ಲೋಕದರ್ಶನವರದಿ
ಧಾರವಾಡ 12 : ಭಾರತೀಯ ಸಂಗೀತ ಕ್ಷೇತ್ರವು ಬಹಳಷ್ಟು ಹುಲುಸಾಗಿ ಬೆಳೆದಿದ್ದು, ವಿಶೇಷವಾಗಿ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಕನರ್ಾಟಕದ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಪತ್ರಕರ್ತ ಈರಣ್ಣ ಸಿ. ಚೌಗಲಾ ಪ್ರತಿಪಾದಿಸಿದರು.
ಅವರು ಇಲ್ಲಿಯ ಶ್ರೀನಗರ ಬಳಿ ಇರುವ ಶಿವಾಲಯದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀವೀಣಾ-ವಾಣಿ ಸಂಗೀತ ವಿದ್ಯಾಲಯದ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡದ ಮಣ್ಣಿನಲ್ಲಿಯೇ ಹುಟ್ಟಿ ಬೆಳೆದು ತಮಗೆ ಒದಗಿದ್ದ ಅಂಧತ್ವವನ್ನೂ ಮೀರಿ ಉತ್ತುಂಗ ಸಾಧನೆಗೈದ ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಡಾ. ಪುಟ್ಟರಾಜ ಕವಿಗವಾಯಿಗಳು, ಭಾರತರತ್ನ ಡಾ. ಭೀನಸೇನ ಜೋಶಿ, ಡಾ. ಮಲ್ಲಿಕಾಜರ್ುನ ಮನಸೂರ, ಡಾ. ಬಸವರಾಜ ರಾಜಗುರು, ಡಾ. ಗಂಗೂಬಾಯಿ ಹಾನಗಲ್ಲ, ಪಂ. ಬಸವರಾಜ ಮನಸೂರ, ಪಂ. ಸೋಮನಾಥ ಮರಡೂರ, ಡಾ. ಎಂ. ವೆಂಕಟೇಶಕುಮಾರ ಮುಂತಾದವರು ಹಿಂದೂಸ್ತಾನಿ ಸಂಗೀತಕ್ಷೇತ್ರಕ್ಕೆ ತಮ್ಮದೇ ಆದ ಸಾಧನೆಯ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಅತಿಥಿಯಾಗಿದ್ದ ಜಿಲ್ಲಾ ಆಸ್ಪತ್ರೆಯ ನಿವೃತ್ತ ಸರ್ಜನ್ ಡಾ. ಆರ್.ಜಿ.ಪುರಾಣಿಕ ಮಾತನಾಡಿ, ಸಂಗೀತಕ್ಕೆ ಮನದ ಕ್ಲೇಶ ಕಳೆಯುವ ಅಗಾಧ ಶಕ್ತಿ ಇದೆ. ಬದುಕಿನಲ್ಲಿ ಒಂಟಿತನ ಅನುಭವಿಸಿ ಭಾರಗೊಂಡ ಎಷ್ಟೋ ಮನಸ್ಸುಗಳು ಅಂತಿಮವಾಗಿ ಸಂಗೀತಕ್ಕೆ ಶರಣಾಗಿ ತಮ್ಮನ್ನು ಸುತ್ತುವರೆದ ದುಃಖ, ದುಗುಡ, ದುಮ್ಮಾನಗಳನ್ನು ಮರೆತ ಉದಾಹರಣೆಗಳು ವಾಸ್ತವದಲ್ಲಿವೆ ಎಂದು ಹೇಳಿದರು.
ಇನ್ನೋರ್ವ ಅತಿಥಿಯಾಗಿದ್ದ ಕವಿ ಮಲ್ಲಿಕಾಜರ್ುನ ಮಠಪತಿ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿಯ ಸಾಧನೆಯನ್ನು ಗುರುತಿಸಿ ಭಾರತದಲ್ಲಿಯ ಸುಮಾರು 7-8 ಜನ ಹಿರಿಯ ಸಂಗೀತ ಕಲಾವಿದರಿಗೆ ಭಾರತರತ್ನ ಲಭಿಸಿರುವುದು ಸಂಗೀತ ಕ್ಷೇತ್ರದ ವಿಶೇಷವಾಗಿದೆ ಎಂದರು.
ಸಂಗೀತ ಸುಧೆ : ವಾಷರ್ಿಕೋತ್ಸವದ ಅಂಗವಾಗಿ ಜರುಗಿದ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ವಚನಾ ಗೋಲಪ್ಪನವರ ರಾಗ ಭೀಮಪಲಾಸ, ಪ್ರ್ರಿಯಾಂಕಾ ಆಲಮನಿ ರಾಗ ಪಟದೀಪ ಹಾಗೂ ಆದರ್ಶ ಗೋಲಪ್ಪನವರ ರಾಗ ಜೀವನಪುರಿ ಪ್ರಸ್ತುತಪಡಿಸಿದರು. ಎನ್.ಟಿ. ಕುಲಕಣರ್ಿ ಹಾಮರ್ೊನಿಯಂ ಹಾಗೂ ವಿನಾಯಕ ಕಟ್ಟೆಣ್ಣವರ ತಬಲಾ ಸಾಥ ನೀಡಿದರು. ಸಂಗೀತ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶರಣಬಸಪ್ಪ ಮೇಡೆದಾರ ಹಾಗೂ ಕಾರ್ಯದಶರ್ಿ ಮೈಥಿಲಿ ಮೇಡೆದಾರ ಇದ್ದರು.