ಲೋಕದರ್ಶನ ವರದಿ
ವಿಜಯಪುರ: ಸನ್ಮಾಗರ್ಿಯಾಗಬೇಕಾದರೆ ಸನ್ಮಾರ್ಗದಲ್ಲಿ ಸಾಗಬೇಕು. ಗುರುವಿನ ಸಂಪರ್ಕದಲ್ಲಿ ಸದಾಕಾಲ ಇರಬೇಕು. ಗುರುವಿನ ಪ್ರೀತಿಗೆ ಪಾತ್ರರಾದವರು ಪರಮಾತ್ಮನ ಪ್ರೀತಿಗೂ ಪಾತ್ರಧಾರಿಗಳಾಗುವರು ಕನ್ನಡ ಭಾಷೆ ನಿತ್ಯದಲ್ಲಿ ಕನ್ನಡಿಯಾಗಬೇಕು. ಕನ್ನಡ ಬೆಳೆಯಬೇಕು ಭಾಷೆ ಶ್ರೀಮಂತವಾಗಬೇಕಾದರೆ, ನಾಟಕ, ಕಲೆ, ಅಭಿನಯ ಇವುಗಳ ಮೂಲಕ ನಾಡಿಗೆ ನಾಟಕ, ಸಾಹಿತ್ಯ ಕೊಡುಗೆ ಅನನ್ಯ. ನಮ್ಮ ನಡೆ-ನುಡಿಗಳಲ್ಲಿ ಭಾಷೆಯ ಲಾಲಿತ್ಯ ಹಾಸುಹೊಕ್ಕಾಗಬೇಕು. ಗುರುವಾದವನು ಭೇದ ಮಾಡದವನು. ಏನಾದರೂ ಪಡೆಯುವದರಿಂದ ಖುಷಿ ಆಗದವನು.
ಏನಾದರೂ ಕಳೆದುಕೊಳ್ಳುವುದರಿಂದ ದುಃಖಿಯಾಗದವನು ಗುರುವಾಗಿದ್ದಾನೆಂದು ರಂಗ ಚೇತನ ಸಂಸ್ಥೆಯ 25ನೇ ರಜತ ಮಹೋತ್ಸವ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿದ ಪೀರ ಎ ತರೀಕತ ಹಜರತ ಸೈಯ್ಯದಶಾಹ ಹುಸೇನಪೀರ ಖಾದ್ರಿ ಚಿಸ್ತಿ ಆಶ್ರಮದ ಸೂಫಿ ಸಂತರಾದ ಡಾ. ಎಫ್.ಎಚ್. ಇನಾಮದಾರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಹಿತ್ಯದಿಂದ ನಾಡನ್ನು ಶ್ರೀಮಂತಗೊಳಿಸಿದ ಕೀತರ್ಿ ನಾಟಕಕಾರರಿಗೆ ಸಲ್ಲುತ್ತದೆ. ನಾಟಕಗಳಲ್ಲಿ ಅಧರ್ಮದಿಂದ ಧರ್ಮದ ಕಡೆಗೆ ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಸಂದೇಶಗಳು ಹಾಸು ಹೊಕ್ಕಾಗಿವೆ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಇಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿವೆ. ಹಂದಿಗನೂರ ಸಿದ್ರಾಮಪ್ಪ, ಕಂದಗಲ ಹನುಮಂತರಾಯರು, ಕೆ.ಎನ್. ಸಾಳುಂಕೆ, ಎಲ್.ಬಿ.ಶೇಖ ಈ ಎಲ್ಲ ಮಹನೀಯರು ನಾಟಕ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದವರಾಗಿದ್ದಾರೆ. ಕನ್ನಡ ನಾಡಿನ ಕಲಾವಿದರು ದೇಶದಲ್ಲಿಯೇ ಹೆಸರು ಮಾಡಿದ್ದನ್ನು ಕಾಣಬಹುದಾಗಿದೆ ಎಂದರು.
ವೇದಿಕೆಯಲ್ಲಿ ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ, ಡಾ. ಜಿ.ಡಿ.ಕೊಟ್ನಾಳ, ರಂಗಚೇತನದ ಅಧ್ಯಕ್ಷರಾದ ಎಸ್.ಎಂ. ಖೇಡಗಿ ಆಸೀನರಾಗಿದ್ದರು. ಕಾರ್ಯಕ್ರಮದಲ್ಲಿ ಜಂಬುನಾಥ ಕಂಚ್ಯಾಣಿ, ಡಾ. ಎಂ.ಎಸ್. ಮೇತ್ರಿ, ರಾಜು ತಾಳಿಕೋಟಿ, ರಮೇಶ ಕೊಟ್ಯಾಳ, ಬಿ.ಎಂ. ಪಾಟೀಲ, ಕೃಷ್ಣಮೂತರ್ಿ, ಅಶೋಕ ಹಂಚಲಿ, ಸುಭಾಸಚಂದ್ರ ಕನ್ನೂರ, ಸಾಕ್ಷಿ ಹಿರೇಮಠ, ಪ್ರಜ್ಞಾ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.