ಕಿರಣ ಪಾಟೀಲ ಅವರ ಜನ್ಮ ದಿನಾಚರಣೆ : ಸರ್ಕಾರಿ ಆಸ್ಪತ್ರೆಗೆ ವ್ಹಿಲ್ ಚೇರ್ ವಿತರಣೆ

Kiran Patil's Birthday Celebration: Wheel Chair Distribution to Government Hospital

ಕಿರಣ ಪಾಟೀಲ ಅವರ ಜನ್ಮ ದಿನಾಚರಣೆ : ಸರ್ಕಾರಿ ಆಸ್ಪತ್ರೆಗೆ ವ್ಹಿಲ್ ಚೇರ್ ವಿತರಣೆ 

ಶಿಗ್ಗಾವಿ  02:  ಕಿರಣ ಪಾಟೀಲ ಅವರು ಯಾವಾಗಲು ಸರಳ ಸ್ವಭಾವವನ್ನು ಹೊಂದಿರುವ ವ್ಯಕ್ತಿ ಬಡವರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ ಎಂದು ಕುನ್ನೂರ ಗ್ರಾಮ ಪಂಚಾಯತ್ ಸದಸ್ಯ ಡಿ ಆರ್ ಬೊಮ್ಮನ್ನಳ್ಳಿ ಹೇಳಿದರು.  

ಶ್ಯಾಡಂಬಿಯ ಕಾಂಗ್ರೇಸ್ ಮುಖಂಡ ಲ್ಯಾಂಡ್ ಲಾರ್ಡ್‌ ಕಿರಣ ಪಾಟೀಲ ಅವರ 44 ನೇ ಜನ್ಮ ದಿನದ ಅಂಗವಾಗಿ  ಕಿರಣ ಪಾಟೀಲ ಸ್ನೇಹ ಬಳಗದ ವತಿಯಿಂದ ತಾಲೂಕಿನ ತಡಸ ಸರ್ಕಾರಿ ಆಸ್ಪತ್ರೆಗೆ ವೀಲ್ ಚೇರ್ ಸಲಾಯಿನ್ ಸ್ಟಾಂಡ್ ಹಾಗೂ ಲಾಕರ ವಿತರಣೆ ಮಾಡಿ ಮಾತನಾಡಿದ ಅವರು ಈ ಭಾಗದ ಒಬ್ಬ ಯುವ ನಾಯಕ ಸದಾ ಬಡವರ ಕಷ್ಟ್ಟಕ್ಕೆ ಸ್ಪಂದಿಸುವ ಒಬ್ಬ ನಾಯಕರು ಕಿರಣ ಪಾಟೀಲ ಅವರು  ಅವರ ಜನ್ಮ ದಿನದ ಅಂಗವಾಗಿ ಇಂದು ನಾವು ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಸಾಮಗ್ರಿ ವಿತರಣೆ ಮಾಡಿರುವದು ಸಂತೋಷ ತಂದಿದೆ ಎಂದರು. 

 ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ತಾಲೂಕ ಅಧ್ಯಕ್ಷ ಬಾಬರ್ ಬೋವಾಜಿ  ಮಾತನಾಡಿ ಕಿರಣ ಪಾಟೀಲ ಅವರು ಯಾವಾಗಲು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ ಯಾವುದೇ ಪಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಈ ಭಾಗದ ಬಡವರಿಗೆ ದೀನ ದಲಿತರಿಗೆ ಕೈಲಾದಷ್ಟು  ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ ಅವರಿಗೆ ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಭಗವಂತ ದಯಪಾಲಿಸಲಿ ಎಂದರು. 

ಈ ಸಂದರ್ಭದಲ್ಲಿ ಶ್ರೀಕಾಂತ್ ಸಾತಣ್ಣವರ ಖಾಜಾ ಅರಳಿಕಟ್ಟಿ ಸದ್ದಾಂ ಬಂಕಾಪುರ ನೀಲಕಂಠಗೌಡ ರಾಮನಗೌಡ್ರ ಉಮೇಶ್ ಧರಮಣ್ಣವರ ಹಾಗೂ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.