ಕರವೇ ಅಧ್ಯಕ್ಷ ಪಂಪನಗೌಡರಿಗೆ ಕನಿಪ ಧ್ವನಿಯಿಂದ ಕನ್ನಡ ರತ್ನ ಪ್ರಶಸ್ತಿ

Karaway President Pampan Gowda awarded Kannada Ratna by Kanipa Dovni



ಕರವೇ ಅಧ್ಯಕ್ಷ ಪಂಪನಗೌಡರಿಗೆ ಕನಿಪ ಧ್ವನಿಯಿಂದ ಕನ್ನಡ ರತ್ನ ಪ್ರಶಸ್ತಿ 

ಬಳ್ಳಾರಿ 03: ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ನಿವಾಸಿ ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಬಾಣಾಪುರ ಕೆ. ಪಂಪನಗೌಡ ಅವರ ಕನ್ನಡಪರ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾ ಘಟಕದಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ  ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಪಂಪನಗೌಡ ಅವರು ಮಾಡಿರುವ ಸೇವೆ: ಬಳ್ಳಾರಿ ಗ್ರಾಮಾಂತರ ಭಾಗದಲ್ಲಿನ  ಗ್ರಾಮಗಳಲ್ಲಿ ವೃದ್ಯಾಪ್ಯ ಮತ್ತು ವಿಧವಾ ಹಾಗೂ ಅಂಗವಿಕಲರ  ಮಾಶಾಸನ ಮಾಡಿಸಿರುವುದು. ಗ್ರಾಮಾಂತರ ಭಾಗದಲ್ಲಿನ ಪಡಿತರ ಚೀಟಿ ಮಾಡಿಸಿರುವುದು. ನಿರಾಶ್ರಿತರಿಗೆ (ಹೊದಿಕೆ) ಬೆಡ್ ಶೀಟ್ ಗಳನ್ನು ವಿತರಿಸಿರುವುದು.  ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿರುವುದು.  ಭಾರತದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಾಜಿ ಸೈನಿಕರಿಗೆ ಸನ್ಮಾನ ಮಾಡಿರುವುದು 

ಈ ಭಾಗದಲ್ಲಿ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಸನ್ಮಾನ,  ಕರೋನಾ ವಿರುದ್ಧ ಹೋರಾಡಿ ಸೇವೆ ಸಲ್ಲಿಸಿದ  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಮಾಡಿರುವುದು.  ಕರೋನಾ ಸಮಯದಲ್ಲಿ ನಿರಾಶ್ರೀತರಿಗೆ ಊಟ ಹಣ್ಣು ವಿತರಣೆ. ಕಾಲೇಜು ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಿದ್ದ ಪ್ರಾಂಶುಪಾಲರ ವಿರುದ್ಧ ಹೋರಾಡಿ ವರ್ಗಾವಣೆ ಮಾಡಿಸಿ ಜಯ ಸಾಧಿಸಲಾಯಿತು.  

ಬಳ್ಳಾರಿ ಗ್ರಾಮಾಂತರ ಭಾಗದಲ್ಲಿನ ಅನೇಕ ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಮಾಡಲಾಯಿತು.  ಕನ್ನಡ ಭಾಷೆ ವಿಚಾರವಾಗಿ ನಾಮಫಲಕದಲ್ಲಿಕನ್ನಡ ಕಡ್ಡಾಯವಾಗಿ ಅಳವಡಿಸಲು ಸತತವಾಗಿ ಹೋರಾಟ,  ಗ್ರಾಮಾಂತರ ಭಾಗದಲ್ಲಿನ ದುರಸ್ತಿ ಹೊಂದಿರುವ ರಸ್ತೆಗಳನ್ನು ಕಂಡು ಹೊಸ ರಸ್ತೆಗಳನ್ನು ಹಾಕಿಸಲಾಯಿತು.  ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡಲು ಸಾರಿಗೆ ವ್ಯವಸ್ಥೆಯನ್ನು ಹೋರಾಟದ ಮೂಲಕ ಕಲ್ಪಿಸಲಾಯಿತು.  ಮೋಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ವಾಹನ ಕಲ್ಪಿಸಲಾಯಿತು.  

ಆಂಧ್ರ ಗಡಿಭಾಗವಾದ ಬಸರಕೋಡು ಗ್ರಾಮದಿಂದ ಮೋಕವರೆಗೆ ಹಾಗೂ ಆಂಧ್ರ​‍್ರದೇಶದ ಛತ್ರಗುಡಿ ಗಡಿ ಭಾಗದಿಂದ ಬಳ್ಳಾರಿ ಅವರಿಗೆ ಪ್ರತಿ ವಿದ್ಯುತ್ ಕಂಬಕ್ಕೆ ಕರ್ನಾಟಕದ ಲಾಂಛನ ಬಣ್ಣ ಹಳದಿ ಮತ್ತು ಕೆಂಪು ಬಣ್ಣದ ಧ್ವಜದ ಬಣ್ಣ ಹಚ್ಚಲಾಗಿದೆ ಎಂದು ಪಂಪನಗೌಡ ಅವರು ತಿಳಿಸಿದರು.