ದಕ್ಷಿಣ ಕಾಶಿ ಖ್ಯಾತಿಯ ಬಿದರಹಳ್ಳಿ ರೇಣುಕಾಂಬಾ ದೇವಿಯ ಕಾರ್ತಿಕೋತ್ಸವ
ಮುಂಡರಗಿ 11: ತಾಲೂಕಿನ ಇತಿಹಾಸ ಪ್ರಸಿದ್ಧ, ತುಂಗಭದ್ರಾ ನದಿ ಪಾತ್ರದಲ್ಲಿರುವ, ದಕ್ಷಿಣ ಕಾಶಿ ಖ್ಯಾತಿಯ, ಬಿದರಹಳ್ಳಿ ( ವೇಣುಪುರಿ) ಗ್ರಾಮದ ಶ್ರೀ ರೇಣುಕಾಂಬಾ ದೇವಿಯ, ವಾರ್ಷಿಕ ಸಂಪ್ರದಾಯದ, ಮಹಾ ಕಾರ್ತಿಕೋತ್ಸವವೂ, ಡಿಸೆಂಬರ್ 10 ರಂದು ಮಂಗಳವಾರ ಸಂಜೆ, ರಾಜ್ಯದ ಹತ್ತಾರು ಸಾವಿರ ಭಕ್ತರ ಮಧ್ಯದಲ್ಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಜರುಗಿತು.
ಸಂಜೆಯಿಂದ ರಾತ್ರಿ 12 ಗಂಟೆವರೆಗೆ, ಸಾರ್ವಜನಿಕವಾಗಿ ಮಹಾಪ್ರಸಾದ ವಿತರಿಸಲಾಯಿತು. ಕಳೆದ ಸೋಮವಾರದಿಂದ ಆರಂಭವಾದ ಈ ಸಾಂಪ್ರದಾಯಕ ಕಾರ್ತಿಕೋತ್ಸವದಲ್ಲಿ, ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಪುನೀತರಾದರು. ನಾಳೆ ಡಿಸೆಂಬರ್ 11, ಸಂಜೆ ಸಾಂಪ್ರದಾಯಕವಾದ ಶ್ರೀದೇವಿಯ ಓಕುಳಿ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ದೇವಸ್ಥಾನ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