ಕನ್ನಡ ಸಾಹಿತ್ಯ ಸಮ್ಮೇಳನ: ಕೈ ಬೀಸಿ ಕರೆಯುತ್ತಿದೆ ಚಿತ್ರಕಲಾ ಶಿಬಿರ

ಧಾರವಾಡ 03: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಕರ್ಾರಿ ಆಟರ್್ ಗ್ಯಾಲರಿ ಕಾಲೇಜಿನಲ್ಲಿ ಹಿರಿಯ ಹಾಗೂ ಯುವ ಕಲಾವಿದರ ಚಿತ್ರಕಲಾ ಶಿಬಿರ ಮೂರು ದಿನಗಳ ಕಾಲ ನಡೆಯುತ್ತಿದೆ.  ನಾಡಿನ ಹೆಸರಾಂತ ಕಲಾವಿದರು ವೈವಿಧ್ಯಮಯವಾದ ಸುಂದರ ಚಿತ್ರಗಳನ್ನು ರಚಿಸಿದ್ದಾರೆ.

ವಿಕಲಚೇತನರಾಗಿರುವ ಹುಬ್ಬಳ್ಳಿಯ ಯುವಕಲಾವಿದ ಕಿರಣ ಶೇರ್ಖಾನೆ ಅವರು ಕಲೆಯಲ್ಲಿ ನಿಪುಣರಾಗಿದ್ದಾರೆ. ಬಾದಾಮಿಯ ನಿಸರ್ಗ ಚಿತ್ರಣ ಶಿವ ದೇವಸ್ಥಾನವನ್ನು 2*2 ಳಿ  ಅಳತೆಯಲ್ಲಿ ರಚಿಸಿದ್ದಾರೆ. ಶಿವನ ದೇವಸ್ಥಾನದ ಗೋಪುರ, ಪ್ರಕೃತಿಯ ಸೌಂದರ್ಯ ಅವರ ಕೈಯಲ್ಲಿ ಸುಂದರವಾಗಿ ಮೂಡಿ ಬಂದಿದೆ.  

ಇವರು ಈ ಹಿಂದೆ ಇವರು ದೆಹಲಿ ಮತ್ತು ಗೋವಾದಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬ ಜನರು ಕಲಾವಿದರನ್ನು ಮತ್ತು ಕಲೆಯನ್ನು ಪೂಜಿಸಬೇಕು. ಮತ್ತು ಅವರಿಗೆ ಬೆಲೆಯನ್ನು ಕೊಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ತುಂಬಾ ಸಂತಸ ತಂದಿದೆ ಎಂದರು. 

ವಿಜಯಪುರದ ಹಿರಿಯ ಕಲಾವಿದ ಎಂ.ಎಂ. ಖನ್ನೂರ್ ಈ ಶಿಬಿರದಲ್ಲಿ ಪಾಲ್ಗೊಂಡು   ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಯಾದ ಬುಗುರಿ ಆಡುವ ಪೂರ್ಣ ಚಿತ್ರವನ್ನು ಪೆನ್ನಿಂದಲೇ 2 ಳಿ  *3 ಅಳತೆಯಲ್ಲಿ ರಚಿಸಿದ್ದಾರೆ. 

ಇವರು ಈ ಹಿಂದೆ ಮುಂಬೈನ ಜಹಾಂಗೀರ್ ಆಟರ್್ ಗ್ಯಾಲರಿಯಲ್ಲಿ ಭಾಗವಹಿಸಿದ್ದರು.  ಕನ್ನಡ ಸಾಹಿತ್ಯ ಸಮ್ಮೇಳನದಿಂದ ಅವರಿಗೆ ಅವಕಾಶ ಸಿಕ್ಕಿದ್ದು ತುಂಬಾ ಸಹಾಯಕವಾಗಿದೆ ಎಂದರು. ಇವರು ತಾವು ರಚಿಸಿದ ಚಿತ್ರಗಳನ್ನು ಸಾಮಾಜಿಕ ತಾಲತಾಣಗಳ ಮೂಲಕವೂ ಹಾಗೂ ಶಿಬಿರಗಳಲ್ಲಿ ಭಾಗವಹಿಸಿ ಮಾರಾಟ ಮಾಡುತ್ತಾರೆ.

ಬಾಗಲಕೋಟೆಯ ಹಿರಿಯ ಕಲಾವಿದೆ ಡಾ. ಸುನೀತಾ ಪಾಟೀಲ್ ಈ ಶಿಬಿರದಲ್ಲಿ ಪಾಲ್ಗೊಂಡು ಶಿವನ ಚಿತ್ರವನ್ನು ರಚಿಸಿದ್ದಾರೆ. ಆ್ಯಕ್ರಿಲಿಕ್ ಕ್ಯಾನವಾಸ್ನಲ್ಲಿ 2 ಳಿ * 2 ಳಿ ಅಳತೆಯಲ್ಲಿ ರಚಿಸಿದ್ದಾರೆ. ಇವರು ಈ ಹಿಂದೆ ಉಡುಪಿ ಮತ್ತು ಮೂಡಬಿದರೆಯಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ್ದರು. ಜನರು ಕಲಾವಿದರನ್ನು ಮತ್ತು ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಶಿರಸಿಯಿಂದ ಬಂದಿರುವ ಪ್ರಕಾಶ ನಾಯಕ್ ಜಾನಪದ ನೃತ್ಯದ ಸೊಗಡಿನ ಚಿತ್ರವನ್ನು ಕುಂಚದಲ್ಲಿ ಅರಳಿಸಿದ್ದಾರೆ. 2 ಳಿ * 2 ಳಿ ಅಳತೆಯಲ್ಲಿ ಸಾಂಪ್ರದಾಯಿಕ ಕಲಾಕೃತಿಗಳನ್ನು ಬಿಡಿಸಿದ್ದಾರೆ. ಇವರು ಈ ಹಿಂದೆ ಮೈಸೂರಿನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಚಿತ್ರಕಲೆಗೆ ಮೆಚ್ಚುಗೆ ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಶಿಬಿರದಲ್ಲಿ ರಚಿಸಲಾದ ಕಲಾಕೃತಿಗಳು ಸಮ್ಮೇಳನದ ಸಂದರ್ಭದಲ್ಲಿ  ಜನವರಿ 4,5 ಹಾಗೂ 6 ರಂದು ಕೃಷಿ ವಿಶ್ವವಿದ್ಯಾಲಯ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸಮಾನಂತರ ವೇದಿಕೆ 2 ರಲ್ಲಿ ಪ್ರದರ್ಶನಗೊಳ್ಳಲಿವೆ.  

ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರನ್ನು  ಈ ಸುಂದರ ಕಲಾಕೃತಿಗಳು ಕೈಬೀಸಿ ಕರೆಯಲಿವೆ. ಸಹೃದಯರು ಸಮ್ಮೇಳನದಲ್ಲಿ ಚಿತ್ರಕಲಾಪ್ರದರ್ಶನವನ್ನೂ ವೀಕ್ಷಿಸಿ ಲಲಿತಕಲೆಗಳಿಗೆ ಪ್ರೋತ್ಸಾಹಿಸುವ ನಿರೀಕ್ಷೆ ಇದೆ.