ಖೇಲೋ ಇಂಡಿಯಾ: ಅಮೃತಗೆ ಚಿನ್ನ

ಧಾರವಾಡ 22: ಜೆ.ಎಸ್.ಎಸ್ ಎಸ್.ಎಮ್.ಐ ಯು.ಜಿ ಮತ್ತು ಪಿ.ಜಿ ಯ ಅಧ್ಯಯನ ಸಂಸ್ಥೆಯಲ್ಲಿ ಬಿ.ಕಾಂ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಮೃತ ಮುದರಬೆಟ ಇವನು ಆಸಾಂನ ಗುಹಾಟಿಯಲ್ಲಿ ನಡೆದ ಖೇಲೋ ಇಂಡಿಯಾ ಕ್ರಿಡಾಕೂಟದ 3ನೇ ಆವೃತ್ತಿಯ 21 ವರ್ಷದ ವಯೋಮಿತಿಯ ಜಿಮ್ನಾಸ್ಟಿಕ್ನ ಪ್ಲೋರ್ ಎಕ್ಸಸೈಜ್ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾನೆ. 

ಇವನಿಗೆೆ ಸಂಸ್ಥೆಯ ಕಾರ್ಯದರ್ಶಿ  ಡಾ. ನ. ವಜ್ರಕುಮಾರ ಮತ್ತು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಭಿನಂದನೆ ಸಲ್ಲಿಸುವದರ ಜೊತೆಗೆ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ದೈಹಿಕ ಶಿಕ್ಷಕ ಜಿನಪ್ಪ ಕುಂದಗೊಳ, ಶ್ರವಣ ಯೋಗಿ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.