ಹಾವೇರಿಯಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ

ಶಿರಡಿ ಸಾಯಿಬಾಬಾ ಹಾಗೂ ನವಗ್ರಹ ದೇವಸ್ಥಾನದ ಕಾರ್ತಿಕೋತ್ಸವ

ಹಾವೇರಿಯಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ  

ಹಾವೇರಿ  25: ಇಲ್ಲಿನ ಹಾನಗಲ್ ರೋಡಿನ ವೈಭವಿ ಲಕ್ಷ್ಮೀಪಾರ್ಕಿನ ಹತ್ತಿರದ ಶ್ರೀಗಣೇಶ, ಅಂಬಾಭವಾನಿ, ಶಿರಡಿ ಸಾಯಿಬಾಬಾ ಹಾಗೂ ನವಗ್ರಹ ದೇವಸ್ಥಾನದ ಕಾರ್ತಿಕೋತ್ಸವ ದಿ,28 ಗುರುವಾರ ಸಾಯಂಕಾಲ 6 ಘಂಟೆಗೆ ಜರುಗಲಿದೆ. ವಿಜೃಂಭಣೆಯಿಂದ ಜರುಗುವ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಹಾವೇರಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಅಂಬಾಭವಾನಿ ದೇವಸ್ಥಾನ ಟ್ರಸ್ಟ(ರಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.