ಕನ್ನಡಕ್ಕೆ ಕನ್ನಡತನವೇ ಮಹಾಶಕ್ತಿ ಪರ್ಯಾಯವಾಗಿ ಯಾವುದೇ ಬೇರೊಂದು ಶಕ್ತಿ ಇಲ್ಲ- ಶಿವಾಚಾರ್ಯ
ರಾಣೇಬೆನ್ನೂರು 03: ಕನ್ನಡ ಭಾಷೆ ಮತ್ತು ನಾಡು ನುಡಿ ಸಂಸ್ಕೃತಿಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಪರಂಪರೆ ಇದೆ.ಎಂದು ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ಷ. ಬ್ರ. ವೀರಭದ್ರ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ರಾತ್ರಿ ಪಂಪಾನಗರದ ಇಮ್ಮಡಿ ಪುಲಕೇಶಿ ವೃತ್ತದಲ್ಲಿ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಎನ್.ಎಸ್. ಸ್ನೇಹಜ್ಯೂತಿ ಸಂಸ್ಥೆ, ಆಯೋಜಿಸಿದ್ದ, ಕನ್ನಡ ರಾಜ್ಯೋತ್ಸವ, ಕರ್ನಾಟಕ ನಿತ್ಯೋತ್ಸವ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಕನ್ನಡಕ್ಕೆ ಕನ್ನಡತನವೇ ಮಹಾಶಕ್ತಿ ಅದಕ್ಕೆ ಪರ್ಯಾಯವಾಗಿ ಯಾವುದೇ ಬೇರೊಂದು ಶಕ್ತಿ ಇಲ್ಲ. ಕನ್ನಡ ಕನ್ನಡಿಗರು ನಿರಾಭಿಮಾನಿಗಳಾಗದೆ, ಇಂದು ಸ್ವಾಭಿಮಾನಿಗಳಾಗಬೇಕಾದ ಅಗತ್ಯವಿದೆ ಎಂದರು.
ಕೋಡಿಯಾಲ್ ಹೊಸಪೇಟೆ ಪುಣ್ಯಕೋಟಿ ಮಠದ ಬಾಲ ಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ನಾಡು, ನುಡಿ, ಗಡಿ, ಭಾಸೆ ನೆಲ. ಜಲ ಸಂಸ್ಕೃತಿ ಪುಣ್ಯಮಯವಾಗಿದೆ. ಭಾರತದ ನೆಲದಲ್ಲಿ ಜನ್ಮ ತಾಳಿದವರು ಪುನ: ಭರತ ಭೂಮಿಯಲ್ಲಿ ಜನ್ಮ ತಾಳಬೇಕು ಎನ್ನುವ ಸಂಕಲ್ಪ ಹೊಂದಿರುತ್ತಾರೆ. ಭಾರತ ಭೂಮಿಯಲ್ಲಿ ಜನ್ಮ ತಾಳುವುದೇ ವಿಶೇಷ.
ಪವಿತ್ರ ಭೂಮಿಯಲ್ಲಿ ನಾವೆಲ್ಲರೂ, ಇತಿಹಾಸದ ಪರಿಕಲ್ಪನೆಯಲ್ಲಿ ಮತ್ತಷ್ಟು ಭಾವೈಕ್ಯತೆ ಸಾಧಿಸಬೇಕಾಗಿದೆ. ಅಂತಹ ಪವಿತ್ರ ಕಾರ್ಯ ಸಂಘಟನೆಗಳು ಮಾಡುತ್ತಲಿವೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಸ್ವಾ.ಕ.ರ.
