ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ ಸಭೆ : ಕೋಳಿವಾಡ
ರಾಣಿಬೆನ್ನೂರ 08: ಪರಿಸರ ಮಲಿನವಾಗುತ್ತಿದ್ದು ಅದನ್ನು ರಕ್ಷಿಸಲು ನಾವೆಲ್ಲರೂ ಕಂಕಣ ಬದ್ಧರಾಗಿ ಶ್ರಮಿಸುವ ಅಗತ್ಯವಿದೆ. ಸಮಾಜಿಕ ಅರಣ್ಯ ಇಲಾಖೆಯು ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ? ಪ್ರತಿ ವರ್ಷ ಸರ್ಕಾರವು ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು, ಈ ವರ್ಷದಲ್ಲಿ ಎಷ್ಟು ಸಸಿಗಳನ್ನು ನೆಟ್ಟಿದ್ದೀರಿ.? ಅವುಗಳಲ್ಲಿ ಪಾಲನೆ ಪೋಷಣೆಯಾಗಿ ಎಷ್ಟು ಗಿಡಗಳು ಬೆಳೆದಿವೆ ಸರಿಯಾದ ಮಾಹಿತಿ ಸಭೆಗೆ ನೀಡಬೇಕೆಂದು ಶಾಸಕ ಪ್ರಕಾಶ್ ಕೋಳಿವಾಡ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ಇಲ್ಲಿನ ತಾಲೂಕ ಪಂಚಾಯತ್ ಸಭಾಭವನದಲ್ಲಿ ತ್ರೈಮಾಸಿಕ ಪ್ರಗತಿ ಪರೀಶೀಲನೆ ಸಭೆ (ಕೆಡಿಪಿ)ಯಲ್ಲಿ ಅವರು ಮಾತನಾಡಿದರು. ಹವಮಾನ ಪ್ರಸ್ತುತ ದಿನಗಳಲ್ಲಿ ಕೆಡುತ್ತಿದ್ದು ಇದರಿಂದ ಮಾನವರು ಸೇರಿದಂತೆ ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಪರಿಸರ ಸಮತೋಲನೆಗಾಗಿ ನಾವು ತಾಲೂಕನ್ನು ಹಸೀರೀಕರಣ ಮಾಡುವ ಉದ್ದೇಶ ಹೊಂದಿದ್ದು, ಅರಣ್ಯ ಅಧಿಕಾರಿಗಳು ಇನ್ನು ಮುಂದೆ ಪುಸ್ತಕಗಳಲ್ಲಿ ಪ್ರಗತಿ ತೋರಿಸದೆ ತಾಲೂಕಿನ ನಿಜ ಅಭಿವೃದ್ಧಿಯ ಕಡೆಗೆ ಗಮನ ಹರಿಸದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
1ಲಕ್ಷ ಸಸಿಗಳನ್ನು ಬೆಳೆಸಿ ತಾಲೂಕಿನಲ್ಲಿ ಜೂನ 5ರಂದು ಮನೆಗೊಂದು ಸಸಿಯಂತೆ 70 ಸಾವಿರ ಕುಟುಂಗಳಿಗೆ ವಿತರಿಸಲಾಗುವುದು. ಜೊತೆಗೆ 25 ಎಕರೆ ಜಾಗದಲ್ಲಿ ವೃಕ್ಷ ಉದ್ಯಾನವನ ಮಾಡುವ ಸಂಕಲ್ಪ ಹೊಂದಿದ್ದು ಒಬ್ಬ ಸಾಮಾನ್ಯ ಮಹಿಳೆ ರಸ್ತೆ ಉದ್ದಕ್ಕೂ ಗಿಡಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಿ ಸಾಲುಮರದ ತಿಮ್ಮಕ್ಕನೆನಿಸಿದ ಅವರ ಹಾದಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರಮಿಸಬೇಕಾಗಿದೆ. ಇದರಲ್ಲಿ ರಾಜಿಯ ಮಾತೇ ಇಲ್ಲ. ಅರಣ್ಯ ಇಲಾಖೆಗೆ ಎರಡು ಕೋಟಿ ಅನುದಾನವನ್ನು ತರಲಾಗುವುದು.