ಕರಿಸಿದ್ಧೇಶ್ವರ ಮಠ ಭಕ್ತರಿಗೆ ಶಾಂತಿ ನೆಮ್ಮದಿ ಸಂಕಷ್ಟಗಳಿಗೆ ದಾರಿ ದೀಪ ಜಗದ್ಗುರು.ಭೀಮಾಶಂಕರ..ಲಿಂಭಗವತ್ಪಾದಂಗ
ಕಂಪ್ಲಿ 11: ಲಿಂ.ಕರಿಸಿದ್ದೇಶ್ವರ ಶ್ರೀಗಳು ಭಕ್ತ ಸಮುದಾಯಕ್ಕೆ ಸಂಸ್ಕಾರ ಸಂಸ್ಕೃತಿ, ಜೊತೆಗೆ ಅಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಿದ್ದಾರೆ. ಜ್ಞಾನ ಪ್ರಸರಣವೇ ಪೀಠಗಳ ಉದ್ಧೇಶವಾಗಿದೆ. ಎಂದು ಹಿಮವತ್ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಭಗವತ್ಪಾದಂಗಳವರು ಹೇಳಿದರು. ಸಮೀಪದ ಬುಕ್ಕಸಾಗರ ಕರಿಸಿದ್ಧೇಶ್ವರ ಮಠದಲ್ಲಿ ಲಿಂ.ಕರಿಸಿದ್ದೇಶ್ವರರ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜಾತ್ರಾಮಹೋತ್ಸವ, ಸಾಮೂಹಿಕ ವಿವಾಹ, ಧರ್ಮ ಜಾಗೃತಿ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಭಕ್ತರಿಗೆ ಶಾಂತಿ ನೆಮ್ಮದಿ ಸಂಕಷ್ಟಗಳಿಗೆ ದಾರಿ ದೀಪವಾಗಿದ್ದಾರೆ. ಮಠದ ಅಭಿವೃದ್ಧಿಗೆ ಶಿವಯೋಗ ಸಂಕಲ್ಪಶಕ್ತಿಯಿಂದ ಸದಾ ಶ್ರಮಿಸಿದರು ಎಂದರು. ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಮಾತನಾಡಿ, ಲಿಂ.ಕರಿಸಿದ್ಧೇಶ್ವರರು ತಮ್ಮ ತಪೋಬಲದಿಂದ ಸದ್ಭಕ್ತರನ್ನು ಉದ್ಧರಿಸಿದ್ದು, ಸದಾ ಭಕ್ತರ ಒಳಿತಿಗಾಗಿ ಜೀವನ ಸವೆಸಿದ್ದಾರೆ. ಬುಕ್ಕಸಾಗರದ ಕರಿಸಿದ್ಧೇಶ್ವರ ಮಠವು ಗುರು ಸದ್ಭಕ್ತರಲ್ಲಿ ಸಾಮರಸ್ಯ ಸಾಧಿಸುವಲ್ಲಿ ಕಲ್ಯಾಣಕರ್ನಾಟಕ ಭಾಗದಲ್ಲಿಯೇ ಜಾಗೃತಿಯನ್ನೊಂದಿದೆ ಎಂದರು. ಇದಕ್ಕು ಮುನ್ನಾ ಜಗದ್ಗುರು ಶ್ರೀಭೀಮಾಶಂಕರಲಿಂಗ ಭಗವತ್ಪಾದಂಗಳ ಅಡ್ಡಪಲ್ಲಕ್ಕಿ ಮೆರವಣಿಗೆ, ಕರಿಸಿದ್ದೇಶ್ವರರ ಪಾಠಶಾಲೆ ವಿದ್ಯಾರ್ಥಿಗಳಿಂದ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಾಮೂಹಿಕ ವಿವಾಹಗಳು ನಡೆದವು. ಧಾರ್ಮಿಕ, ಸಾಮಾಜಿಕ ಸೇವೆಗಾಗಿ ಹುಡಾದ ಕುಮಾರಸ್ವಾಮಿ ತಾತಾ, ಹೊಸಪೇಟೆಯ ಸಾಲಿ ಬಸವರಾಜಸ್ವಾಮಿಗಳಿಗೆ 'ಕರಿಸಿದ್ಧಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುಪಾದದೇವರ ಮಲ್ಲಿಕಾರ್ಜುನ ಶಿವಾಚಾರ್ಯರು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕೊಟ್ಟೂರಿನ ಸಿದ್ಧಲಿಂಗ ಶಿವಾಚಾರ್ಯರು, ಪಂಚವಣಗಿಯ ಸಿದ್ಧಲಿಂಗ ಶಿವಾಚಾರ್ಯರು, ಬಳ್ಳಾರಿಯ ಕಲ್ಯಾಣಸ್ವಾಮಿ, ಗೋವಿನಕೋವಿಯ ವಿಶ್ವರಾಧ್ಯ ಮಹಾಲಿಂಗಹಾಲಸ್ವಾಮಿ, ಬಂಗಾರಿಕ್ಯಾಂಪಿನ ಡಾ.ಸಿದ್ಧರಾಮ, ಹಂಚಿನಾಳಕ್ಯಾಂಪಿನ ಶಿವಲಿಂಗಯ್ಯತಾತ, ವೆಂಕಟಾಪುರದ ನಾಗಲಿಂಗಪ್ಪತಾತ, ಬೂದಗುಂಪದ ಸಿದ್ದೇಶ್ವರದೇವರ ಕಾರಟಗಿಯ ವೀರಭದ್ರಶರಣರು, ಹೆಬ್ಬಾಳ್ ಶಿವಪ್ರಕಾಶಶರಣರು, ಗುಡದೂರಿನ ನೀಲಕಂಠತಾತ, ಎಂ.ಎಸ್.ಶಶಿಧರಶಾಸ್ತ್ರಿ, ವಿಜಯನಗರ ಡಿಸಿ ಎಂ.ಎಸ್.ದಿವಾಕರ, ಎಸ್ಪಿ ಹರಿಬಾಬು, ತಹಸೀಲ್ದಾರ್ ಶೃತಿ ಮಾಳಪ್ಪಗೌಡರು, ಪ್ರಮುಖರಾದ ಶರಣಬಸಪ್ಪ ಕೋಲ್ಕಾರ, ಗೊಗ್ಗ ಚನ್ನಬಸವರಾಜ, ಐ.ಸಂಗನಬಸಪ್ಪ, ಸಾಲಿ ಸಿದ್ದಯ್ಯ, ಹೇಮಣ್ಣ, ವಿ.ಕೆ.ಹನುಮಂತಪ್ಪ, ಪಿ.ಮೂಕಯ್ಯಸ್ವಾಮಿ, ಎಚ್.ಎಂ.ಕಾಶಿನಾಥಸ್ವಾಮಿ, ಟಿ.ರಾಜೇಶ್ವರಿ, ಸಿದ್ದೇಶ್, ಎಚ್.ಎಂ.ವಿಶ್ವನಾಥ, ಎಸ್.ಡಿ.ಬಸವರಾಜ ಇದ್ದರು.