ವೇ. ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರ 50ನೇ ಹುಟ್ಟು ಹಬ್ಬದ ನಿಮಿತ್ತ, ಅಭಿಮಾನಿಗಳ ಬಳಗವು ಶುಭ ಹಾರೈಸಿ ಸನ್ಮಾನಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಮಂಜುನಾಥ ಗೌಡ ಶಿವಣ್ಣನವರ, ರೈತ ಮುಖಂಡ ರವೀಂದ್ರ ಗೌಡ ಪಾಟೀಲ್, ಶ್ರೀಮತಿ ಪ್ರೇಮಾ ಅಂಗಡಿ, ಪ್ರೊ,ಪ್ರಭುಲಿಂಗಪ್ಪ ಹಲಗೇರಿ, ವರ್ತಕ ಮಲ್ಲೇಶಪ್ಪ ಅರಕೇರಿ, ವಿಜಯಪುರದ ಸಂಗಮೇಶ ಜಾದವ, ಮತ್ತಿತರರು ಮಾತನಾಡಿದರು.
ವಿವಿಧ ಕ್ಷೇತ್ರ ಸಾಧಕರಾದ, ಮಂಜುನಾಥ ಗಳಗಿ, ಪರಶುರಾಮ ಬಣಕಾರ, ಡಾ,ಎಸ್. ಕೆ.ನಾಗರಾಜ್ ,
ಪರಮೇಶಪ್ಪ ಹಲಗೇರಿ, ಕಲಾವಿದ ಶಂಕರ್ ತುಮ್ಮಣ್ಣನವರ, ಅನಿಲ್ ಭಾರಾಟಕ್ಕೆ, ಹೆಚ್ ಲೋಕೇಶಪ್ಪ, ಶ್ರೀಮತಿ ಪುಷ್ಪಾ ಹೂ.ಅಕ್ಕಿ, ಶ್ರೀಮತಿ ಪ್ರೇಮಾ ಪಾಟೀಲ್, ಉದಯರಾಜ ಕೊಳಜಿ, ಬಸವರಾಜ ಸರೂರ, ಎಚ್.ಎಫ್.ಅಕ್ಕಿ, ಸೇರಿದಂತೆ ಮೊದಲಾದವರನ್ನು ಪ್ರಶಸ್ತಿ ಪ್ರಧಾನವಿತ್ತು, ಅಭಿನಂದಿಸಿ, ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಪರಶುರಾಮ್ ಬಣಕಾರ ಸಂಗಡಿಗರ , ಜೋಗತಿ ನೃತ್ಯ, ಡಾ,ಕೆ. ಸಿ.ನಾಗರಜ್ಜಿ, ಜನನಿ ಜಾನಪದ ತಂಡ, ಯಂಗ್ ಸ್ಟಾರ್ ಮೇಲೋಡಿ ತಂಡದವರ, ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾದರ ಪಡಿಸಿದ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಜೆ.ಎಂ.ರಾಜಶೇಖರ್, ಕ. ಸಾ. ಪ ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಮಾಜಿ ಅಧ್ಯಕ್ಷ ಎ.ಬಿ.ರತ್ನಮ್ಮ, ಗಂಗಮ್ಮ ಹಾವನೂರ, ಚಂದ್ರಣ್ಣ ಬೇಡರ, ಸುರೇಶ ಮಳವಳ್ಳಿ, ಕೆ. ಎಸ್. ನಾಗರಾಜ, ನಾಗರಾಜ ಚಳಗೇರಿ, ಕೊಟ್ರೇಶಪ್ಪ ಎಮ್ಮಿ, ಬಸವರಾಜ ಸಾವಕ್ಕಳ್ಳವರ, ನಾಗರಾಜ ಮಾಕನೂರ, ಕೃಷ್ಣಮೂರ್ತಿ ಲಮಾಣಿ, ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು, ವರ್ತಕರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.ಕಲಾವಿದ ಬಸವರಾಜ್ ಸಾವಕ್ಕನವರ, ಸ್ಯಾಕ್ಸೋಫೋನ್ ನುಡಿಸಿದರು. ಪರಶುರಾಮ ಬಣಕಾರ್ ಸಂಗಡಿಗರು ರೈತ ಗೀತೆ ಹಾಡಿದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಿವಕುಮಾರ ಜಾದವ್ ಸ್ವಾಗತಿಸಿದರು. ಡಾಕ್ಟರ ಕೆ.ಸಿ. ನಾಗರಜ್ಜಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿ, ಜಗದೀಶ್ ಮಳೀಮಠ ವಂದಿಸಿದರು.