ವಿಜಯಸ್ಥಂಭದ ಇತಿಹಾಸ ಜನತೆಗೆ ತಿಳಿಯಲಿ: ಕೂಚಬಾಳ

ಲೋಕದರ್ಶನ ವರದಿ

ಸಿಂದಗಿ 31:ಭೀಮಾ ಕೋರೆಗಾಂವ್ ವಿಜಯಸ್ಥಂಭದ ಇತಿಹಾಸ ಜನತೆಗೆ ತಿಳಿಸುವ ಉದ್ಧೇಶದಿಂದ ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ವಿಜಯಸ್ಥಂಭದ ಮಾದರಿ ಸ್ಥಂಭ ಅನಾವರಣಗೊಳ್ಳಲಿದೆ ಎಂದು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಹೇಳಿದರು.

ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೀಮಾ ಕೋರೆಗಾಂವ್ ವಿಜಯೋತ್ಸವದ 201ನೇ ವರ್ಷದ ನಿಮಿತ್ತ ಡಿ.31 ರಿಂದ ಜ.1 ರವರೆಗೆ ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ದಲಿತರು ಸ್ವಾಭಿಮಾನದಿಂದ ಸ್ಥಂಭ ನಿಮರ್ಿಸಲಾಗಿದೆ. ಭೀಮಾ ಕೋರೆಗಾಂವ ಯುದ್ಧ ಮೀಸಲಾತಿಗಾಗಿ ನಡೆದ ಪ್ರಥಮ ಯುದ್ಧವಾಗಿದೆ. ಈ ಯುದ್ದದ ಇತಿಹಾಸದ ಮಹತ್ವ ಮರೆಯಾಗುತ್ತಿದ್ದರಿಂದ ಈ ಭಾಗದಲ್ಲಿ ಸ್ಥಂಬ ನಿಮರ್ಿಸಲಾಗುತ್ತಿದೆ. ಈ ಮಾದರಿ ಸ್ಥಂಭ ದೇಶದಲ್ಲಿ ಪ್ರಥಮವಾಗಿದೆ.  ಈ ಸ್ಥಂಭವು 46 ಅಡಿ ಎತ್ತರವಾಗಿದೆ ಎಂದರು. 

ದಲಿತ ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ ಸುಲ್ಪಿ, ವಾಯ್.ಸಿ.ಮಯೂರ, ಚಂದ್ರಕಾಂತ ಸಿಂಗೆ, ಪರಶುರಾಮ ಕಾಂಬಳೆ, ಶರಣು ಸಿಂಧೆ ಅವರು ಮಾತನಾಡಿದರು. ಕಾರ್ಯಕ್ರಮದ ವಿವರ : ಸಂಘಪಾಲ ಭಂತೇಜಿ ಸಾನಿಧ್ಯ ವಹಿಸುವರು. ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅಧ್ಯಕ್ಷತೆ ವಹಿಸುವರು. ಸಚಿವ ಎಂ.ಸಿ.ಮನಗೂಳಿ ಉದ್ಘಾಟಿಸುವರು. ಮಾಜಿ ಶಾಸಕ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ, ಪರಶುರಾಮ ಮಹಾರಾಜನವರ, ಸೊಮಶೇಖರ ಅಬ್ಬಿಗೇರೊ, ಎ.ಜೆ.ಖಾನ್, ಬಿ.ಆರ್.ಯಂಟಮನ, ಎಂ.ಎನ್.ಪಾಟೀಲ, ಎಂ.ಎನ್.ಸಾಲಿ, ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಂಡಿತ ಮೇಲಿನಮನಿ, ದದಸ್ತಗೀರ ಮುಲ್ಲಾ, ಎಂ.ಎನ್.ಕಿರಣರಾಜ, ಪುರಸಭೆ ಸದಸ್ಯ ಹಣಮಂತ ಸುಣಗಾರ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು, ವಿವಿಧ ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸವರು. ವಿವಿಧ ದಲಿತ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.