ಈ ಹಣವು ದುರ್ಬಳಕೆಯಾಗದೆ ಸಫಲವಾಗಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ನರೇಗಾ ಯೋಜನೆಯಡಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಪ್ರಾದೇಸಿಕ ಅರಣ್ಯ ಇಲಾಖೆಗಳು ತಲಾ50 ಸಾವಿರ ಸಸಿಗಳನ್ನು ಬೆಳೆಸಿಕೊಡಲು ಕ್ರಿಯಾಯೋನೆ ತಾಯಾರಿಸಿ ಅನುಮೋದನೆಗೆ ಜಿಪಂಗೆ ಕಳುಹಿಸಲು ತಿಳಿಸಿದರು.ಆಗ ಜಿಪಂ ಉಪಕಾರ್ಯದರ್ಶಿ ಹಾಗೂ ತಾಲೂಕ್ ಪಂಚಾಯತಿ ಆಡಳಿತ ಅಧಿಕಾರಿ ಡಾ. ರಂಗಸ್ವಾಮಿ ಅವರು ಅನುಮೋದನೆ ಕೊಡಿಸುವ ಜವಾಬ್ದಾರಿ ನಮ್ಮದೆ ಎಂದರು.
ಕೆಡಿಪಿ ಸದಸ್ಯ ಯಲ್ಲಪ್ಪರೆಡ್ಡಿ ರೆಡ್ಡರ ಮಾತನಾಡಿ. ರೈತರ ಜಮೀನಿನ ಬದಗಳಲ್ಲಿ ಬೆಳೆದ ಕಟಾವಿಗೆ ಬಂದ ಬೆಳೆಗಳನ್ನು ರೈತರ ಉಪಯೋಗಕ್ಕಾಗಿ ಬಳಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರವಾಗಿದ ಪಡೆಯಲು ಹರಸಾಹಸವಾಗುತ್ತಿದೆ ಒಂದು ಪರವಾನಿಗೆ ಪಡೆಯಲು ಸುಮಾರು ಎರಡರಿಂದ ಮೂರು ವರ್ಷಗಳ ಗತಿಸುತ್ತೇವೆ ಇದರಿಂದ ಬೇಸತ್ತ ರೈತರು ಅವರನ್ನು ಪರವಾನಿಗೆ ಬೇಡದೆ ಸಂಕಷ್ಟವನ್ನು ಬಯಸುವಂಥಾಗಿದೆ ಮಾನ್ಯ ಶಾಸಕರು ರೈತರ ಗೃಹಪಯೋಗಕ್ಕೆ ತಮ್ಮ ಸ್ವಂತ ಜಮೀನಿನ ಬದಗಳಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲು ಒಂದು ತಿಂಗಳೊಳಗೆ ಪರವಾನಿಗೆ ನೀಡಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಬೇಕು ಎಂದರು.
ಆಗ ಶಾಸಕರು ಕಾನೂನುಗಳು ಇರುವುದು ತೊಂದರೆ ಕೊಡುವುದಕಲ್ಲ. ದುರುಪಯೋಗ ಆಗಬಾರದು ಎಂಬ ಉದ್ದೇಶದಿಂದ ಕಾನೂನುಗಳು ಇರುತ್ತವೆ ಅಧಿಕಾರಿಗಳು ಇದರ ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡದೆ ಸರಿಯಾದ ರೀತಿಯಲ್ಲಿ ಪರೀಶೀಲಿಸಿ ಕಟಾವು ಮಾಡಲು ಒಂದು ತಿಂಗಳ ಒಳಗಾಗಿ ಅವಕಾಶ ಕೊಡಬೇಕೆಂದು ಅಧಿಕಾರಿಗೆ ಖಡಕ್ ಸೂಚನೆ ನೀಡಿದರು.
