಿ
ಕೂಡ್ಲಿಗಿ 15: ಪಟ್ಟಣ ಹೊರ ವಲಯದಲ್ಲಿನ ಸೊಲ್ಲಮ್ಮ ಆಲದ ಮರದ ಬಳಿ ಭಾನುವಾರ ಸಂಜೆ ಮೇಯುತ್ತಿದ್ದ 6 ಕುರಿಗಳು ಏಕಾ ಏಕಿ ಸಾವನ್ನಪ್ಪಿವೆ. ಇದರಿಂದ ಕುರಿಗಾರರು ಆತಂಕಗೊಂಡಿದ್ದಾರೆ.
ಪಟ್ಟಣದ ಸುಮಾರು 200 ಕುರಿಗಳು ಇದ್ದು, ಪಿ. ಕೊಟ್ರೇಶ್-1, ಬಂಗಿ ಕೊಟ್ರೇಶ್-2 ಹಾಗೂ ಸ್ವಾಮಯ್ಯನವರ ಹನುಮಂತಪ್ಪ ಅವರಿಗೆ ಸೇರಿದ 3 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಅಸ್ತವ್ಯಸ್ತಗೊಂಡಿವೆ. ವಿಷಯ ತಿಳಿದ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೆಚ್ಚು ಹಸಿರು ಹುಲ್ಲನ್ನು ತಿಂದಿದ್ದು, ಜೀರ್ಣವಾಗದೆ ಹೊಟ್ಟೆ ಉಬ್ಬರವಾಗಿ ಮೃತಪಟ್ಟಿದ್ದಾವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಕುರಿಗಳ ಸಾವಿಗೆ ನಿಕರ ಮಾಹಿತಿ ನೀಡಿ, ಮುಂದೆ ವಹಿಸಬೇಕಾದ ಕ್ರಮಗಳ ಬಗ್ಗೆ ಕುರಿಗಾರರಿಗೆ ಮಾಹಿತಿ ಒದಗಿಸಬೇಕು ಎಂದು ಸ್ವಾಮಯ್ಯನವರ ನಾಗರಾಜ ಪಶು ಅವೈದ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.