50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಖಿದ್‌ಮತ್-ಉಲ್-ಮುಸ್ಲಿಮೀನ್ ಸಂಸ್ಥೆ
ಹೊಸಪೇಟೆ 31: ಖಿದ್‌ಮತ್-ಉಲ್-ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಸಯ್ಯದ್ ನಾಜಿಮುದ್ದೀನ್ ಸಹಾಬ್ ಹಾಗು ಉಪಾಧ್ಯಕ್ಷರಾದ ಹಾಗು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ ಖಿದ್ಮತೆ ಇಸ್ಲಾಂ ಸಮಿತಿಯ ಅದ್ಯಕ್ಷರಾದ ಹೆಚ್ . ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಪತ್ರಿಕಾ ಘೋಷ್ಢಿ ನೆಡೆಸಿ ಪೂರ್ವ ಪ್ರಾಥಮಿಕ ಶಾಲೆಯಿಂದ ಪ್ರಸ್ತುತ ಶಾಲಾ-ಕಾಲೇಜು ತೆರೆದು ಐವತ್ತು ವರ್ಷಗಳ ಕಾಲ ಶಾಲೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಈ ಹರುಷದ ಸಮಯದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಖಿದ್‌ಮತ್-ಉಲ್-ಮುಸ್ಲಿಮೀನ್ ಸಂಸ್ಥೆಯ ಫೋಲ್‌ಬನ್ ಸಮೂಹ ಶಾಲಾ-ಕಾಲೇಜುಗಳ ಕಿರು ಪರಿಚಯ ನೀಡಿದರು.
ಅಲ್ಪ ಸಂಖ್ಯಾತ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಫೂಲ್ ಬನ್ ಓರಿಯಂಟಲ್ ಆಂಗ್ಲ ಮಾಧ್ಯಮ ನರ್ಸರಿ ಕಿರಿಯ ್ಘ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಯನ್ನು 2011-12 ರಿಂದ ಪ್ರಾರಂಭಿಸಲಾಗಿದೆ ಸದರಿ ಶಾಲೆಗಳಲ್ಲಿ 670 ಮಕ್ಕಳ ದಾಖಲಾತಿಯಿದೆ. ಮತ್ತು 27 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣವಿದ್ದು ಮಕ್ಕಳ 10ನೇ ತರಗತಿಯ ಫಲಿತಾಂಶ ಪ್ರತಿವರ್ಷ ಉತ್ತಮವಾಗಿದೆ.
ಅಲ್ಪ ಸಂಖ್ಯಾತ ಮಕ್ಕಳು ಅದರಲ್ಲೂ ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದೆಂದು ಬಗೆದು ಸಂಸ್ಥೆಯ ಅಧ್ಯಕ್ಷರು ಜನಾಬ್ ಸೈಯ್ಯದ್ ನಾಜಿಮುದ್ದೀನ್ ಸಾಹಬ್ ಮತ್ತು ಆಡಳಿತ ಮಂಡಳಿಯವರಿಂದ ಡೊನೇಷನ್ ಇಲ್ಲದ ಕೇವಲ ಮಿತ ಶುಲ್ಕದ ಬಜೆಟ್ ಶಾಲೆಯಾದ ಫೂಲ್ ಬನ್ ಆಂಗ್ಲ ಮಾಧ್ಯಮ ನರ್ಸರಿ, ಕಿರಿಯ ್ಘ ಹಿರಿಯ ಪ್ರಾಥಮಿಕ ಶಾಲೆಯನ್ನು 2020-21 ರಿಂದ ಪ್ರಾರಂಭಿಸಲಾಗಿದೆ. ಸದರಿ ಶಾಲೆಗಳಲ್ಲಿ 725 ಮಕ್ಕಳ ದಾಖಲಾತಿಯಿದೆ. ಮತ್ತು 22 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಪ್ರತಿ ಮಗುವಿಗೆ ಕಾಳಜಿಯಿಂದ ಶಿಕ್ಷಣ ನೀಡುತ್ತಿದ್ದಾರೆ. ಶಾಲೆಯು ಉತ್ತಮ ಬೆಳವಣಿಗೆಯತ್ತ ಸಾಗಿದೆ. ಈ ಒಂದು ಪತ್ರಿಕಾ ಘೋಷ್ಠಿಯಲ್ಲಿ ಶೆಕ್ಷಾವಾಲಿ, ಬಿ ಮೊಹಮ್ಮದ್ ಹನೀಫ್, ಮುಸ್ತಾಕ್ ಅಹಮ್ಮದ್, ಕೆ ರಿಯಾಜ್, ಮನ್ಸೂರ್, ಆಸಿಫ್, ಫೈರೋಜ್ ಇತರರು ಉಪಸ್ಥಿತರಿದ್ದರು.