ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಮೀರಜ್ ಸಾಂಗಲಿ ಪ್ರಮುಖ ಆಸ್ಪತ್ರೆಯ ಮತ್ತು ವ್ಯಾಪಾರ ಕೇಂದ್ರವಾಗಿದೆ
ಸಂಬರಗಿ 6 : ಸಾಂಗಲಿ ಮೀರಜ ಗಡಿ ಭಾಗದ ಗ್ರಾಮಗಳ ಕೇಂದ್ರ ಬಿಂದು ಇದ್ದು ವಿವಿಧ ಕೆಲಸಗಳ ಹಾಗೂ ಆಸ್ಪತ್ರೆಗಳಿಗಾಗಿ ತೆರಳುತ್ತಾರೆ. ರಾತ್ರಿ ಮಿರಜ ಬಸ ನಿಲ್ದಾಣಕ್ಕೆ ಕರ್ನಾಟಕ ಬಸ್‌ಗಳು ವಸತಿ ಬಸ್ ಇಲ್ಲದ ಕಾರಣ ಬೆಳಿಗ್ಗೆ ಮಿರಜದಿಂದ ವಿಜಯಪೂರಗೆ ತೆರಳುವ ಪ್ರಯಾಣಿಕರ ಸಂಚಾರ ಸ್ಥಗಿತಗೊಂಡಿದೆ. ಈಶಾನ್ಯ ಹಾಗೂ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ವಸತಿ ಇರುವುದು ಬಂದ್ ಆಗಿರುವುದರಿಂದ ಬೆಳಗ್ಗೆ ಮಿರ್ಜೆಯಿಂದ ವಿಜಯಪುರ ಗುಲ್ಬರ್ಗಕ್ಕೆ ಯಾದಗಿರಿ ಹುಮನಾಬಾದ ತೆರಳುವ ವಾಹನಗಳು ಬಂದ್ ಆಗಿವೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಮೀರಜ್ ಸಾಂಗಲಿ ಪ್ರಮುಖ ಆಸ್ಪತ್ರೆಯ ಮತ್ತು ವ್ಯಾಪಾರ ಕೇಂದ್ರವಾಗಿದೆ, ವಿಶೇಷವಾಗಿ ಉತ್ತರ ಕರ್ನಾಟಕ ಕೃಷಿ ಉತ್ಪನ್ನ ಸಾಂಗಲಿಯಲ್ಲಿ ಮಾರಾಟ ಕೇಂದ್ರ ಹೊಂದಿದ್ದು ತನ್ನ ಸರಕುಗಳನ್ನು ಮಾರಾಟಕ್ಕೆ ಕಳುಹಿಸಿದ ನಂತರ ವರ್ತಕನು ತನ್ನ ಮಾರಾಟದ ಸರಕುಗಳ ಮೊತ್ತವನ್ನು ತರಲು ಬಸ್ಸಿನಲ್ಲಿ ಹೋಗಿ ಬೆಳಿಗ್ಗೆ 4ಗಂಟೆಯಿಂದ 8ರ ವರೆಗೆ ಕರ್ನಾಟಕಕ್ಕೆ ಬರಲು ಬಸ್ಸುಗಳಿಲ್ಲ. ಬದಲಾಗಿ ಕರ್ನಾಟಕದ ಕಾಗವಾಡ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್‌ಗಳು ರಾತ್ರಿ ವಸತಿ ಇರುತ್ತವೆ. ಮತ್ತು ಮೀರಜ್ ಬಸ್ ನಿಲ್ದಾಣದ ಕಾಮಗಾರಿಯಿಂದ ಹಾಗೂ ಸುರಕ್ಷತೆಯ ಕಾರಣ ಮುಂದು ಮಾಡಿ ಬಸ್‌ಗಳಿಗೆ ಸ್ಥಳಾವಕಾಶವಿಲ್ಲ ಎಂಬ ಕಾರಣದಿಂದ ಅವರು ಬೆಳಿಗ್ಗೆ ತಮ್ಮ ವೇಳಾಪಟ್ಟಿಯಂತೆ ಹೊರಡುತ್ತಿದ್ದಾರೆ ಕಲಬುರ್ಗಿ ರಾಯಚೂರು ಬಾಗಲಕೋಟ ಬಳ್ಳಾರಿ ವಿಜಯಪುರ ಯಾದಗಿರಿ ಕೋಪ್ಪಳ ಚಿಕ್ಕೋಡಿ ಬೆಳಗಾವಿ ಬಸ್‌ಗಳು ಕಾಗವಾಡ ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದಾರೆ. ಮಿರಜದಲ್ಲಿ ರಾತ್ರಿ ವೇಳೆ ಬಸ್ ನಿಲ್ಲಲು ಸ್ಥಳಾವಕಾಶವಿಲ್ಲ. ಬಸ್ಸಿಗೆ ಏನಾದರೂ ತೊಂದರೆಯಾದರೆ ನೀವೆ ಹೋಣೆಗಾರ ಎಂದು ನೋಟಿಸ್ ಮೂಲಕ ಅವರ ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪುಣೆ ಮುಂಬೈಯಿಂದ ರೈಲಿನಲ್ಲಿ ಮಿರಜಗೆ ಬರುವ ಪ್ರಯಾಣಿಕರು ಬೆಳಗಿನ ಜಾವ ನಾಲ್ಕು ಗಂಟೆಗೆ ಮೀರಜ್ ರೈಲ್ವೇ ಜಂಕ್ಷನ್‌ನಲ್ಲಿ ಇಳಿಯುತ್ತಾರೆ ಮೊದಲ ಬಸ್ 4:30 ಕ್ಕೆ ಕರ್ನಾಟಕಕ್ಕೆ ಹೋಗುವುದರಿಂದ ಬಿಜಾಪುರ ಗುಲ್ಬರ್ಗ ಅಥಣಿಗೆ ಹೋಗುವ ಪ್ರಯಾಣಿಕರು ಅನುಕೂಲಕರವಾಗಿತ್ತು. ಮಿರಾಜದಲ್ಲಿ ಸುರಕ್ಷತೆಯ ಕಾರಣ ಮುಂದೆ ಮಾಡಿ ಎಸ್.ಟಿ ಅಧಿಕಾರಿಗಳು ಹಾಗೂ ಪೋಲಿಸರು ಕರ್ನಾಟಕದ ಬಸ್ಸುಗಳಿಗೆ ಸ್ಥಳವಿಲ್ಲ ನಿಮ್ಮದೇ ಜವಾಬ್ದಾರಿಯಲ್ಲಿ ಇರಿ ಎಂದು ಭಯದ ವಾತಾರಣ ನಿರ್ಮಾಣ ಮಾಡಿದ ನಂತರ ಅದಕ್ಕೆ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಕಾಗವಾಡ ಬಸ್ ನಿಲ್ದಾಣದಿಂದ ಪ್ರತಿದಿನ 545 ಬಸ್‌ಗಳು ಹೊರಡುತ್ತವೆ ಅದರಲ್ಲಿ 300 ಬಸ್‌ಗಳು ಸಾಂಗಲಿ ಮೀರಜ್ ಕೊಲ್ಹಾಪುರ ರತ್ನಗಿರಿ ಸಿಂಧುದುರ್ಗ ಪುಣೆ ಮುಂಬೈ ಮಾರ್ಗದಲ್ಲಿ ಸಂಚರಿಸುತ್ತವೆ. ಮೀರಜ್ ಹೊರತುಪಡಿಸಿ ಮಹಾರಾಷ್ಟ್ರದ ಇತರ ಬಸ್ ನಿಲ್ದಾಣಗಳಲ್ಲಿ ಕರ್ನಾಟಕ ಬಸ್ ತಂಗಿರುವ ಬಗ್ಗೆ ಯಾವುದೇ ತೊಂದರೆ ಇಲ್ಲ ಅಥವಾ ರಾತ್ರಿ ವೇಳೆಯಲ್ಲಿ ವಸತಿ ಇದ್ದ ಬಸ್‌ಗಳನ್ನು ಮರಳಿ ಕಳುಹಿಸಿಲ್ಲ. ಆದರೆ ಕರ್ನಾಟಕದ ಬಸ್‌ಗಳಿಗೆ ಮೀರಜ್ ಬಸ್ ನಿಲ್ದಾಣದಲ್ಲಿ ಬಸ್‌ಗಳು ತಂಗುವುದನ್ನು ನಿಷೇಧಿಸಲಾಗಿದೆ ಆದರೆ ಮೀರಜ್ ಘಟಕದಲ್ಲಿ ಹೊಸದಾಗಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ನಿರ್ಮಾಣದಿಂದಾಗಿ ಸ್ಥಳದ ದೊಡ್ಡ ಸಮಸ್ಯೆ ಇದೆ, ಸ್ಥಳೀಯ ಡಿಪೋಗಳಲ್ಲಿ ರೈಲುಗಳನ್ನು ನಿಲುಗಡೆ ಮಾಡಲು ಸ್ಥಳವಿಲ್ಲ ಆದ್ದರಿಂದ ಡಿಪೋ ಹೊರಗಿನ ಡಿಪೋಗಳಲ್ಲಿ ಸುರಕ್ಷತೆಯ ಸಮಸ್ಯೆ ದೊಡ್ಡದಾಗಿ ಉಳಿಯುತ್ತದೆ. ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಘಟಕದ ಬಸ್‌ಗಳು ತಮ್ಮ ಘಟಕಕ್ಕೆ ರಾತ್ರಿ ಮರಳುತ್ತವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಯಂತ್ರಣ ಅಧಿಕಾರಿ ಮಿರಜ ಶಿವಶಂಕರ ತೊರವಿ ಇವರನ್ನು ಸಂಪರ್ಕಿಸಿದಾಗ ಸ್ಥಳಿಯ ಘಟಕದಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿದ್ದ ಕಾರಣ ಹೊಸದಾಗಿ ಬಸ್ ಘಟಕದ ಕಟ್ಟಡ ಪ್ರಾರಂಭ ಇದ್ದ ಕಾರಣ ಜಾಗದ ಅಭಾವ ಇದೆ. ರಾತ್ರಿ ವೇಳೆಯಲ್ಲಿ ಎಲ್ಲ ಬಸ್‌ಗಳು ಸುರಕ್ಷತೆಯನ್ನು ನೀಡಲು ಅಸಾಧ್ಯ ಇದ್ದು ಬಸ್ ಡಿಪೋ ಕಟ್ಟಡ ಮುಕ್ತಾಯಗೊಳ್ಳುವ ವರೆಗೆ ರಾತ್ರಿ ವಾಸಿಸುವ ಬಸ್‌ಗಳು ಮರಳಿ ಕಾಗವಾಡ ಬಸ್‌ನಿಲ್ದಾಣಕ್ಕೆ ಹೋಗಬೇಕೆಂದು ಪತ್ರದ ಮುಖಾಂತರ ತಿಳಿಸಿದ್ದಾರೆ. ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗ ನಿಯಂತ್ರಕರಾದ ಶಶಿಧರ ಮಠದ ಇವರನ್ನು ಸಂಪರ್ಕಿಸಿದಾಗ ಕಳೆದ ತಿಂಗಳಗಳಲ್ಲಿ ಎರಡು ರಾಜ್ಯದ ಬಸ್‌ಗಳು ಆದರೆ ಸದ್ಯದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ನಾನು ಪರೀಶೀಲಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೆ ಸಾಂಗಲಿ ಡಿ.ಟಿ.ಓ ಇವರನ್ನು ಸಂಪರ್ಕ ಮಾಡಲಾಗಿದ್ದು ಮಿರಜ ಘಟಕಕ್ಕೆ ಪರೀಶೀಲಣೆ ಮಾಡಲು ಚಿಕ್ಕೋಡಿ ವಿಶೇಷ ಅಧಿಕಾರಿ ನೇಮಕ ಮಾಡಲಾಗುವುದು.