ಕೆಡಿಪಿ ಸದಸ್ಯ ಹನುಮಂತಪ್ಪ ಬ್ಯಾಲದಳ್ಳಿ ಮಾತನಾಡಿ, ಪ್ರತಿ ವರ್ಷ ಸಾರ್ವಜನಿಕರ ಕರದ ಹಣವನ್ನು ವ್ಯಯ ಮಾಡಿ ಅರಣ್ಯ ಇಲಾಖೆ ಅವರು ಪ್ರತಿ ವರ್ಷ ಗಿಡಗಳನ್ನು ನೆಡುತ್ತಲೇ ಬಂದಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಈಚೆಗೆ ನೆಟ್ಟ ಗಿಡಗಳು ಮಲೆನಾಡ ಆಗಬೇಕಾಗಿತ್ತು ಎಲ್ಲಿವೆ ಗಿಡಗಳು? ಲಕ್ಷಾಂತರ ಗಿಡಗಳನ್ನು ನೆಟ್ಟರೂ ಸಹ ಬೆರಳು ಎಣಿಕೆಯಷ್ಟು ಗಿಡಗಳು ಅಲ್ಲಲ್ಲೇ ಕಾಣಸಿಗುತ್ತವೆ. ಆ ಲಕ್ಷಾಂತರ ಗಿಡಗಳು ಎಲ್ಲಿ ಹೋದವು?! ಅವು ಅರಣ್ಯ ಇಲಾಖೆಯ ಅಧಿಕಾರಿಗಳ ಪುಸ್ತಕಗಳಲ್ಲಿವೆ. ಇದರಿಂದ ಸರ್ಕಾರದ ಬೊಕ್ಕಸದಾ ಹಣ ಪೋಲಾಗುತ್ತಿದೆ. ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ನಮಗೆ ಗಿಡಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಆಗ ಶಾಸಕ ಪ್ರಕಾಶ್ ಕೋಳಿವಾಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗ ತರಾಟೆಗೆ ತಗೆದುಕೊಂಡು ಸದಸ್ಯರು ಹೇಳುವ ಮಾತು ಸತ್ಯವಿದೆ. ಈ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರಗಳು ಬಂದಿವೆ. ನಾಳೆನೇ ಮಾಧ್ಯಮದವರೊಂದಿಗೆ ಹೋಗಿ ನೀವು ನೆಟ್ಟಿರುವ ಗಿಡಗಳನ್ನು ತೋರಿಸಬೇಕು ಜೊತೆಗೆ ಹನುಮಂತಪ್ಪ ಬ್ಯಾಲದಳ್ಳಿ ಅವರನ್ನು ಕರೆದುಕೊಂಡು ಹೋಗಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದರು.
ತಾಲೂಕಿನ ತುಮ್ಮನಕಟ್ಟೆ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಜಿಪಂ ಅನುದಾನದಲ್ಲಿ ಅಂಬುಲೆನ್ಸ್ ಬಿಡುಗಡೆಯಾಗಿತ್ತು. ಆ ಆಂಬುಲೆನ್ಸ್ ಸುಮಾರು ಐದು ವರ್ಷಗಳಿಂದ ಆ ಅಬುಲೆನ್ಸ್ ತುಮ್ಮಿನಕಟ್ಟಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಇರದೆ ಕಾಣೆಯಾಗಿದೆ ಹುಡುಕಿಕೊಡಬೇಕೆಂದು ಶಾಸಕರಲ್ಲಿ ವಿನಂತಿಸಿಕೊಂಡರು. ಆಗ ಶಾಸಕ ಪ್ರಕಾಶ್ ಕೋಳಿವಾಡ್ ಅವರು ತಾಲೂಕ ಆರೋಗ್ಯ ಅಧಿಕಾರಿ ಅವರನ್ನು ಪ್ರಶ್ನಿಸಿದಾಗ ಆಗ ಅವರು ಜಿಲ್ಲಾ ಆರೋಗ್ಯ ಇಲಾಖೆ ಅವರು ತೆಗೆದುಕೊಂಡು ಹೋಗಿದ್ದಾರೆ. ಇನ್ನೊಂದು