ವಿಜೃಂಬಣೆಯಿಂದ ಜರುಗಿದ ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವ
ರಾಣೇಬೆನ್ನೂರು :24 ಇಲ್ಲಿಯ ಕುರುಹಿನಶೆಟ್ಟಿ ಸೇವಾ ಸಮಾಜದ ವತಿಯಿಂದ ಸೋಮವಾರ ರಾತ್ರಿ ನಗರದ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ಸ್ವಾಮಿಯ ದೇವಸ್ಥಾನದ ಕಾರ್ತಿಕೋತ್ಸವ ಬಹು ವಿಜೃಂಬಣೆಯಿಂದ ಜರುಗಿತು.
ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ದೀಪಾಲಂಕರ ಹಾಗೂ ತೆಂಗಿನ ಗರಿಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ನೀಲಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜಾಲಂಕಾರ, ಅಭಿಷೇಕ, ಭಜನೆ ಕಾಂುರ್ಕ್ರಮಗಳು ಜರುಗಿದವು. ಸಂಜೆ 8ಕ್ಕೆ ದೇವಸ್ಥಾನ ಸಮಿತಿ ವತಿಯಿಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ತೀಕೋತ್ಸಕ್ಕೆ ಚಾಲನೆ ನೀಡಲಾಯಿತು. ನಂತರ ಅನ್ನಸಂತರೆ್ಣ, ಭಜನೆ ಕಾರ್ಯಕ್ರಮ ಜರುಗಿತು.
ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ಶ್ರೀಧರ ಅಮಾಸಿ, ವೆಂಕಟೇಶ ಸಾಲಗೇರಿ, ಭೋಜಪ್ಪ ಕನಕೇರಿ, ಶೋಭಾ ಹೊಸಪೇಟೆ, ಭೀಮಣ್ಣ ಕಾಕಿ, ನಾಗರಾಜ ಹೊಸಪೇಟೆ, ವಿರುಪಾಕ್ಷಪ್ಪ ತಿಮ್ಮಾಪುರ, ಗುಡದಯ್ಯ ಹಲಗೇರಿ, ಕುಮಾರ ಶ್ಯಾವಿ, ಸಿದ್ದಪ್ಪ ಬೂದನೂರ, ಶ್ರೀನಿವಾಸ ಕಾಕಿ, ಲಿಂಗರಾಜ ಬೂದನೂರ, ರಮೇಶ ಅಮಾಸಿ, ಪರಶುರಾಮ ಹಲಗೇರಿ, ವೆಂಕಟೇಶ ಕಾಕಿ, ಚನ್ನಪ್ಪ ಮಾಳನಾಯಕನಹಳ್ಳಿ ಸೇರಿದಂತೆ ಮತ್ತಿತರು ಇದ್ದರು.