ಕೆಸರಗೊಪ್ಪ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ ಅಧ್ಯಕ್ಷೆಯಾಗಿ ರಾಧಾ, ಉಪಾಧ್ಯಕ್ಷೆಯಾಗಿ ಸುವರ್ಣಾ ಆಯ್ಕೆ
ಮಹಾಲಿಂಗಪುರ 07: ಸಮೀಪದ ಕೆಸರಗೊಪ್ಪ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿಜೆಪಿಯ ರಾಧಾ ಸಹದೇವ ಮಾದರ, ಉಪಾಧ್ಯಕ್ಷರಾಗಿ ಸುವರ್ಣಾ ಶ್ರೀಶೈಲ ಚನ್ನಾಳ ಅಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿದ್ಧಪ್ಪ ಬಿ.ಪಟ್ಟಿಹಾಳ ಘೋಷಿಸಿದರು.
19 ಸದಸ್ಯ ಬಲವುಳ್ಳ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿಗಳು ತಲಾ 10 ಮತ ಪಡೆದು ಜಯಶಾಲಿಯಾದರು.
ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪಟಾಕಿ ಸಿಡಿಸಿ, ಬಣ್ಣ ಎರಚಿ ವಿಜಯೋತ್ಸವ ಆಚರಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಗ್ರಾಪಂ ಸದಸ್ಯರಾದ ಮಾರುತಿ ಖರೋಶಿ, ಮಹಾಲಿಂಗ ಶಿರೋಳ, ಹನಮಂತ ಮೋಪಗಾರ, ಬಾಳಪ್ಪ ದಡ್ಡಿಮನಿ, ಮಲ್ಲಿಕಾರ್ಜುನ ಖಾನಟ್ಟಿ, ಮಹಾಲಿಂಗ ನಾಯಕ, ತಿಪ್ಪವ್ವ ಬಾಡಗಿ, ಸವಿತಾ ದೊಡ್ಡಮನಿ, ರಂಗವ್ವ ಕಲಟಿ, ಶಾಂತವ್ವ ಚಿಂಚಲಿ ಮತ್ತು ಹಿರಿಯರಾದ ಪರ್ಪ ಬ್ಯಾಕೋಡ, ಮಾರುತಿ ತೇಜಪ್ಪಗೋಳ, ಶಿವಪ್ಪ ಮೂಡಲಗಿ, ಶ್ರೀಶೈಲ ಸತ್ತಿಗೇರಿ, ಪ್ರಕಾಶ ಚನ್ನಾಳ, ಪಾಪು ಉಳ್ಳಾಗಡ್ಡಿ, ಬಸವರಾಜ ಶಿರೋಳ, ಪರ್ಪ ಸತ್ತಿಗೇರಿ, ಸೀಮಂತ ಕಾರಜೋಳ, ದುಂಡಪ್ಪ ಚನ್ನಾಳ, ಬಸಪ್ಪ ಚನ್ನಾಳ, ಮಲ್ಲಪ್ಪ ಭದ್ರಶೆಟ್ಟಿ, ಶ್ರೀಶೈಲ ಪೂಜೇರಿ, ಮುತ್ತು ಸಸಾಲಟ್ಟಿ, ಸಿ.ಆರ್.ಚನ್ನಾಳ, ಎಚ್.ಆರ್.ಚನ್ನಾಳ, ಪಿಡಿಒ ಹೇಮಾ ದೇಸಾಯಿ, ಇತರರಿದ್ದರು. ಚುನಾವಣಾಧಿಕಾರಿಯಾಗಿ ಬನಹಟ್ಟಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಪ್ಪ ಪಟ್ಟಿಹಾಳ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಸ್ಥಳೀಯ ಗ್ರಾಪಂ ಕಾರ್ಯದರ್ಶಿ ಭಾಸ್ಕರ ಬಡಿಗೇರ ಕರ್ತವ್ಯ ನಿರ್ವಹಿಸಿದರು.
ಸಿಪಿಐ ಸಂಜು ಬಳಗಾರ ನೇತೃತ್ವದಲ್ಲಿ ಪಿಎಸ್‌ಐ ಸತ್ತಿಗೇರಿ, ಪಿಎಸ್‌ಐ ಮಧು ಎಲ್. ಮತ್ತು ಸಿಬ್ಬಂದಿ ಭದ್ರತೆ ಒದಗಿಸಿದರು
ಪಜಾ ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ವಿಠ್ಠಲ ದಶರಥ ಹರಿಜನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಲಕ್ಷ್ಮೀ ಬಸವರಾಜ ಮರನೂರ ಸ್ಪರ್ಧಿಸಿದ್ದರು.