ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ: ಸತೀಶ್ ಶೆಟ್ಟಿ

Knowledge Development Program is a special project to brighten the lives of women: Satish Shetty

ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ: ಸತೀಶ್ ಶೆಟ್ಟಿ

ಹೂವಿನಹಡಗಲಿ 09: ’ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಪಟ್ಟಣದ ಯೋಜನಾಕಚೇರಿ ವ್ಯಾಪ್ತಿಯ ಅಕ್ಕಿಪೇಟೆ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ. ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನವಿಕಾಸ ಕೇಂದ್ರಗಳ ವಾರ್ಷಿಕೋತ್ಸವ,ನಿರ್ಗತಿಕರ ಮಸಾಶನ, ವಾತ್ಸಲ್ಯ ಕಾರ್ಯಕ್ರಮ,ಆರೋಗ್ಯ ತಪಾಸಣಾ ಶಿಬಿರಗಳು ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಜ್ಞಾನವಿಕಾಸ ಕೇಂದ್ರಗಳ ಮೂಲಕ ಸದಸ್ಯರು ಸದುಪಯೋಗ ಪಡೆದುಕೊಳ್ಳುತ್ತಿರುವುದನ್ನು ಪ್ರಶಂಸಿಸಿದರು.   

 ಪುರಸಭಾ ಸದಸ್ಯೆ ಲೀಲಾ ಆಟವಾಳಗಿರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣ ಮಾಡುವುದರೊಂದಿಗೆ ಪ್ರತಿ ಮಹಿಳೆಯರಲ್ಲಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಿ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.  

   ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ರಾಮನಗೌಡ ಅವರು ಮಾತನಾಡಿ  ,ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಗಳು ಸೇರಿ ಸಮಾಜದಲ್ಲಿರುವ ಅನಿಷ್ಠ ಪಿಡುಗುಗಳಾದ ಬಾಲ್ಯ ವಿವಾಹ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಕೆಲವು ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಎಲ್ಲಾ ಸದಸ್ಯರು ಭಾಗಿಯಾಗೋಣ ಎಂದು ಕರೆ ನೀಡಿದರು.  ಶಿಕ್ಷಕಿ ಗೌರಮ್ಮ   ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ  ಮಾತನಾಡಿದರು. 

   ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಸುಧಾ ಗಾವ್ಕರ್  ಮಹಿಳೆಯರು ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮಾಹಿತಿ ನೀಡಿದರು.   ಇದೇ ವೇಳೆ 25 ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಶೇಷವಾಗಿ ಅನುಭವ ಮಂಟಪದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಸಂಭಾಷಣೆಯನ್ನು ಉತ್ತಂಗಿ ಕೇಂದ್ರದ ಸದಸ್ಯರು ಅದ್ಭುತವಾಗಿ ನಡೆಸಿಕೊಟ್ಟರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸಂತೋಷ್ ಜೈನ್‌. , ಕೋಡಿಹಳ್ಳಿ ಕೊಟ್ರೇಶ್ . ,ಯೋಜನಾಧಿಕಾರಿ ಸುಬ್ರಹ್ಮಣ್ಯ,ಒಕ್ಕೂಟದ ಅಧ್ಯಕ್ಷರಾದ ಗಂಗಮ್ಮ ರವರು. ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಷ್ಮಾ ಹಾಗೂ ಯೋಜನಾ ಕಚೇರಿ ವ್ಯಾಪ್ತಿಯ 25 ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಹಾಜರಿದ್ದರು.