ವಾರದೊಳಗೆ ತಮ್ಮ ಗ್ರಾಮಕ್ಕೆ ಕಳುಹಿಸಿಕೊಡುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ ಎಂದರು. ್ಟ ಗ್ರಾಮದ ಆಸ್ಪತ್ರೆಗೆ ರಟ್ಟಿಹಳ್ಳಿ ಹೊನ್ನಾಳಿ ತಾಲೂಕಿನ ಕೆಲವು ಹಳ್ಳಿಗಳು ಹಿರೇಕೆರೂರು ತಾಲೂಕಿನ ಹಳ್ಳಿಗಳು ರಾಣೆಬೆನ್ನೂರು ತಾಲೂಕಿನ ಕೆಲವು ಹಳ್ಳಿಗಳ ಜನರು ಈ ಆಸ್ಪತ್ರೆಗೆ ಬರುತ್ತಿದ್ದು, ತುರ್ತು ಆರೋಗ್ಯ ರಕ್ಷಣೆಗಾಗಿ ಖಾಸಗಿ ವಾಹನಕ್ಕೆ ಮೊರೆ ಹೋಗಿ ಬಡ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮುಂದೆ ಆಗಾಗದಂತೇ ನೋಡಿಕೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವಿನ ಪ್ರಕರಣ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಜೊತೆಗೆ ಪ್ರಸಕ್ತ ವರ್ಷದಲ್ಲಿ ರಾಣೆಬೆನ್ನೂರು ತಾಲೂಕಿನಲ್ಲಿ 34 ಶಿಶುಗಳ ಮರಣ ಸಂಭವಿಸಿದ್ದು, ಇದರಲ್ಲಿ 20 ಖಾಸಗಿ ಹಾಗೂ 14 ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶುಗಳು ಮರಣ ಹೊಂದಿದ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿಸಿದಾಗ ರಾಣೆಬೆನ್ನೂರಲ್ಲೂ ಹಾಗಾಗದಂತೆ ಎಚ್ಚರವಹಿಸಲು ಶಾಸಕರು ಸೂಚಿಸಿದರು.
ಆರೋಗ್ಯ ಇಲಾಖೆ. ಕೃಷಿ ಇಲಾಖೆ. ಸಮಾಜ ಕಲ್ಯಾಣ ಇಲಾಖೆ. ಹಿಂದುಳಿದ ವರ್ಗಗಳ ಇಲಾಖೆ. ಅಬಕಾರಿ ಇಲಾಖೆ. ತೋಟಗಾರಿಕೆ ಇಲಾಖೆ. ನಗರ ಸಭೆ. ಕಂದಾಯ ಇಲಾಖೆ. ಶಿಕ್ಷಣ ಇಲಾಖೆ. ರೇಷ್ಮೆ ಇಲಾಖೆ ಕೃಷಿ ಇಲಾಖೆ. ಉಪ ನಂದಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿಯನ್ನು ಸಭೆಯ ಮುಂದೆ ಮಂಡಿಸಿದರು.
ಜಿಪಂ ಉಪ ಕಾರ್ಯದರ್ಶಿ ಹಾಗೂ ತಾಲೂಕ್ ಪಂಚಾಯತಿ ಆಡಳಿತ ಅಧಿಕಾರಿ ಡಾ. ರಂಗಸ್ವಾಮಿ. ತಹಶೀಲ್ದಾರ್ ಎಚ್.ಆರ್. ಭಗವಾನ್. ನಗರಸಭೆ ಪೌರಾಯುಕ್ತ ಫಕೀರ್ಪ ಇಂಗಳಗಿ ಸೇರಿದಂತೆ ಮತ್ತೆತರರು ಇದ್ದರು
ಫೋಟೊ:8ಆರ್‌ಎನ್‌ಆರ್02ರಾಣಿಬೆನ್ನೂರ:ಇಲ್ಲಿನ ತಾಲೂಕ ಪಂಚಾಯತ್ ಸಭಾಭವನದಲ್ಲಿ ತ್ರೈಮಾಸಿಕ ಪ್ರಗತಿ ಪರೀಶೀಲನೆ ಸಭೆ (ಕೆಡಿಪಿ)ಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದರು.