ಹಿಂದೂ-ಮುಸ್ಲಿ ಭಾವೈಕ್ಯತೆ ಸಾರುವ ಕಡ್ಲೇವಾಡದ ಚಿರಾಕಿ ನಸರೋದ್ದಿನರ ಹಬ್ಬ
ದೇವರಹಿಪ್ಪರಗಿ 26: ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ್ದ ಶರಣರ ನಾಡಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯದ ಸಂಕೇತವಾದ ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಚಿರಾಕಿ ನಸರೋದ್ದಿನ ಜಾತ್ರಾ ಮಹೋತ್ಸವ. ಸುಮಾರು ಮೂರು ದಿನಗಳ ಕಾಲ ಹಿಂದೂ ಮುಸ್ಲಿಂ ಭೇದಭಾವ ಇಲ್ಲದ, ಶತಮಾನಗಳಿಂದ ವಿಜೃಂಭಣೆಯಿಂದ ಅದ್ದೂರಿಯಾಗಿ ಜಾತ್ರೆ ಆಚರಿಸುತ್ತಾರೆ ಹಾಗೂ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಜಿಲ್ಲೆಯಿಂದಷ್ಟೇ ಅಲ್ಲದೇ ರಾಜ್ಯದ ಮೂಲೇ ಮೂಲೇಯಿಂದ ಹಾಗೂ ಇತರ ಮಹಾರಾಷ್ಟ್ರ,ಗೋವಾ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಮರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಜಾತ್ರಾ ಮಹೋತ್ಸವದ ಉತ್ಸವ ಕಮಿಟಿ ಅಧ್ಯಕ್ಷರಾದ ಸೋಮನಗೌಡ ಪಾಟೀಲ ಮುಖಂಡರಾದ ಸಾಯಿಕುಮಾರ ಬಿಸನಾಳ ಹಾಗೂ ಜಾತ್ರಾ ಸಮಿತಿಯ ಸರ್ವ ಸದಸ್ಯರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿವರ್ಷದಂತೆ ಈ ವರ್ಷವೂ ದಿ.27.03.2025 ಗುರುವಾರದಂದು ಸಾಯಂಕಾಲ 5:00 ಗಂಟೆಗೆ ಕುದುರೆ ಕುಣಿತ,ಗಂಧ ಗೌಡರ ಹಾಗೂ ಊರಿನ ಪ್ರಮುಖರು ಸೇರಿ ಗದ್ದುಗೆಗೆ ಗಂಧ ಏರಿಸುವುದು ಹಾಗೂ ರಾತ್ರಿ ರಂಗು ರಂಗಿನ ಮತ್ತು ಸುಡುವ ಕಾರ್ಯಕ್ರಮ ನೆರವೇರಲಿದೆ. ಶುಕ್ರವಾರ ದಿ.28.03.2025 ರಂದು ಬೆಳಗ್ಗೆ 9 ಗಂಟೆಗೆ ನೈವೇದ್ಯ ದೇವರ ದರ್ಶನ (ಉರುಸ್) ಹಾಗೂ ಗೀ ಗೀ ಪದಗಳು ಜರುಗುವುದು. ಶನಿವಾರ ದಿ.29.03.2025 ರಂದು ಮಧ್ಯಾಹ್ನ 12 ಗಂಟೆಗೆ ಭಾರ ಎತ್ತುವ ಕಾರ್ಯಕ್ರಮ, 3:00ಗಂಟೆಗೆ ಜಂಗಿ ಕುಸ್ತಿ ಹಾಗೂ ರಾತ್ರಿ 10 ಗಂಟೆಗೆ ಜಮಖಂಡಿ ತಾಲೂಕಿನ ಕುಲ್ಲಹಳ್ಳಿಯ ಶ್ರೀ ಶಿವಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ "ಸತಿ ಸಂಸಾರದ ಜ್ಯೋತಿ ಅರ್ಥಾತ ಬಂಗಾರದ ಹೆಂಡತಿ"ಸುಂದರ ಸಾಮಾಜಿಕ ನಾಟಕ ನೋಡಲು ಸುತ್ತಮುತ್ತಲಿನ ಗ್ರಾಮದಿಂದ ಬರುತ್ತಾರೆ.ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಚಿರಾಕಿ ನಸರೋದ್ದಿನ ಅವರ ಸ್ಮರಣೆಯಲ್ಲೇ ಪ್ರತಿ ವರ್ಷ ಜಾತ್ರೆ ನೆರವೇರುತ್ತದೆ. ರಾಜ್ಯ, ಮಹಾರಾಷ್ಟ್ರ ಮತ್ತು ಗೋವಾ ಗಳಿಂದ ಸಾವಿರಾರು ಜನ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಭೇಟಿ ನೀಡಿ ಭಕ್ತಿ ಸಮರ್ಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಜಿಸಿ, ಪ್ರಾರ್ಥಿಸಿ ನಮಿಸುತ್ತಾರೆ. ಇಲ್ಲಿ ಹಿಂದುಗಳು ಮುಸ್ಲಿಮರು ಅಪರೂಪದ ಭಾವೈಕ್ಯತೆಯ ತಾಣಗಳಲ್ಲಿ ಒಂದಾಗಿದೆ. ಭಕ್ತರಿಗೆ ಕಂಡ ಕನಸು, ಉಂಡ ಊಟ ಹೇಳುವ, ಉಸುಕು ತೆಗೆದು ಸಕ್ಕರೆ ಮಾಡಿದ್ದು ಹಾಗೂ ನೀರು ಹಾಕಿ ದೀಪ ಹಚ್ಚಿದ್ದು ಹೀಗೆ ಹಲವಾರು ಪವಾಡಗಳನ್ನು ಮಾಡಿ ಭಕ್ತರ ಪಾಲಿನ ಆರಾಧ್ಯ ದೈವವಾಗಿ ದ್ದಾರೆ. ದೇವರಹಿಪ್ಪರಗಿ ಪಟ್ಟಣದಿಂದ ಇಂಡಿ ಮಾರ್ಗವಾಗಿ ಹೋಗುವ ಮಧ್ಯೆ ಹಲವಾರು ಬಸ್ ಸಂಚಾರದ ವ್ಯವಸ್ಥೆ ಇದೆ ಎಂದು ಉತ್ಸವ ಕಮಿಟಿಯ ಪದಾಧಿಕಾರಿಗಳು ತಿಳಿಸಿದ್ದಾರೆ.