ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಮುದ್ದೇಬಿಹಾಳ 03:  ಸಂಪತ್ತು ಭಗವಂತನನ್ನು ಮರೆಸುತ್ತದೆ. ಇದ್ದುದರಲ್ಲಿ ಹಂಚಿಕೊಂಡು ತಿನ್ನುವುದು ಉತ್ತಮ. ಜಗತ್ತು ಶಾಸ್ವತ ಅಲ್ಲ. ಯಾವುದೂ ಶಾಸ್ವತ ಅಲ್ಲ. ಗಳಿಸಿದ ಹೆಸರು ಮಾತ್ರ ಶಾಸ್ವತ ಎಂದು ರೇವಣಸಿದ್ದೇಶ್ವರ ಹಾಲುಮತ ಗುರುಪೀಠ ಅಗತೀರ್ಥ ಶಾಖಾಮಠದ ಗುರು ಮಹಾಸ್ವಾಮಿಗಳು ಹೇಳಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದಲ್ಲಿ ಕನಕಶ್ರೀ ಯುವಸೇನೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಂತ ಕನಕದಾಸರ 531ನೇ ಜಯಂತೋತ್ಸವ, ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ಸಂಯುಕ್ತ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡುತ್ತಿದ್ದರು.

ಸಂತ, ಶರಣ, ಮಹಾತ್ಮರಂತೆ ಬದುಕಬೇಕೆಂದು ಜಯಂತಿ ಆಚರಿಸುತ್ತೇವೆ. ಜಯಂತಿ ಅಂದರೆ ಜಯ. ಯಾರು ಭಗವಂತನನ್ನು ಪ್ರಾಥರ್ಿಸುತ್ತಾರೋ ಅವರು ಜಯ ಪಡೆಯುತ್ತಾರೆ. ಜೀವನದಲ್ಲಿ ಶರಣರು ಹಾಕಿಕೊಟ್ಟ ಮಾರ್ಗ ಅನುಸರಿಸಬೇಕು. ಶರಣರು, ಸಂತರಿಗೆ ಅಪಾರ ಶಕ್ತಿ ಇರುತ್ತದೆ. ಇದನ್ನು ನಾವೆಲ್ಲ ಅರಿಯಬೇಕು. ಬರಗಾಲ ಮನುಷ್ಯನಿಗೆ ಪರೀಕ್ಷೆಯ ಕಾಲ ಇದ್ದಂತೆ. ಇಂಥ ಬರಗಾಲದಲ್ಲೇ ನಮಗೆ ದೇವರು ಭೆಟ್ಟಿ ಆಗುತ್ತಾರೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವವರು ಜೀವನದಲ್ಲಿ ಯಶ ಪಡೆಯುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಾಲುಮತ ಸಮಾಜದ ಮಹಿಳಾ ಧುರೀಣೆ ರಾಜೇಶ್ವರಿ ಪಾಟೀಲ ಮಾತನಾಡಿ ಹಾಲುಮತ ಸಮಾಜದವರು ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು. ಮಕ್ಕಳಿಗೆ ಆಸ್ತಿ ಅಂತಸ್ತು ಮಾಡಬಾರದು. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್.ಬಿರಾದಾರ, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ, ಹಾಲುಮತ ಸಮಾಜದ ಹಿರಿಯರಾದ ಸಿ.ಎಂ.ಕಾರಜೋಳ ಇನ್ನಿತರರು ಕನಕದಾಸರು, ಸಂಗೊಳ್ಳಿ ರಾಯಣ್ಣ ಮತ್ತು ಹಾಲುಮತ ಸಮಾಜದ ಕುರಿತು ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಮಲ್ಲಿಕಾಜರ್ುನ ಮದರಿ, ಭೀಮಶೆಪ್ಪ ಮದರಿ, ನಾಗಪ್ಪ ರೂಢಗಿ, ಅಮರೇಶ್ವರರಾವ್ ನಾಡಗೌಡ, ಗದ್ದೆಪ್ಪಗೌಡ ತಿಗಳಿ, ಬಸಪ್ಪ ಹುಗ್ಗಿ, ಈರಮ್ಮ ನಾಗೂರ, ಬೈಲಪ್ಪ ತಿಗಳಿ, ಮಹಾಂತೇಶ ತಿಗಳಿ, ಮಡಿವಾಳಪ್ಪ ಮೇಟಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ವೈ.ಬಿ.ಕುರಿ ಸ್ವಾಗತಿಸಿದರು. ಶಿಕ್ಷಕ ಬಿ.ಎಚ್.ಮೇಟಿ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಸ್.ಬಿ.ನಾರಗಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಾಧ್ಯಾಪಕ ಎಚ್.ಎಸ್.ಭಜಂತ್ರಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಡೊಳ್ಳಿನ ಕಲಾ ತಂಡದ ನೇತೃತ್ವದಲ್ಲಿ ಸಂತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.