ಚೆನ್ನಗಿರಿಯ ಕಾಮಾಂಧನಿಗೆ ಉಗ್ರ ಶಿಕ್ಷೆಯಾಗಬೇಕು; ಗುಂಜಿಗಾಂವಿ
ಮಹಾಲಿಂಗಪುರ, 06: ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಮುಸ್ಲಿಂ ಜಿಹಾದಿ ಕಾಮಾಂಧ ಅಹ್ಮದ್ ಗೆ ಶೀಘ್ರ ಉಗ್ರ ಶಿಕ್ಷೆಯನ್ನು ವಿಧಿಸಬೇಕೆಂದು ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗುರುವಾರ ಜಿಲ್ ಬಿಸಿ ಅತಿಥಿ ಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇಡೀ ನಾಗರಿಕ ಸಮಾಜ ಬೆಚ್ಚಿಬೀಳುವ, ಮಹಿಳೆಯರ ಅದರಲ್ಲಿ ಬಾಲಕಿಯರ ಸುರಕ್ಷತೆ ಬಗ್ಗೆ ಅತ್ಯಂತ ಗಾಬರಿ ಹುಟ್ಟಿಸುವ ಪೈಶಾಚಿಕ ಕೃತ್ಯ ಮುಸ್ಲಿಂ ಜಿಹಾದಿ ಅಹ್ಮದ್ ಎನ್ನುವವನಿಂದ ನಡೆದಿರುವುದು ಖಂಡನೀಯ.
ಈ ಕೃತ್ಯವನ್ನು ಶ್ರೀರಾಮ ಸೇನೆ ಉಗ್ರವಾಗಿ ಖಂಡಿಸುತ್ತದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು ತಕ್ಷಣವೇ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕ್ಕೊಂಡು ಕಾನೂನು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ನಾವು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿ, ಶೋಷಣೆಗೆ ಒಳಗಾದವರಿಗೆ ಸರ್ಕಾರದಿಂದ ಪರಿಹಾರ, ವೈದ್ಯಕೀಯ ನೆರವು ಸಹ ಸಿಗುವಂತಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅನೀಲ್ ಕಿರಿಕಿರಿ, ಮಹಾಂತೇಶ ಗುಡೆಜಾಡರ್, ಮಹಾಲಿಂಗಪ್ಪ ಹೊಸಪೇಟೆ ಮತ್ತು ಗಂಗಾಧರ ಗುರವ, ಸಿದ್ದು ಖೋತ ಮತ್ತು ಚೇತನ ಬರಡೋಲ್ ಇದ್ದರು.