ನೀಲಕಂಠೇಶ್ವರ ಸ್ವಾಮಿಯ ಕಾರ್ತಿಕೋತ್ಸವ
ರಾಣೆಬೆನ್ನೂರು 16;ಇಲ್ಲಿನ ಎರೆಕುಪ್ಪಿ ರಸ್ತೆಯ, ಮಾರುತಿ ನಗರದ ಕುರುಹಿನ ಶೆಟ್ಟ ಸೇವಾ ಸಮಾಜದ ನೀಲಕಂಠೇಶ್ವರ ಸ್ವಾಮಿಯ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವ ಧಾರ್ಮಿಕ ಕಾರ್ಯಕ್ರಮವು ಡಿಸೆಂಬರ್ 23 ರಂದು ಸೋಮವಾರ ಸಂಜೆ ನೆರವೇರಿಸಲಾಗುವುದು ಎಂದು ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಕಾಕಿ ಹೇಳಿದರು.
ಅವರು ಕಾಕಿ ಭವನದಲ್ಲಿ ಕರೆಯಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಈ ನಿಮಿತ್ತವಾಗಿ ಶ್ರೀ ಸ್ವಾಮಿಯ ಭಜನಾ, ನಂತರ 8 ಗಂಟೆಗೆ ಕಾರ್ತಿಕ ದೀಪೋತ್ಸವ ಪ್ರಜ್ವಲನಗೊಳಿಸಲಾಗುವುದು. ಅನಂತರ ಸಾರ್ವಜನಿಕವಾಗಿ ಅನ್ನ ಸಂತರೆ್ಣ ಆಯೋಜಿಸಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಹನುಮಂತಪ್ಪ ಕಾಕಿ, ಹನುಮಂತಪ್ಪ ಅಮಾಸಿ, ರೂಪಾ ಕಾಕಿ, ಮಂಜುನಾಥ ಹೊಸಪೇಟೆ, ಶಿವಾನಂದ ಸಾಲಗೇರಿ, ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಾಪುರ, ಮತ್ತಿತರರು ಇದ್ದರು.