ಬಾಗಲಕೋಟೆ: ಕನ್ನಡವು ಸಮೃದ್ಧ ತಾಂತ್ರಿಕ ಭಾಷೆಯಾಗಿ ಎಲ್ಲ ಹಂತಗಳಲ್ಲೂ ಬಳಕೆಯಾಗುವುದು ವಿಶ್ವ ಕನ್ನಡ ದೃಷ್ಠಿಯಿಂದ ಅಗತ್ಯವಾಗಿದ್ದು, ಇಂದು ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಲದ ಎಲ್ಲ ವಿನ್ಯಾಸಗಳಲ್ಲಿ ಯುನಿಕೋಡ್ನ ಪೂರ್ಣ ರೂಪದಲ್ಲಿ ಕನ್ನಡವು ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡಿರುವುದು ಕನ್ನಡ ಭಾಷೆಯ ವಿಶ್ವ ಪ್ರಸಾರಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ 63 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ಭಾಷೆ ಅನೇಕ ಆತಂಕಗಳನ್ನು ಎದುರಿಸಿಯೂ ಸಮೃದ್ದವಾಗಿ, ಸಶಕ್ತವಾಗಿ ಬೆಳೆಯುತ್ತಿರುವುದು ಸ್ವಾಗತಾರ್ಹವಾದ ಸಂಗತಿ. ಕನ್ನಡ ರಾಜ್ಯೋತ್ಸವದ ಈ ಸಂಭ್ರಮದ ಹಬ್ಬವನ್ನು ಹೊರರಾಜ್ಯಗಳ ಕನ್ನಡಿಗರು, ಹೊರರಾಷ್ಟ್ರಗಳಾದ ಅಮೇರಿಕ, ಸಿಂಗಾಪೂರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಮುಂತಾದ ಕಡೆಗಳಲ್ಲಿಯೂ ಸಹ ನೆಲೆಸಿರುವ ಕನ್ನಡಿಗರು ಹಷರ್ೋತ್ಸಾಹಗಳಿಂದ ಆಚರಿಸುತ್ತಾರೆ ಎಂದರು.
ಕನರ್ಾಟಕ ಎಂಬ ಪದ ಕರುನಾಡು ಪದದಿಂದ ಉಗಮವಾಗಿದ್ದು, ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾಗಿದ್ದರಿಂದ ಬ್ರಿಟೀಷರ ಕಾಲದಲ್ಲಿ ಕಾನರ್ಾಟಿಕ್ ಅಥವಾ ಕನರ್ಾಟಕ ಎಂಬ ಹೆಸರು ಬಳಕೆಗೆ ಬಂದಿದೆ. ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದುಗೂಡಿಸಿ ಅದಕ್ಕೆ ಕನರ್ಾಟಕ ಎಂದು ನಾಮಕರಣ ಮಾಡಿದ ದಿನವಾಗಿದೆ. ಮುಂಬಯಿ ಮದ್ರಾಸ್, ಹೈದರಾಬಾದ ಹಾಗೂ ಕೊಡಗು ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ಮೈಸೂರು ರಾಜ್ಯದಲ್ಲಿ ಒಂದಾದರು. ಮೈಸೂರು ರಾಜ್ಯವನ್ನು ಕನರ್ಾಟಕ ಎಂದು ಪುರ್ ನಾಮಕರಣ ಮಾಡಿದ್ದು, ತಮಗೆಲ್ಲ ತಿಳಿದಿರುವ ವಿಷಯವಾಗಿದೆ ಎಂದರು. ಕನರ್ಾಟಕದ ಪ್ರಾಕೃತಿಕ ಸೊಬಗು, ಶಿಲ್ಪಕಲಾ ಸೌಂದರ್ಯ, ವನ್ಯಜೀವಿ ಸಂಪತ್ತು, ನೈಸಗರ್ಿಕ ಸಂಪತ್ತು ಹಾಗು ಅನನ್ಯವಾದ ಸಾಹಿತ್ಯದ ಸಂಪತ್ತು ಬೆರಗುಗೊಳಿಸುವಂತಹದಾಗಿವೆ. ಜಗತ್ಪ್ರಸಿದ್ದ ಗೋಲಗುಮ್ಮಟ, ಏಕಶಿಲೆಯ ಗೋಮಟೇಶ್ವರ, ಶಿಲ್ಪಕಲೆಯ ತೊಟ್ಟಿಲು ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲು ಶಿಲ್ಪಕಲಾಕೇಂದ್ರಗಳು, ಕಲಾ ಶ್ರೀಮಂತಿಕೆಯ ಬೇಲೂರು-ಹಳೆಬೀಡು, ರುದ್ರ-ರಮಣೀಯ ಜೋಗ ಜಲಪಾತ, ನಿಸರ್ಗ ಸೌಂದರ್ಯದ ತೊಟ್ಟಿಲಾದ ಪಶ್ಚಿಮ ಘಟ್ಟಗಳಮೀ ಎಲ್ಲ ಪ್ರವಾಸಿತಾಣಗಳು ವಿಶ್ವದೆಲ್ಲೆಡೆಗಳಿಂದ ಪ್ರವಾಸಿಗರನ್ನು ಆಕಷರ್ಿಸುತ್ತಿವೆ. ಈ ಸಂದರ್ಭದಲ್ಲಿ ನಾವೆಲ್ಲ ಕನ್ನಡಾಂಬೆಗೆ ಮನಃಪೂರ್ವಕ ನಮನಗಳನ್ನು ಸಲ್ಲಿಸಿ, ನಮ್ಮ ನಾಡಿನ ಜನಕಲ್ಯಾಣದ ಕನಸುಗಳನ್ನು ಸಾಕಾರಗೊಳಿಸುತ್ತ ಕಂಕಣಬದ್ದರಾಗಿ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಜಿಲ್ಲಾ