ಲೋಕದರ್ಶನ ವರದಿ
ಕಂಪ್ಲಿ 13: ಕೇಂದ್ರ ,ರಾಜ್ಯ ಸರ್ಕಾರಗಳೆರಡು ಇನ್ನು ಮುಂದಾದರೂ ರೈತ ಪರವಾದ ನೀತಿಗಳನ್ನು ಜಾರಿಗೆ ತರುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಜೆ.ಕಾತರ್ೀಕ್ ತಿಳಿಸಿದರು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಪರ್ಾಡಿಸಿದ ರೈತರ ಸಂಘಟನಾ ಸಭೆಯಲ್ಲಿ ಮಾತನಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಪರ ನೀತಿಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಉಳಿಸುವ ಕೆಲಸ ಮಾಡಬೇಕಿದೆ. ಎರಡು ಸಕರ್ಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವು ರೈತರ 48 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಿದೆ, ಆದರೆ ವಾಸ್ತವವಾಗಿ ಇದುವರೆಗೂ ಕೇವಲ 12 ಸಾವಿರ ಕೋಟಿ ರೂ ಮಾತ್ರ ಮನ್ನವಾಗಿದೆ. ಬ್ಯಾಂಕುಗಳಿಂದ ಇದುವರೆಗೂ ಮೇಲಿಂದ ಮೇಲೆ ನೋಟೀಸ್ಗಳು ಬರುತ್ತಲೇ ಇವೆ, ರೈತರ ಆತ್ಮಹತ್ಯೆಗಳು ನಡೆಯುತ್ತಲಿವೆ. ಕೇವಲ ಬೊಗಳೇ ಬಿಡುವ ಸರ್ಕಾರದಿಂದಾಗಿ ರೈತರ ಆತ್ಮಹತ್ಯೆಗಳು ಅಧಿಕವಾಗಿವೆ ಎಂದ ಅವರು ರಾಜ್ಯದಲ್ಲಿ 7ತಾಸು ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ, ಆದರೆ ಇದರಲ್ಲಿ 10 ರಿಂದ 15 ಸಲ ವಿದ್ಯುತ್ ವ್ಯತ್ಯಯವಾಗುವ ಮೂಲಕ ರೈತರಿಗ ತೊಂದರೆಯಾಗುತ್ತಿದೆ. ಆದರೆ ಪಕ್ಕದ ಆಂದ್ರ ಪ್ರದೇಶದಲ್ಲಿ ದಿನಕ್ಕೆ 10 ತಾಸು ಹಾಗೂ ತೆಲಂಗಾಣದಲ್ಲಿ ದಿನಕ್ಕೆ 24 ತಾಸು ವಿದ್ಯುತ್ ಸರಬರಾಜು ಹಾಗೂ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ವಿತರಣೆಯಾಗುತ್ತಿದೆ ಆದರೆ ರಾಜ್ಯದಲ್ಲಿ ಕಳಪೆ ಗುಣಮಟ್ಟದ ಬೀಜಗಳನ್ನು ನೀಡಲಾಗುತ್ತಿದೆ ಎಂದರು
ಜು.21ರಂದು ಧಾರವಾಡ ಕಲಾಭವನದಲ್ಲಿ ರೈತರ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸಾಲಮನ್ನಾ, ಭೂ ಸುಧಾರಣೆ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು, ಜಿಂದಾಲ್ಗೆ ಭೂಮಿಯನ್ನು ಮಾರಾಟ ಮಾಡದೇ ಲೀಜ್ ಮುಂದುವರೆಸಬೇಕು ಹಾಗೂ ಬರಗಾಲ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆನ್ನುವ ಉದ್ದೇಶಗಳೊಂದಿಗೆ ರೈತರ ಸಮಾವೇಶವನ್ನು ನಡೆಸಲಾಗುವುದು
ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ರೈತ ಮುಖಂಡರಾದ ಕೆ.ಸುದರ್ಶನ, ಆದೋನಿ ರಂಗಪ್ಪ, ಕೊಟ್ಟೂರು ರಮೇಶ್, ಡಿ.ಮುರಾರಿ, ಇಮಾಮ್ಸಾಬ್, ಎ.ನಾಗರಾಜ, ಗಂಗಣ್ಣ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.